ವಿಲಿಯಂ ಶೇಕ್ಸ್‌ಪಿಯರ್ ಅವರ 461ನೇ ಜನ್ಮ ವಾರ್ಷಿಕೋತ್ಸವ: ಪದ್ಯ ವಾಚನ ಸ್ಪರ್ಧೆ

William Shakespeare's 461st Birth Anniversary: ​​Poetry Recitation Competition

ಧಾರವಾಡ 22: ವಿಲಿಯಂ ಶೇಕ್ಸ್‌ಪಿಯರ್ ಅವರ 461ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ  ದಿನಾಂಕ ಏಪ್ರಿಲ್ 23, 2025 ರಂದು ಬೆಳಿಗ್ಗೆ 10:30 ಗಂಟೆಗೆ  ಕೆ ಇ ಬೋರ್ಡ್‌ನ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಐಕ್ಯೂಎಸಿ (ಋಂಅ) ಮತ್ತು ಆಂಗ್ಲ ಭಾಷಾ ವಿಭಾಗ ಕಾಲೇಜಿನ ಸಭಾಂಗಣದಲ್ಲಿ ಅಂತರ-ಕಾಲೇಜು ಆಂಗ್ಲ ಪದ್ಯ ವಾಚನ ಸ್ಪರ್ಧೆಯನ್ನು ಆಯೋಜಿಸಲಿದೆ.  

ಭಾಗವಹಿಸುವಿಕೆ ಉಚಿತವಾಗಿದ್ದು, ಪ್ರತಿ ಕಾಲೇಜಿನಿಂದ ಗರಿಷ್ಠ ಇಬ್ಬರು ವಿದ್ಯಾರ್ಥಿಗಳಿಗೆ ಅವಕಾಶವಿದೆ. ಮೊದಲ ಮೂರು ವಿಜೇತರಿಗೆ ಕ್ರಮವಾಗಿ ರೂ.1000/-, ರೂ.750/-, ಮತ್ತು ರೂ.500/- ನಗದು ಬಹುಮಾನಗಳನ್ನು ನೀಡಲಾಗುವುದು ಹಾಗೂ ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರಗಳನ್ನು ನೀಡಲಾಗುವುದು.  

ಸ್ಪರ್ಧಿಗಳು ಕಾಲೇಜು ಸಮವಸ್ತ್ರ ಧರಿಸಿರಬೇಕು, ಗುರುತಿನ ಚೀಟಿ ಹೊಂದಿರಬೇಕು ಮತ್ತು ತಮ್ಮ ಸಂಸ್ಥೆಯಿಂದ ಅನುಮತಿ ಪತ್ರವನ್ನು ತರಬೇಕು. ಪ್ರತಿ ಸ್ಪರ್ಧಿಗೆ ಪದ್ಯ ವಾಚನ ಮಾಡಲು 5-7 ನಿಮಿಷಗಳ ಕಾಲಾವಕಾಶ ನೀಡಲಾಗುವುದು ಮತ್ತು ವಾಚಿಸುವ ಪದ್ಯದ ಪ್ರತಿಯನ್ನು ಮುಂಚಿತವಾಗಿ ಸಲ್ಲಿಸಬೇಕು. ಯಾವುದೇ ಪ್ರಯಾಣ ಅಥವಾ ದಿನಭತ್ಯೆ ನೀಡಲಾಗುವುದಿಲ್ಲ. ತೀರ​‍್ುಗಾರರ ನಿರ್ಣಯವೇ ಅಂತಿಮವಾಗಿರುತ್ತದೆ.