ವರದಕ್ಷಿಣೆ ಕಿರುಕುಳಕ್ಕೆ ಪತ್ನಿ ನೇಣಿಗೆ ಶರಣು : ಪ್ರಕರಣ ದಾಖಲು
Wife hangs herself for dowry harassment: Case registered
ಲೋಕದರ್ಶನ ವರದಿ
ಕಂಪ್ಲಿ 19: ವರದಕ್ಷಿಣೆ ಕಿರುಕುಳ ಮತ್ತು ಮಾನಸಿಕವಾಗಿ ಮನನೊಂದು ಪತ್ನಿ ನೇಣಿಗೆ ಶರಣಾದ ಧಾರುಣ ಘಟನೆ ಕಂಪ್ಲಿ ಪಟ್ಟಣದಲ್ಲಿ ನಡೆದಿದೆ. ಇಲ್ಲಿನ ನಡುವಲ ಮಸೀದಿ ಬಳಿಯಲ್ಲಿರುವ ತವರು ಮನೆಯಲ್ಲಿ ಐಶ್ವರ್ಯ(24) ಮೃತಪಟ್ಟ ದುರ್ಧೈವಿ. ಈ ಹಿಂದೆ ಸಿರಿಗೇರಿಯ ಪ್ರದೀಪ್ ಕುಮಾರ ಎಂಬ ನಿವಾಸಿಯನ್ನು ಕಂಪ್ಲಿಯ ಐಶ್ವರ್ಯ ರಿಜಿಸ್ಟರ್ ಮದುವೆಯಾಗಿದ್ದಳು. ನಂತರ ಕುರುಗೋಡು ಪಟ್ಟಣದಲ್ಲಿ ದಾಂಪತ್ಯ ಜೀವನ ನಡೆಸುತ್ತಾ ಬಂದಿದ್ದಾರೆ. ಇದೇ ಮೇ.14ರಂದು ಐಶ್ವರ್ಯಳನ್ನು ಪತಿರಾಯ ಮನೆ ಹೊರಗಡೆಯಲ್ಲಿ ಬಿಟ್ಟು ಕುರುಗೋಡಿಗೆ ಮರಳಿದ್ದಾನೆ. ಮೇ.17ರಂದು ಮಧ್ಯಾಹ್ನ 13:30ರಿಂದ 3ಗಂಟೆ ಒಳಗೆ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣು ಹಾಕಿಕೊಂಡು ಜೀವ ಬಿಟ್ಟಿದ್ದಾಳೆ. ಮೃತ ಐಶ್ವರ್ಯ ತಂದೆ ಚಂದ್ರಮೌಳಿ ಇವರು ವರದಕ್ಷಿಣೆ ಕಿರುಕುಳದಡಿಯಲ್ಲಿ ದೂರು ನೀಡಿದ್ದಾರೆ. ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತೋರಣಗಲ್ಲು ಉಪ ವಿಭಾಗದ ಡಿವೈಎಸ್ಪಿ ಪ್ರಸಾದ್ ಗೋಖುಲೆ ಇವರು ತನಿಖೆ ಕೈಗೊಂಡಿದ್ದಾರೆ. ಸಂಜೆ ಶವ ಸಂಸ್ಕಾರ ನಡೆದಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 