ಗಾಂಧಿಯನ್ನು ನಿಜವಾಗಿ ಕೊಂದವರು ಯಾರು

ಅಕಸ್ಮಾತ್ ಇಂದು ನನ್ನ ಕೈಸೇರಿದ ಈ ಪುಸ್ತಕವನ್ನು ಓದುತ್ತ ಅಕ್ಷರಶಃ ನಾನು ಗಾಬರಿಯಾದೆ. 2014 ರಲ್ಲೇ ಮೊದಲ ಬಾರಿ ಪ್ರಕಟವಾದ ಈ ಪುಸ್ತಕ ಈಗಾಗಲೇ ಏಳು ಆವೃತ್ತಿ ಕಂಡಿದೆ. ಇದನ್ನು ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಪ್ರಕಟಿಸಿದೆ.   

ಭಾರತದ ಇತಿಹಾಸದ ಬಹ್ವಂಶ ಸುಳ್ಳುಗಳಿಂದಲೇ ತುಂಬಿದ್ದುದೇನೂ ಸುಳ್ಳಲ್ಲ. ಗಾಂಧಿ ನೆಹರೂ ಅಂಥವರ ವರ್ಚಸ್ಸು ಹೆಚ್ಚಾಗಲು ಆ ಬಗೆಯ ಅನೃತ ಇತಿಹಾಸವೇ ಕಾರಣವಾಗಿದೆಯೆಂಬ ಅಂಶ ಈಚೆಗೆ ಹೊರಬರತೊಡಗಿದ್ದು ಬಹಳಷ್ಟು ಜನರಿಗೆ ಅದರಿಂದ ಕಸಿವಿಸಿಯಾಗತೊಡಗಿದೆ. ಏಕೆಂದರೆ ಅವರು ನಂಬಿಕೊಂಡು ಬಂದ ಸತ್ಯಗಳೇ ಬೇರೆ. ವಾಸ್ತವಾಂಶಗಳೇ ಬೇರೆ. ಬಹಳಷ್ಟನ್ನು ಹಾಗೆ ನಂಬಿಕೊಂಡು ಬಂದವರಲ್ಲಿ ನಾನೂ ಒಬ್ಬ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ. ಒಂದೇ ಮಗ್ಗುಲಲ್ಲಿ ಯೋಚಿಸುವ ಅಭ್ಯಾಸ ಬೆಳೆಸಿಕೊಂಡವರಿಗೆ ಮತ್ತು ಕೆಲವರ ಬಗ್ಗೆ ಕುರುಡು ಅಭಿಮಾನ ಬೆಳೆಸಿಕೊಂಡು ಬೇರೆ ವಿಚಾರಗಳನ್ನೇ ಸ್ವೀಕರಿಸಲಾರದ ಮನೋಭಾವ ಬೆಳೆಸಿಕೊಂಡವರಿಗೆ ಸತ್ಯವನ್ನು ಸ್ವೀಕರಿಸುವ ಅಥವಾ ಒಪ್ಪಿಕೊಳ್ಳುವ ಎದೆಗಾರಿಕೆ ಇರುವದಿಲ್ಲ. ಮನಸ್ಸು ಆ ರೀತಿ ಒಂದೇ ಕಡೆ ಅಂಟಿಕೊಂಡಿರುತ್ತದೆ. ನಾವು ನಂಬಿದ್ದಷ್ಟೇ ಸತ್ಯ ಎಂದುಕೊಳ್ಳುವದು ನಮ್ಮ ವಿಚಾರದ ಜಗತ್ತನ್ನು ಸಂಕುಚಿತಗೊಳಿಸುತ್ತದೆ. ನಮ್ಮ ನಂಬಿಕೆಗೆ ವಿರುದ್ಧವಾಗಿರುವುದರಲ್ಲೂ ಕೆಲವೊಮ್ಮೆ ಸತ್ಯ ಅಡಗಿರುತ್ತದೆನ್ನುವ ಸತ್ಯವನ್ನು ನಾವು ತಿಳಿದುಕೊಂಡಿರಬೇಕಾಗುತ್ತದೆ.   

ಪ್ರೊ. ಕೆ. ಎಸ್‌. ನಾರಾಯಣಾಚಾರ್ಯರು ಘನ ವಿದ್ವಾಂಸರು, ಬಹು ಆಳ ಅಧ್ಯಯನ ಉಳ್ಳವರು. ಅವರು ಈ ಪುಸ್ತಕ ಬರೆದಿದ್ದಾರೆಂಬ ಕುತೂಹಲಕ್ಕೆ ನಾನಿದನ್ನು ಕೈಗೆತ್ತಿಕೊಂಡೆ. ಓದುತ್ತ ಓದುತ್ತ  ಇದು ನನ್ನ ಪೂರ್ವಸಿದ್ಧಾಂತಗಳ ಕುರಿತಾಗಿ ನಾನೇ ಮರು ಆಲೋಚನೆ ಮಾಡಲು ಹಚ್ಚಿದ್ದು ನಿಜ. ಇದನ್ನು ಯಾರೇ ಆಗಲಿ , ಒಪ್ಪುವದು ಬಿಡುವದು ಬೇರೆ. ಆದರೆ ಕೆಲವೊಂದು ವಿಚಾರಗಳಲ್ಲಿ ಇದು ಮರುಚಿಂತನೆಗೆ ತೊಡಗಿಸುತ್ತದಾದ್ದರಿಂದ ಎಲ್ಲರೂ ಇದನ್ನು ಓದಬೇಕು. ಇದರ ಕೆಲವು ಅಂಶಗಳನ್ನು ನಾನು ಪ್ರತ್ಯೇಕ ಹಾಕಬೇಕೆಂದಿದ್ದೇನೆ. ಅದು ಈ ಪುಸ್ತಕ ಓದುವ ಕುತೂಹಲವನ್ನು ಹುಟ್ಟಿಸಬಹುದೆಂದುಕೊಂಡಿದ್ದೇನೆ. (ಈಗಾಗಲೇ ಈ ಕೃತಿ ಓದಿದವರನ್ನು ಬಿಟ್ಟು ಇತರರಿಗಾಗಿ).  


ಗಾಂಧೀಜಿ ಯಾಕೆ ಮುಸ್ಲಿಂ ಪರ ಅತಿಯಾದ ಒಲವು ಹೊಂದಿದ್ದರು?  

ಈ ಪ್ರಶ್ನೆ ಸಹಜ. ಅವರ ಮುಸ್ಲಿಂ ಒಲವಿನ ವಿಚಾರ ಹಿಂದೆ ಸಾಕಷ್ಟು ಸಲ ಬಂದಿದೆ ಮತ್ತು ಅದು ಅತ್ಯಂತ ಸ್ಪಷ್ಟವೂ ಹೌದು. ಅಂತಹ ಒಲವಿನ ಹಲವು ಸಂದರ್ಭಗಳು ಕಂಡುಬಂದಿವೆ. ಅದಕ್ಕೆ ಕಾರಣಗಳೇನಿರಬಹುದು ಎನ್ನುವ ಕುರಿತು ಪ್ರೊ. ಕೆ. ಎಸ್‌. ನಾರಾಯಣಾಚಾರ್ಯ ಅವರು ಈ ಪುಸ್ತಕದಲ್ಲಿ ಕೆಲವೊಂದು ಸುಳಿವುಗಳನ್ನು ನೀಡಿದ್ದಾರೆ. ನೆಹರೂ, ಇಂದಿರಾ ಕುಟುಂಬ ಮೂಲತ: ಮುಸ್ಲಿಂ ಸಮುದಾಯಕ್ಕೆ ಸೇರಿದ್ದೆನ್ನುವದು ಎಲ್ಲರಿಗೂ ಗೊತ್ತಿದೆ. ಆದರೆ ಗಾಂಧೀಜಿಯವರ ಜಾತಿ ಮೂಲ ಪ್ರಸ್ತಾಪವಾದದ್ದು ಕಡಿಮೆ. ನಾರಾಯಣಾಚಾರ್ಯರು ಹಾಗೆಲ್ಲ ಹೊಣೆಗೇಡಿತನದಿಂದ, ಹುಡುಗಾಟಕ್ಕಾಗಿ ಬರೆಯುವವರಲ್ಲ. ಅವರಿಗೆ ಯಾವ ರಾಜಕೀಯ ಲಾಭದ ವಿಚಾರವೂ ಇರಲಿಲ್ಲ. ಆದ್ದರಿಂದ ಅವರ ವಿಚಾರವನ್ನು ನಾವು ಪೂರ್ತಿ ಅಲಕ್ಷಿಸಲೂ ಬರುವದಿಲ್ಲ. ಅವರು ಕೊಡುವ ಕಾರಣಗಳನ್ನಷ್ಟೆ ಇಲ್ಲಿ ಗಮನಿಸೋಣ.   

1) ಮೋಹನದಾಸ ಗಾಂಧಿ ಅವರ ತಂದೆ ಕರಮಚಂದ  ಗಾಂಧಿಯ ನಾಲ್ಕನೆಯ ಪತ್ನಿಯ ಮಗ. ಪುಥಳೀಬಾಯಿ ಮೂಲತಃ ಪ್ರಣಾಮಿ ಪಂಥಕ್ಕೆ ಸೇರಿದವಳು. ಈ ಪ್ರಣಾಮಿ ಪಂಥ ಮುಸ್ಲಿಂ ಮತ್ತು ಹಿಂದೂ ಎರಡೂ ಧರ್ಮಗಳ ಅಂಶಗಳನ್ನು ಸೇರಿಸಿಕೊಂಡಿದ್ದು. ವಿಗ್ರಹ ಪೂಜಾ ವಿರೋಧಿ. ಹಿಂದೂ ಸೋಗಿನ ಇಸ್ಲಾಂ ಸಂಸ್ಥೆ.  

2) ಘೋಷ್ ಎಂಬವರು ಬರೆದ "ದಿ ಕುರಾನ್ ಆ್ಯಂಡ್ ದಿ ಕಾಫಿರ್" ಗ್ರಂಥದಲ್ಲಿಯೂ ಗಾಂಧಿ ಜನನ ಮೂಲದ ಉಲ್ಲೇಖವಿದೆ. ಗಾಂಧಿಯ ತಂದೆ ಕರಮಚಂದ್ ಒಬ್ಬ ಮುಸ್ಲಿಂ ಜಮೀನುದಾರನ ಕೈಕೆಳಗೆ ಕೆಲಸ ಮಾಡುತ್ತಿದ್ದ. ಒಮ್ಮೆ ಕರಮಚಂದ್ ಅವರ ಮನೆಯಿಂದ ಹಣ ಕದ್ದು ಪರಾರಿಯಾದ. ಆಗ ಆ ಮುಸ್ಲಿಂ ಜಮೀನುದಾರ ಕರಮಚಂದನ ನಾಲ್ಕನೇ ಪತ್ನಿಯನ್ನು ತನ್ನ ಮನೆಗೆ ಕರೆದೊಯ್ದು ಸ್ವೀಕರಿಸಿದ. ಮೂರು ವರ್ಷ ಕರಮಚಂದ ತಲೆಮರೆಸಿಕೊಂಡಿದ್ದ. ಮೋಹನದಾಸ ಜನನವಾದದ್ದು ಆಗ.   

3). ಗಾಂಧೀಜಿ ಹುಟ್ಟಿ ಬೆಳೆದದ್ದು ಗುಜರಾಥಿ ಮುಸ್ಲಿಮರ ನಡುವೆ.   

4). ಅವರ ಶಾಲೆ ಕಾಲೇಜು (ಲಂಡನ್ ಲಾ ಕಾಲೆಜಿನವರೆಗೆ ಶಿಕ್ಷಣದ ಎಲ್ಲ ವೆಚ್ಚ ನಿರ್ವಹಿಸಿದ್ದು ಅವರ ಮುಸ್ಲಿಂ ಪಾಲಕರು.  

5). ದಕ್ಷಿಣ ಆಫ್ರಿಕೆಯಲ್ಲಿ ಇವರ ವಕೀಲಿಕೆ ವಹಿವಾಟು ನೆಲೆ ನಿಲ್ಲಿಸಿದವರೂ ಮುಸ್ಲಿಮರು.  

6). ಲಂಡನ್ನಿನಲ್ಲಿ ಗಾಂಧೀಜಿ ಅಂಜುಮನ್ ಎ ಇಸ್ಲಾಮಿಯಾ ಸಂಘಟನೆಯ ಪಾಲುದಾರರಾಗಿದ್ದರು. ಇದೇ ಮುಂದೆ ಮುಸ್ಲಿಂ ಲೀಗ್ ಆಗಿದ್ದು.  

ಆದ್ದರಿಂದ ಗಾಂಧೀಜಿಗೆ ಮುಸ್ಲಿಂ ಪರ ಒಲವು ಇದ್ದರೆ ಆಶ್ಚರ್ಯವೇನಿಲ್ಲ. ತಪ್ಪೂ ಅಲ್ಲ. ಅವರ ಕೊನೆತನಕದ ನಿಲುವು ಹೇಗಿತ್ತೆಂದರೆ "ಹಿಂದೂಗಳನ್ನು ಮುಸ್ಲಿಮರು ಕೊಂದರೂ ಸುಮ್ಮನಿರಿ. ಅವರ ಮೇಲೆ ಕೋಪಗೊಳ್ಳಬೇಡಿ. ನಾವು ಸಾವಿಗೆ ಹೆದರಬಾರದು. ವೀರಮರಣ ಪಡೆಯೋಣ"  

ಅಂದರೇನರ್ಥ? ಈ ಬಗೆಯ ನಿಲುವನ್ನು ಹಿಂದುಗಳು ಸಹಿಸಿಕೊಳ್ಳಬೇಕೆಂದು ಅಪೇಕ್ಷಿಸುವವರಿಗೆ ಏನನ್ನೋಣ? ಸ್ವಾತಂತ್ರ್ಯ ಹೋರಾಟದ ಯಾವ ಸಂದರ್ಭದಲ್ಲು ಗಾಂದೀಜಿ ಹಿಂದುಪರ ನಿಲುವು ತಳೆಯಲಿಲ್ಲ. ಮುಸ್ಲಿಂ ಪರವಾಗಿಯೆ ಮಾತಾಡುತ್ತ ಹೋದರು. ಅಷ್ಟೇ ಅಲ್ಲ ಹಿಂದುಗಳ ಹತ್ಯೆ ಆದಾಗೆಲ್ಲ ಅದನ್ನು ಎಂದೂ ವಿರೋಧಿಸಲಿಲ್ಲ. ಸ್ವಾಮಿ ಶ್ರದ್ಧಾನಂದರ ಕೊಲೆ ಇದಕ್ಕೆ ಉತ್ತಮ ಉದಾಹರಣೆ. ಕೊಲೆ ಮಾಡಿದ ರಶೀದನನ್ನು ಗಾಂಧೀಜಿ ಖಂಡಿಸಲಿಲ್ಲ. ಬದಲಿಗೆ ಹಿಂದುಗಳಿಗೆ ಉಪದೇಶ ಮಾಡಿದರು. ಮುಂದೆ ಇದೇ ಕೊಲೆಗಾರ ರಶೀದನ ಪರ ವಕೀಲಿ ಮಾಡಿದ ಅಸೀಫ ಅಲಿಯನ್ನು ನೆಹರೂ ಅಮೆರಿಕೆಗೆ ಭಾರತದ ರಾಯಭಾರಿಯನ್ನಾಗಿ ಮಾಡಿದರು. ಅಂದರೆ ಅರ್ಥ ಮಾಡಿಕೊಳ್ಳಿ ಈ ಎಲ್ಲ ಸಂಬಂಧಗಳನ್ನು. ಗಾಂಧಿಯನ್ನು ಸಮರ್ಥಿಸಿಕೊಳ್ಳುವವರೆಲ್ಲ ಈ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾಗುತ್ತದಲ್ಲವೆ?  

ಭಗತಸಿಂಗ್ ಮತ್ತಿತರ ದೇಶ ಭಕ್ತರನ್ನು ನೇಣಿಗೇರಿಸುವ ಸಂದರ್ಭದಲ್ಲೂ ಗಾಂಧಿ ಇದೇ ನಿಲುವನ್ನು ತಾಳಿದರು. ಗಲ್ಲಿಗೇರಿಸಬಾರದೆಂಬ ಮನವಿಗೆ ಸಹಿ ಹಾಕಲು ಗಾಂಧೀಜಿ ನಿರಾಕರಿಸಿದರು. ಯಾಕೆ? ಈ ಭಾರತೀಯರಿಗಿಂತ ಅವರಿಗೆ ಬ್ರಿಟಿಷರೇ ಮುಖ್ಯರೆನಿಸಿದರೇ? ಈ ಸಂಶಯ ಸಹಜ ತಾನೆ. ಇಂತಹ ಅವರ ನಿಲುವನ್ನು ಡಾ. ಆನಿ ಬೆಸೆಂಟರೇ ಖಂಡಿಸಿದ್ದರೆಂಬುದನ್ನು ನಾವು ಗಮನಿಸಬೇಕು.  

ಮೌಂಟ್ ಬ್ಯಾಟನ್ ಒಂದು ಕಡೆ ಗಾಂಧೀಜಿ ಬಗ್ಗೆ ಹೇಳುತ್ತಾರೆ - ಈತ ವ್ಯಾವಹಾರಿಕ ಬುದ್ದಿ/ ನಡವಳಿಕೆಯವನಲ್ಲ. ಇಡೀ ಭಾರತ ವನ್ನೇ ಜಿನ್ನಾಸಾಹೇಬರಿಗೆ ಒಪ್ಪಿಸಲು ಇವರು ಮಾಡಿದ ತಿಳಿಗೇಡಿತನದ ಯೋಜನೆ ನೋಡಿ".  

ಇದೇ ಗಾಂಧೀಜಿ ಜಿನ್ನಾಗೆ ಹೇಳಿದ್ದರು “ಅಖಂಡ ಭಾರತಕ್ಕೆ ನೀವೇ ಪ್ರಧಾನಿಯಾಗಿಬಿಡಿ”. ಆದರೆ ಇದು ನೆಹರೂಗೆ ಇಷ್ಟವಿರಲಿಲ್ಲ. ಸ್ವಾತಂತ್ರ್ಯ ಸಿಗುವತನಕ ಗಾಂಧಿ ಶಿಷ್ಯರಾಗಿದ್ದ ನೆಹರೂಗೆ ಈಗ ಗಾಂಧೀಜಿಯ ಅಗತ್ಯವಿರಲಿಲ್ಲ. ಕಾಂಗ್ರೆಸ್ ಸಂಸ್ಥೆಯ ಕೆಲಸ ಮುಗಿಯಿತು. ಅದನ್ನು ವಿಸರ್ಜಿಸಿ ಎಂದು ಗಾಂಧೀ ಹೇಳಿದ್ದಕ್ಕೆ ನೆಹರೂ ಅಸಮ್ಮತಿಯಿತ್ತು.   

ಮುಂದೆ ಗಾಂಧಿ ಹತ್ಯೆಯಾಯಿತು.  


ಆದರೆ ಯಾರು ಕೊಂದರು ನಿಜವಾಗಿಯೂ? ಅದು ಚರ್ಚಾರ್ಹ ಮತ್ತು ವಿವಾದಾತ್ಮಕ ವಿಷಯ./ವಿಚಾರಣೆಯೆಂಬ ಪ್ರಹಸನ ಯಾಕೆ?/ಗೋಡ್ಸೆ ಹಿಂದೆ ಬಂದು ಗುಂಡು ಹಾರಿಸಿದ್ಯಾರು? / ಇದರ ಹಿಂದೆ ಇದ್ದ ಆ ಮಹಾನಾಯಕ ಯಾರು?  

ಈ ಪ್ರಶ್ನೆ ಬಹಳ ಕಾಲದಿಂದ ಕೇಳಿಬರುತ್ತಲೇ ಇದೆ. ಇದಕ್ಕೆ ಹಿನ್ನೆಲೆಯಾಗಿ ಕೆಲವು ವಿಷಯಗಳನ್ನು ಪರಾಮರ್ಶಿಸಬೇಕಾಗುತ್ತದೆ. ನಾನೇ ಗಾಂಧೀಜಿಯನ್ನು ಕೊಂದೆ ಎಂದು ಸ್ವತಃ ಗೋಡ್ಸೆಯೇ ಹೇಳಿಕೆ ನೀಡಿರುವಾಗ ಆ ಬಗ್ಗೆ ಮತ್ತೆ ಪ್ರಶ್ನೆ ಮಾಡುವದೇನಿದೆ ಎಂಬುದು ಕೆಲವರ ವಾದ. ಆ ವಾದ ಅರ್ಧಸತ್ಯ ಮಾತ್ರ. ಏಕೆಂದರೆ ಅದರಲ್ಲಿ ಹಲವು ಬಗೆಯ ಸಂದೇಹಗಳು ಹೊಗೆಯಾಡುತ್ತಲೇಇವೆ. ಮುಖ್ಯವಾಗಿ ಗಾಂಧೀ ಹತ್ಯೆಯ ವಿಚಾರಣೆಯೆಂಬ ನಾಟಕ. ಮೊದಲು ಆ ನಾಟಕ ಹೇಗೆ ನಡೆಯಿತೆಂಬುದನ್ನು ಗಮನಿಸೋಣ.   

ಹೌದು, ಗೋಡ್ಸೆ ಗಾಂಧಿಯನ್ನು ಕೊಲ್ಲಬಯಸಿದ್ದ.  ಪಿಸ್ತೂಲು ಸಹಿತ ಕೊಲ್ಲಲು ಗಾಂಧಿ ಎದುರಿಗೆ ಬಂದು ನಿಂತ. ಆದರೆ ಕೊಂದದ್ದು ಯಾರು? ಅಲ್ಲಿ ನಡೆದ ನಿಜವಾದ ಸಂಗತಿ ಏನು? ಇದರ ಬಗ್ಗೆ ಯಾರೂ ಮಾತಾಡುವದಿಲ್ಲ, ಪ್ರಾಮಾಣಿಕವಾಗಿ ವಿಶ್ಲೇಷಿಸುವದಿಲ್ಲ. ಇಲ್ಲಿ ನಾವು ಬಿ. ಜಿ. ಕೇಸಕರ ಎಂಬವರ ಬಗ್ಗೆ ತಿಳಿದುಕೊಳ್ಳುವದಗತ್ಯವಿದೆ. ಯಾರು ಈ ಬಿ.ಜಿ. ಕೇಸಕರ? ಅವರೊಬ್ಬ ಪ್ರಸಿದ್ದ ವಕೀಲರು. 94 ವರ್ಷ ವಯಸ್ಸಿನತನಕ ಬದುಕಿದ ಸ್ವಾತಂತ್ರ್ಯ ಹೋರಾಟಗಾರರು. ಗೆರಿಲ್ಲಾ ಯುದ್ಧದ ತರಬೇತಿ ಡಿಪ್ಲೊಮಾ ಆದವರು. ಸ್ವಂತ ಖಾಸಗಿ ಪತ್ತೇದಾರಿ ಸಂಸ್ಥೆ ನಡೆಸಿದವರು. ಫೊರೆನ್ ಸಿಕ್ ಸೋಶಿಯಲ್ ಸರ್ವೀಸ್, ಕ್ರೈಮ್ ರಜಿಸ್ಟ್ರೇಶನ್ ಬ್ಯುರೋ, ಅಮೆಚೂರ್ ಡಿಟೆಕ್ಟಿವ್ ಕಾರ​‍್ಪಸ ಸಂಸ್ಥೆಗಳ ಮುಖ್ಯಸ್ಥರು. ಕೆಲ ವರ್ಷಗಳ ಹಿಂದೆ ಶಿವಸೇನಾ ಸಂಸ್ಥಾಪಕ ಬಾಾಸಾಹೇಬ ಠಾಕ್ರೆ ಅವರು ಗಾಂಧಿ ಹತ್ಯೆಗೆ ಸಂಬಂಧಿಸಿದಂತೆ ನೀಡಿದ ಹೇಳಿಕೆಯೊಂದು ರಾಷ್ಟ್ರಮಟ್ಟದಲ್ಲಿ ಕೋಲಾಹಲವನ್ನೆಬ್ಬಿಸಿದಾಗ ಕೇಸಕರ ಅವರೊಂದು ಲೇಖನ ಬರೆದರು ಮತ್ತು  ಈ ಹತ್ಯೆ ಪ್ರಕರಣದ ವಾಸ್ತವಾಂಶಗಳನ್ನು ಬಿಚ್ಚಿಡಲು ಇದು ಸಕಾಲ ಎಂದು ಹೇಳಿದರು. ಅವರು ಬಿಚ್ಚಿಟ್ಟ ಆ ಭಯಾನಕ ಸತ್ಯಾಂಶಗಳು ಎಲ್ಲರನ್ನೂ ಬೆಚ್ಚಿ ಬೀಳಿಸಿದವು. ಅಲ್ಲಿಂದ ಈ ವಿಷಯ ಸಾಕಷ್ಟು ಚರ್ಚೆಗೂ ಅವಕಾಶ ಮಾಡಿಕೊಟ್ಟಿದೆ. ಅವರು ಬರೆದ ಕೆಲವು ವಿಚಾರಗಳನ್ನು ಸಂಕ್ಷೇಪವಾಗಿ ಇಲ್ಲಿ ಗಮನಿಸೋಣ-  


ಬೇರೆಯೇ ಚಿತ್ರ  

ಗಾಂಧಿಯವರನ್ನು ರಾಜಕೀಯ ನಕಾಶೆಯಿಂದ ಅಳಿಸಿಬಿಡಲು ಹೊರಟವರು ಒಂದಲ್ಲ, ಎರಡು ವಿಭಿನ್ನ ಪಟ್ಟಭದ್ರರ ಗುಂಪುಗಳು, ಸೇನೆ ಎನ್ನಿ. ಕಾರ್ಯಾಚರಣೆಯ ಎಜೆಂಟರು ಎನ್ನಿ,. ಇವುಗಳ ಗುರಿ, ಧ್ಯೇಯ ಬೇರೆಯೇ ಇದ್ದವು.  ಆದರೆ ಗಾಂಧಿ ಹತ್ಯೆ ಎಂಬ ಒಂದಂಶದಲ್ಲಿ ಭಿನ್ನತೆ ಇರಲಿಲ್ಲ. ಒಂದು ಗುಂಪಿನ ನಿಯೋಜಿತ ವ್ಯಕ್ತಿ ನಾಥೂರಾಂ ಗೋಡ್ಸೆ. ಇನ್ನೊಂದರ ಮುಖಂಡ ಒಬ್ಬ ಕಾಂಗ್ರೆಸ್ಸಿಗ. ಈ ಕಾಂಗ್ರೆಸ್ಸಿಗ 1978 ರವರೆಗೆ ಜೀವಂತ ಇದ್ದ. ಪುಣೆಯಲ್ಲಿಎಲ್ಲರ ಕಣ್ಣಿಗೆ ಕಾಣುವಂತೆ ನಿರ್ಭಯವಾಗಿ ಓಡಾಡುತ್ತಿದ್ದ ನಿರಪರಾಧಿಯಂತೆ. 1948 ಜನೆವರಿ 30 ರಂದೇ ಗಾಂಧಿಯವರನ್ನು "ಮುಗಿಸುವ ಕಾಯಕದ" ಹೊಣೆ ಇವರಿಬ್ಬರ ಮೇಲೂ ಇತ್ತು.  ಹತ್ಯೆಯೂ ಆಯಿತು.  


ವಿಚಾರಣೆಯ ಲೋಪ  

ಗಾಂಧಿ ಹತ್ಯೆಯ ವಿಚಾರಣೆ ನಡೆದ ರೀತಿಯನ್ನಿಲ್ಲಿ ಗಮನಿಸಬೇಕಾಗುತ್ತದೆ. ಮ್ಯಾಜಿಸ್ಟ್ರೇಟ್‌ರ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗುವ ಮುನ್ನ ಸರ್ಕಾರಿ ವಕೀಲರು ಸಾಕ್ಷೀದಾರರ ಹೇಳಿಕೆಗಳ ಪ್ರತಿಗಳನ್ನು - ಕೋರ್ಟಿನಲ್ಲಿ  ದಾಖಲೆಯಾದುದನ್ನು ಠಿಠಛಿಜ ಣ/  161 ಛಿಡಿಠಿಛಿ ಪ್ರಕಾರ ಆರೋಪಿಗಳಿಗೆ ಮೊದಲು ಕೊಟ್ಟು ಅವರೇನು ಹೇಳುತ್ತಾರೋ ಅದನ್ನು ಪಾಟೀಸವಾಲು ಮಾಡುವಾಗ ದಾಖಲಿಸಿಕೊಳ್ಳಬೇಕು. ಅದು ಕಡ್ಡಾಯ.  ಈ ಗಾಂಧಿ ಹತ್ಯೆ ಪ್ರಕರಣದ ವಿಚಾರಣೆಯಲ್ಲಿ ಇಬ್ಬರು ಮುಖ್ಯ- ಅತಿಮುಖ್ಯ ಸಾಕ್ಷಿದಾರರ ಹೇಳಿಕೆಗಳನ್ನು ಪೋಲೀಸರು ಆರೋಪಿಗಳಿಗೆ ಕೊಡಲೇ ಇಲ್ಲ. ಬಚ್ಚಿಟ್ಟರು. ಅವರು ಯಾರು? ಯಾರೆಂದರೆ ಗಾಂಧಿಯವರು ಪ್ರಾರ್ಥನಾ ಸಭೆಗಳಿಗೆ ಬರುವಾಗ ಮಾಮೂಲಾಗಿ ಯಾರ ಭುಜಗಳ ಮೇಲೆ ತಮ್ಮ ಎರಡೂ ತೋಳುಗಳನ್ನಿಟ್ಟುಕೊಂಡು ಬರುತ್ತಿದ್ದರೋ ಆ ಇಬ್ಬರು ಹುಡುಗಿಯರು. ಅವರೇ ತೀರ ಹತ್ತಿರದಲ್ಲಿದ್ದ ಅತಿ ಮುಖ್ಯ ಸಾಕ್ಷೀದಾರರು. ಅದಕ್ಕೆ ಪೋಲೀಸರು ಕೊಟ್ಟ ವಿವರಣೆ- “ಈ ಸಾಕ್ಷೀದಾರರನ್ನು ವಿಚಾರಣೆಗೆ ಕರೆತಂದು ಹೇಳಿಕೆ, ಪರೀಕ್ಷೆ ನಡೆಸುವ ಉದ್ದೇಶ ನಮಗಿಲ್ಲ. ಆದುದರಿಂದ ಅವರಿಬ್ಬರ ಹೇಳಿಕೆಗಳನ್ನು ನಿಮಗೆ ಕೊಡಲು ಆಗುವದಿಲ್ಲ.ಅದು ಅನವಶ್ಯಕ” ಎಂದು.   


ಮೋಜು!  

ಈಗ ಮೋಜು ನೋಡಿ. ಸರ್ಕಾರಿ ವಾದಕ್ಕೆ, ನಿಲುವಿಗೆ, ಸಾಕ್ಷಿ ಆಗಬೇಕಾದವರಲ್ಲಿ ಈ ಹುಡುಗಿಯರಿಬ್ಬರೇ ಬಹಳ ಮುಖ್ಯವಾಗಿದ್ದವರು. ಏಕೆಂದರೆ ಗಾಂಧಿ ಹತ್ಯೆಯನ್ನು ಅತಿ ಹತ್ತಿರದಿಂದ, ನೇರವಾಗಿ ತಮ್ಮ ಸ್ವಂತ ಕಣ್ಣುಗಳಿಂದಲೇ ಕಂಡವರು. ಗೋಡ್ಸೆಗೆ ಕೇವಲ ಒಂದು ಅಡಿಯಷ್ಟು ದೂರದಲ್ಲಿದ್ದವರು. ಅವರೇನು ಕುರುಡರಾಗಿರಲಿಲ್ಲ. ಅಮಲಿನಲ್ಲೂ ಇದ್ದವರಾಗಿರಲಿಲ್ಲ. ಹಾಗಿದ್ದರೆ ಆ ಹುಡುಗಿಯರಿಬ್ಬರ ಸಾಕ್ಷಿ ಹೇಳಿಕೆಗಳು ಹೇಗಿದ್ದವು? ಅವನ್ನೇಕೆ ಮುಚ್ಚಿಡಲಾಯಿತು? ಅವರಲ್ಲಿ ಒಬ್ಬಳು ಸರ್ದಾರ ಪಟೇಲರ ಮಗಳು ಮತ್ತು ಇನ್ನೊಬ್ಬಳು ಗಾಂಧಿ ದತ್ತುಪುತ್ರಿ.   

ಒಬ್ಬಳ ಹೇಳಿಕೆ ಹೀಗಿತ್ತು- “ಈ ಗೋಡ್ಸೆ ಎಂದು ನೀವು ಕರೆಯುವ ವ್ಯಕ್ತಿ ಗಾಂಧಿಯವರಿಗೆ ‘ನಮಸ್ತೆ’ ಮಾಡುತ್ತಿದ್ದ. ಅವನ ಎರಡೂ ಕೈಗಳು ಅಂಜಲಿ ಸಂಪುಟಗಳಲ್ಲಿ ಮುದ್ರೆಯಲ್ಲಿರುತ್ತಾ ಕೈ ಮುಗಿಯುತ್ತಿದ್ದಾಗ, ಆತನ ಬಲತೋಳು ಕೆಳಗಡೆ ಸಂದಿನಿಂದ ಖಾದಿ ಬಟ್ಟೆಯಿದ್ದ ಬೇರೊಂದು ತೋಳು ಹೊರಚಾಚಿಬಂದು ಆ ಕೈಯಲ್ಲಿದ್ದ ಪಿಸ್ತೂಲಿನಿಂದ ಮೂರು ಸುತ್ತು ಗುಂಡುಗಳು ಚಲಾಯಿಸಲ್ಪಟ್ಟವು. ಗಾಂಧಿ ಕುಸಿದರು...”  

ಗೋಡ್ಸೆಯ ಎರಡೂ ಕೈಗಳು ನಮಸ್ಕಾರದ ಭಂಗಿಯಲ್ಲಿರುವಾಗ ಅವನ ಕೈಯಲ್ಲಿ ಯಾವುದೇ ಆಯುಧ ಹೇಗೆ ಇರಲು ಸಾಧ್ಯ?  

ಇನ್ನೊಬ್ಬಳ ಹೇಳಿಕೆ ಹೀಗಿತ್ತು: "ನೀವು ಗೋಡ್ಸೆ ಎನ್ನುವ ಈತ ಎರಡೂ ಕೈಗಳಿಂದ ಎತ್ತಿ ಕೈ ಮುಗಿಯುತ್ತಿದ್ದ. ಆಗ ಬೇರೊಬ್ಬ ಎತ್ತರದ, ಖಾದಿಧಾರಿ ಕುರ್ತಾ ಪಾಯಜಾಮಾ ಧರಿಸಿದ್ದವನು ಗೋಡ್ಸೆಯ ಹಿಂದಿನಿಂದ ಬಂದು ದಪದಪನೆ ವೇಗದ ಹೆಜ್ಜೆಗಳನ್ನಿಡುತ್ತಾ ಬಂದವನೇ ನಾಥೂರಾಮನ ಬಲ ತೋಳ ಕೆಳಗಿನ ಸಂದಿನಿಂದ ಗುಂಡು ಹಾರಿಸಿದ..."  


ಈಗ ಯೋಚಿಸಿ  

1. ಎರಡು ಅತಿ ಹತ್ತಿರದ ಮತ್ತು ಅತಿ ಮಹತ್ವದ ಸಾಕ್ಷಿಗಳು ಹೇಳಿದ್ದನ್ನು ಪೋಲೀಸರು ಏಕೆ ಮುಚ್ಚಿಟ್ಟರು?   

2. ಯಾರ ಸೂಚನೆಯಂತೆ ಮುಚ್ಚಿಟ್ಟರು? ಯಾಕೆ ಆ ಸಾಕ್ಷಿಗಳನ್ನು ಪ್ರತ್ಯಕ್ಷ  ಕರೆತಂದು ಹೇಳಿಕೆ ಕೊಡಿಸಲಿಲ್ಲ?  

3. ಗೋಡ್ಸೆ ಹಿಂದಿನಿಂದ ಬಂದು ಗುಂಡು ಹಾರಿಸಿದ ಆ ಖಾದಿಧಾರಿ ಯಾರು? ಅವನಿಗೆ ಆ ಕೆಲಸ ಮಾಡಲು ಹೇಳಿದವರು ಯಾರು?   

4. ಆ ಹುಡುಗಿಯರಿಬ್ಬರೂ ಗಾಂಧಿ ಶಿಷ್ಯರು ಹೊರತು ಗೋಡ್ಸೆ ಗುಂಪಿನವರಲ್ಲವಲ್ಲ. ಅಂದಾಗ ಅವರ ಸಾಕ್ಷಿಯನ್ನೂ ಪರಿಗಣಿಸಬೇಕಲ್ಲವೇ?   

5. ಗೋಡ್ಸೆ  ತನ್ನ ಪಿಸ್ತೂಲನ್ನು ಹೊರತೆಗೆಯುವ ಮೊದಲೇ ಅಲ್ಲಿದ್ದ ಮಿಲಿಟರಿ ರಕ್ಷಕ ಅವನನ್ನು ಭದ್ರವಾಗಿ ಹಿಡಿದುಕೊಂಡಿದ್ದಲ್ಲದೆ ಇನ್ನೊಬ್ಬ ಅವನ ತಲೆಗೆ ಲಾಠಿಯಿಂದ ಹೊಡೆದಿದ್ದಾನೆ. ಗಾಯವೂ ಆಗಿದೆ. ಇದೆಲ್ಲ ಪೋಲೀಸ ವರದಿಯಲ್ಲೇ ಇದೆ.  

6. ಅದೂ ಅಲ್ಲದೆ ಗೋಡ್ಸೆ ಕೈಯಿಂದ ಕಸಿದುಕೊಂಡ ಪಿಸ್ತೂಲಿನಲ್ಲಿ ಎಲ್ಲ ಏಳು ಗುಂಡುಗಳೂ ಹಾಗೇ ಇದ್ದವು. ಅಂದರೆ ಗೋಡ್ಸೆ ಪಿಸ್ತೂಲಿನಿಂದ ಆ ಗುಗುಂಡುಗಳೆು ಹಾರಿಲ್ಲ, ಬೇರೆ ಯಾರದೋ ಪಿಸ್ತೂಲಿನಿಂದ ಹಾರಿದ್ದೆಂಬುದು ಸ್ಪಷ್ಟ.   

7. ಇಷ್ಟೆಲ್ಲ ಆಧಾರಗಳು ಇದ್ದರೂ ಆ ಗಾಂಧೀ ಶಿಷ್ಯೆಯರ ಹೇಳಿಕೆಯಲ್ಲಿದ್ದ ಆ ಇನ್ನೊಬ್ಬ ವ್ಯಕ್ತಿ ಯಾರೆಂದು ಆಗಿನ ಸರಕಾರ ಯಾಕೆ ಕಂಡುಹಿಡಿಯಲು ಪ್ರಯತ್ನಿಸಲಿಲ್ಲ.? ಇದು ಸಂಶಯಾಸ್ಪದ ನಡೆಯಲ್ಲವೇ?  

8. ಆ ಪ್ರಕರಣ ಆಗ ವಿಚಾರಣೆ ನಡೆಸಿದ ನ್ಯಾಯಾಧೀಶರು ಜಿ. ಡಿ. ಖೋಸ್ಲಾ. ನೆಹರೂಗೆ ತುಂಬ ಬೇಕಾದವರು. ಅವರೇಕೆ ಆ ಪ್ರಮುಖ ಸಾಕ್ಷಿಗಳನ್ನು ಹಾಜರುಪಡಿಸಲು ಹೇಳಿ ಅವರ ಹೇಳಿಕೆ ಪಡೆಯಲಿಲ್ಲ ಎಂಬ ಪ್ರಶ್ನೆಯೂ ಸಹಜ ತಾನೆ?  

ಅಂದರೆ ಇವೆಲ್ಲ ಯಾರೋ ಒಬ್ಬ ಮಹಾನಾಯಕನ ಸೂಚನೆ ಮೇರೆಗೆ ನಡೆದ ಪ್ರಹಸನಗಳು ಎನ್ನುವ ಸಂದೇಹ ಬರದೇ ಇರಲು ಸಾಧ್ಯವೇ?  ಹಾಗಿದ್ದರೆ ಯಾರಿರಬಹುದು ಆ ಮಹಾನಾಯಕ?   


ಗಾಂಧಿ ಹತ್ಯೆಯ ಹಿಂದೆ ಅಡಗಿದ ಕೆಲವು  ಸಂದೇಹಗಳು / ರಹಸ್ಯಗಳು  

ವಿಚಾರಣೆಯ ನಾಟಕ ಮುಗಿದು ನಾಥೂರಾಮನೇ ಕೊಲೆಗಾರ ಎಂದು ಪೂರ್ವನಿರ್ಧಾರಿತ ಆರೋಪವನ್ನು ಖಚಿತಪಡಿಸಿದ ನ್ಯಾಯಾಲಯ ಮತ್ತು ಪೋಲೀಸ ಆಡಳಿತ ತನ್ನ ಕರ್ತವ್ಯವನ್ನು ಮುಗಿಸಿದ ನಂತರ ಅದನ್ನು ಪ್ರಶ್ನಿಸುವ ಯಾವ ಅಗತ್ಯವೂ ಆಗಿನ ಸರಕಾರಕ್ಕೆ ಇರಲಿಲ್ಲ. ಅದಕ್ಕೆ ತಕ್ಕಂತೆ ಗೋಡ್ಸೆ ಹೇಗಾದರೂ ಇರಲಿ,  ತನ್ನ ಉದ್ದೇಶ  ಈಡೇರಿತಲ್ಲ ಎಂಬ ಸಮಾಧಾನದಿಂದ ತಾನೇ ಕೊಂದಿದ್ದು ಎಂಬ ಸ್ಟೇಟಮೆಂಟ್ ಕೊಟ್ಟು ಇತಿಹಾಸದಲ್ಲಿ ತನ್ನ ಹೆಸರು ಅಜರಾಮರವಾಗಿ ಉಳಿಯುವಂತೆ ನೋಡಿಕೊಂಡ. ಅವನ ಮೇಲೆ ಬೇರೆ ಒತ್ತಡಗಳು ಇರಲು ಸಾಧ್ಯ. ಅವನಿಗೆ ಗಾಂಧಿ ಸಾಯುವದು ಬೇಕಿತ್ತು. ಯಾರು ಕೊಂದರೇನು ಎಂಬ ನಿರ್ಲಿಪ್ತ ಭಾವದಿಂದಲೇ ಗಲ್ಲಿಗೆ ತಲೆಕೊಟ್ಟ. ಅಂದಿನ ಸರಕಾರಕ್ಕೂ ಅಷ್ಟೇ ಬೇಕಿತ್ತು. ಅದರ ಹಿಂದಿನ ಸಂಚುಕೋರರೂ ಬಚಾವಾದರು. ಆ ನಿಜವಾದ ಸಂಚುಕೋರರು ಯಾರು ಎನ್ನುವುದನ್ನು ಕೊನೆಗೂ ಅಲ್ಲಿಂದಲ್ಲೇ ದಫನ್ ಮಾಡಲಾಯಿತು. ಆದರೆ ಇದರ ಹಿಂದೆ ಬಹಳ ದೊಡ್ಡವರ ಬಹಳ ದೊಡ್ಡ ಒಳಸಂಚು ಇದ್ದಿತ್ತೆನ್ನುವದು ಇತಿಹಾಸದ ಪುಟಗಳಲ್ಲಿ ಸೇರಲೇಇಲ್ಲ. ಅವರು ಬಚಾವಾದರು. ಆ ಶಕ್ತಿಯೂ ಅವರಿಗಿತ್ತು. ಅವರ ಯೋಜನೆಯಂತೆಯೇ ಎಲ್ಲವೂ ಸುಸೂತ್ರವಾಗಿ ನಡೆಯಿತು. ನಿಶ್ಚಿಂತೆಯಿಂದ ಅಧಿಕಾರದ ಸುಖ ಅನುಭವಿಸತೊಡಗಿದರು.   

ನ್ಯಾಯಾಲಯ ಸೂಕ್ಷ್ಮ  ಪರೀಶೀಲನೆಗೊಳಪಡಿಸದಿದ್ದರೂ ಅಂದು ಆ ಸನ್ನಿವೇಶದಲ್ಲಿ ನಡೆದ ಎಲ್ಲ ಸಂಗತಿಗಳಿಗೂ ಸಾಕ್ಷ್ಯಾಧಾರಗಳಿದ್ದವು. ಅವು ಹೊರಗೆ ಬರದಂತೆ ಎಚ್ಚರಿಕೆ ವಹಿಸಲಾಯಿತು. ಅವೆಲ್ಲ ಹೊರಬರತೊಡಗಿದ್ದು ತೀರಾ ಇತ್ತೀಚೆಗೆ ಬಾಳಾಸಾಹೇಬ ಠಾಕ್ರೆ, ಕೇಸಕರರಂಥವರಿಂದ. ಆದ್ದರಿಂದ ಐದು ದಶಕಗಳ ತನಕ ಒಂದೇ ನಮೂನೆಯ ಪ್ರಚಾರ ಮತ್ತು ನಂಬಿಕೆಗಳಿಗೆ ಫೆವಿಕಾಲ್ ಅಂಟಿಸಿಕೊಂಡು ಕುಳಿತ ಮುಗ್ಧ ಭಾರತೀಯರಿಗೆ ಒಳಗಿನ ಇತರ ಸಂಗತಿಗಳ ಅರಿವಾಗಲೆಇಲ್ಲ. ಸತ್ಯದ ಕೊಡ ಸುಳ್ಳಿನ ಮುಚ್ಚಳದಿಂದ ಮುಚ್ಚಲ್ಪಟ್ಟಿತ್ತು. ಬೀಗ ಆಳುವವರ ಕೈಯಲ್ಲೇ ಇತ್ತು. ಇದು ಕಳೆದ ಶತಮಾನದ ಅತ್ಯಂತ ದೊಡ್ಡ ವಂಚನೆ ಮತ್ತು ಮಹಾರಹಸ್ಯ. ಈಗಲೂ ಅದನ್ನು ನಂಬದೆ ಇರುವವರು ಸಾಕಷ್ಟು ಜನರಿದ್ದಾರೆ. ಮನಸ್ಸು ಜಡ್ಡುಗಟ್ಟಿಹೋದಾಗ ಹಾಗೆ ಆಗುವದು ಸಹಜ. ಅದು ಅಷ್ಟು ಸುಲಭವಾಗಿ ಹೊಸ ವಿಚಾರಗಳಿಗೆ ತೆರೆದುಕೊಳ್ಳುವದಿಲ್ಲ ಅಥವಾ ಆ ಮನಸ್ಸು ಅದನ್ನು ಒಪ್ಪಿಕೊಳ್ಳಲು ಸಿದ್ಧವಿರುವದಿಲ್ಲ. ಕೆಲವರಿಗೆ ಆ ಸತ್ಯವನ್ನು ಎದುರಿಸುವ ಧೈರ್ಯವೂ ಇರುವದಿಲ್ಲ. ಟಾಂಗಾ ಕುದುರೆ ಮುಖಕ್ಕೆ  ಎರಡೂ ಕಡೆ ಪಟ್ಟಿ ಕಟ್ಟಿರುತ್ತಾರಲ್ಲ ಹಾಗೆ ಆಚೀಚೆ ನೋಡಲು ಅವರು ಪ್ರಯತ್ನಿಸುವುದೇಇಲ್ಲ.   

ಅತ್ಯಂತ ಬಲವತ್ತಾದ ಸಾಕ್ಷಿಗಳನ್ನೇ ತನ್ನೆದುರು ಬರದಂತೆ ನೋಡಿಕೊಂಡ ನ್ಯಾಯಾಧೀಶರ ಉದ್ದೇಶವಾದರೂ ಏನಿತ್ತು ಎನ್ನುವದು ಯೋಚಿಸಬೇಕಾದ ವಿಷಯವಲ್ಲವೇ? ಯಾರದಾದರೂ ಬಹಳ ಪ್ರಭಾವಿ ವ್ಯಕ್ತಿಗಳ ಒತ್ತಡ ಅವರ ಮೇಲಿತ್ತೇ ಎಂಬ ಸಂಶಯಕ್ಕೆ ಆಸ್ಪದವಿಲ್ಲವೇ? ಆಗಷ್ಟೇ ನೆಹರೂ ಸರಕಾರ ರಚನೆಯಾಗಿ ಆಡಳಿತ ಸಾಗಿತ್ತು. ಗಾಂಧಿಯಂತಹ ‘ಮಹಾತ್ಮ’ನ ಕೊಲೆ ವಿಷಯದಲ್ಲಿ ಸತ್ಯ ಹೊರಗೆ ಬರಬೇಕೆಂದು ಸರಕಾರಕ್ಕೇಕೆ ಅನಿಸಲಿಲ್ಲ? ಗಾಂಧಿಯನ್ನು ಕೊಲ್ಲುವದಕ್ಕೆ ಗೋಡ್ಸೆಯ ಉದ್ದೇಶ ಬೇರೆ ಇತ್ತು. ನಿಜವಾಗಿ  ಅವರನ್ನು ಕೊಂದವರ ಉದ್ದೇಶ ಬೇರೆ ಇತ್ತು. ನಿಜವಾದ ಅಪರಾಧಿಯನ್ನು ರಕ್ಷಿಸುವ ಕೆಲಸವನ್ನು ಸ್ವತಃ ಗೋಡ್ಸೆ ಯಾಕೆ ಮಾಡಿದ ಎನ್ನುವುದು ಸಹ ಪ್ರಶ್ನಾರ್ಹ. ಏಕೆಂದರೆ ಪಾರಾಗುವ ಇಚ್ಛೆ ಅವನಿಗೆ ಇದ್ದಿದ್ದರೆ ಆತ/ಆತನ ವಕೀಲ ಆ ಇಬ್ಬರು ಹುಡುಗಿಯರನ್ನು ಸಾಕ್ಷಿ ಕಟ್ಟೆಗೆ ಕರೆಸಿ / ಅವರ ಹೇಳಿಕೆ ಪಡೆಯಿರಿ ಎಂದು ಯಾಕೆ ಒತ್ತಾಯಿಸಲಿಲ್ಲ? ಗಾಂಧಿಯನ್ನು ಕೊಂದ ಕ್ರೆಡಿಟ್ ತಾನೇ ಪಡೆಯಬೇಕೆಂಬ ವಿಚಾರ ಗೋಡ್ಸೆಯಲ್ಲಿತ್ತೇ? ಮುಂದೆ ಅತ ನೀಡಿದ ದೀರ್ಘ ಹೇಳಿಕೆಯಲ್ಲೂ ಅವನ್ಯಾಕೆ ವಾಸ್ತವವನ್ನು ತೆರೆದಿಡಲಿಲ್ಲ? ಹಾಗಿದ್ದರೆ ಅವನು ಹರಕೆಯ ಕುರಿ ಆಗಿದ್ದನೇ ಎಂಬ ಪ್ರಶ್ನೆಯೂ ಸಹಜವಷ್ಟೆ.  


ಇನ್ನೊಂದು ಮುಖ  

ಗಾಂಧಿ ಹತ್ಯೆ ನಡೆದದ್ದು ಬಿರ್ಲಾ ಭವನದಲ್ಲಿ. ಅಲ್ಲಿ ರಕ್ಷಣಾ ಪಡೆಯ ತುಕಡಿಯೊಂದು ಈ ಗಾಂಧಿ ಕಾವಲಿಗೆ ಇತ್ತು. ಅದರ ಮುಖ್ಯಸ್ಥರು ನೀಡಿದ ಹೇಳಿಕೆಯನ್ನು ಗಮನಿಸಿ-  

"ಜನೆವರಿ 20 ರಂದು ಗಾಂಧಿಯವರ ಪ್ರಾರ್ಥನಾ ಸಭೆಯಲ್ಲಿ ಗನ್ - ಕಾಟನ್ ಸ್ಫೋಟ ನಡೆದಾಗ ಅಲ್ಲಿದ್ದವರು ಈ ಪಡೆಯಲ್ಲಿ ಏಳು ಜನ ಮಾತ್ರ. ಅಲ್ಲಿಂದಾಚೆಗೆ ಆ ಸಂಖ್ಯೆಯನ್ನು ಹದಿನಾಲ್ಕಕ್ಕೆ ಏರಿಸಿತ್ತು. ನಾವೆಲ್ಲ ಬಹಳ ಸೂಕ್ಷ್ಮ ಎಚ್ಚರದ  ದೃಷ್ಟಿಯಿಂದ ಕಾವಲು ಕಾಯುತ್ತಿವ್ಯಕ್ತಿ ಆ ಸಭೆಯಲ್ಲಿದ್ದ ಪ್ರತಿಯೊಬ್ಬ ವ್ಯಕ್ತಿ, ಬರಹೋಗುವ ಎಲ್ಲರ ಚಲನವಲನಗಳನ್ನು ನಾವು ಗಮನಿಸುತ್ತಿದ್ದೆವು..." ಎಷ್ಟು ಹಾಸ್ಯಾಸ್ಪದವಾಗಿದೆ ಈ ಹೇಳಿಕೆ ನೋಡಿ. ಹಾಗಿದ್ದರೆ ಕೊಲೆಯಲ್ಲಿ ಭಾಗಿಯಾದ ಒಂದು ಗುಮಪಿನವರನ್ನು ಮಾತ್ರ ಏಕೆ ಬಂಧಿಸಿದಿರಿ,? ಇನ್ನೊಂದು ಗುಂಪಿನ ನಿಜ ಕೊಲೆಗಾರನನ್ನು, ಅವನ ಸಹಚರರನ್ನು ಏಕೆ ಬಂಧಿಸಲಿಲ್ಲ? ಪ್ರತಿಯೊಬ್ಬರ ಮೇಲೂ ಗಮನವಿಟ್ಟಿದ್ದ ನಿಮಗೆ ಅವರೇಕೆ ಕಾಣಿಸಲಿಲ್ಲ? ಅದು ನಿಮ್ಮ ಲೋಪವಲ್ಲವೆ? ಅದು ನಿಮ್ಮ ಸುಳ್ಳು ಸಾಕ್ಷ್ಯವಾಗಲಾರದೇ? ನಿಜವಾಗಿ ನೀವು ಯಾರದೋ ಒತ್ತಡಕ್ಕೆ ಸಿಲುಕಿ ನಿಜ ಅಪರಾಧಿಯನ್ನು ನೋಡಿದರೂ ನೋಡದಂತೆ ಕೈಬಿಟ್ಟಿರೆಂದೇ ಹೇಳಬೇಕಾಗುತ್ತದೆ. ಅದೂ ಒಂದು ಅಪರಾಧವಲ್ಲವೇ? ಇವರೆಲ್ಲ ಸರಕಾರಿ ನಿಯಂತ್ರಣದ ಪೋಲಿಸ್ ಅಧಿಕಾರಿಗಳು. ಇವರ ಗೂಢಚಾರರು ಎನು ಮಾಡುತ್ತಿದ್ದರು? ಇಷ್ಟೆಲ್ಲ ದೊಡ್ಡ ಒಳಸಂಚು ನಡೆದರೂ ಯಾಕೆ ಗೊತ್ತಾಗಲಿಲ್ಲ? ಗೊತ್ತಾಗಿದ್ದರೆ ಯಾಕೆ ಆ ಇನ್ನೊಂದು ಗುಂಪಿನವರನ್ನೂ ಹಿಡಿದು ವಿಚಾರಿಸಲಿಲ್ಲ? ಈ ಎಲ್ಲ ಸಂದೇಹಗಳು, ಪ್ರಶ್ನೆಗಳು ಸಹಜವಾಗಿಯೇ ಹುಟ್ಟಿಕೊಳ್ಳುತ್ತವಲ್ಲವೇ? ಇವು ಸಂದೇಹಗಳಲ್ಲ, ವಾಸ್ತವ. ಸ್ಫೋಟ ಘಟನೆ ನಡೆದು ಹತ್ತು ದಿವಸಗಳಾಗಿದ್ದರೂ ಆ ಗುಂಪಿನ ಯಾರೊಬ್ಬರನ್ನೂ ಯಾಕೆ ಬಂಧಿಸಿರಲಿಲ್ಲ?) ಅಧಿಕಾರ ನಡೆಸುವವರಲ್ಲೇ ಯಾರಿಗೋ ಗಾಂಧಿ ಸಾಯುವದು ಬೇಕಿತ್ತು ಎಂದಂತಾಗುತ್ತದೆ. ಯಾವ ಗ್ಯಾಂಗಿನವರು ಕೊಂದರೇನು, ಅವರು ಸತ್ತರಲ್ಲ ಅಷ್ಟು ಸಾಕು ಎನ್ನುವ ಮನೋಭಾವ ಇಲ್ಲಿ ಎದ್ದು ಕಾಣುತ್ತದೆ.     

ಹಾಗಿದ್ದರೆ? ಯಾರೋ ಗಾಂಧಿ ಸಾಯಬೇಕೆಂದು ಆ ಕಾಲಕ್ಕಾಗಿ ಕಾಯುತ್ತಿದ್ದರು ಎಂಬ ಊಹೆಗೆ ಅವಕಾಶವಿದೆ. ಅದಕ್ಕೇನಾದರೂ ಒಳ ಕಾರಣಗಳು ಬೇಕಷ್ಟೇ. ಸರಕಾರಕ್ಕೆ ಗಾಂಧಿಹತ್ಯೆ ಬೇಕಿತ್ತೆ? ಹತ್ಯೆ ನಡೆದ ಮೇಲೆ ಯಾರೋ ಒಬ್ಬರನ್ನು ನೇಣಿಗೆ ಹಾಕಿ ತಮಗ್ದಾ ಹಿಂದೂ ಸಂಘಟನೆಯ ಮೇಲೆ ಗೂಬೆ ಕೂರಿಸಿ ನಿರಾತಂಕವಾಗಿ ಆಡಳಿತ ನಡೆಸಬಹುದೆಂಬ ಭಾವನೆಯೇ? ನಿಜ ಅಪರಾಧಿ ಗೋಡ್ಸೆ ಅಲ್ಲ, ಬೇರೆಯವರು ಎಂದು ಗೊತ್ತಿದ್ದರೂ ಆತ ನಿರಾಳವಾಗಿ ಅಡ್ಡಾಡಲು ಬಿಡುವದು ಯಾವ ಘನ ಉದ್ದೇಶಕ್ಕಾಗಿ ಮತ್ತು ಯಾವ ಮಹನೀಯನಿಗಾಗಿ?  


ಗಾಂಧಿ ಹತ್ಯಾ ಪ್ರಕರಣ : ಇನ್ನೊಂದಿಷ್ಟು ವಿಚಾರಗಳು  

ಕೆಲವರು ಹೇಗೆ ಸಂದರ್ಭಾನುಸಾರ ಸುಳ್ಳು ಹೇಳುತ್ತಾರೆ ನೋಡಿ. ಹತ್ಯೆ ನಡೆದ ಸ್ಥಳದಲ್ಲಿದ್ದೇನೆಂದು ಹೇಳಿಕೊಂಡ ಒಬ್ಬ ಪೋಲೀಸ ಅಧಿಕಾರಿ "ನಾನು ಗುಂಡಿನಶಬ್ದ ಕೇಳಿದೆ. ದುಗೋಡ್ಸೆ ಪಿಸ್ತೂಲು ಹೊಗೆಯಾಡುತ್ತಿದ್ದುದನ್ನೂ ನೋಡಿದೆ" ಎಂದು ಸಾಕ್ಷಿ ನುಡಿದ. ತಮಾಷೆಯೆಂದರೆ ಗೋಡ್ಸೆ ಬಳಿ ಇದ್ದುದು ಇಟಾಲಿಯನ್ನ ಬ್ರಾಂಡ್ ಪಿಸ್ತುಲು. ಅದು ಶಬ್ದವನ್ನೂ ಮಾಡುವದಿಲ್ಲ. ಹೊಗೆಯನ್ನೂ ಬಿಡುವದಿಲ್ಲ. ಇಂತಹ ಅನೇಕ ಸುಳ್ಳುಗಳು ಅಗ ಸೃಷ್ಟಿಯಾಗಿದ್ದವು. ಪಂಚನಾಮೆಯೆಂಬ ನಾಟಕದಲ್ಲಿ ಮೂರು ಗುಂಡುಗಳು ಎಂದಿದ್ದರು. ನಂತರ ಅಪರಾಧ ಶಾಸ್ತ್ರ ಅಧಿಕಾರಿಗೆ ಪೋಲೀಸರು ನಾಲ್ಕು ಗುಂಡುಗಳನ್ನು ತಂದುಕೊಟ್ಟರಂತೆ. ಈ ಅಧಿಕಾರಿ ಸ್ಥಳಕ್ಕು ಹೋಗಲಿಲ್ಲ ಪರೀಕ್ಷಿಸಲಿಲ್ಲ. ಅವನು ಕುಳಿತಲ್ಲೇ ಪೋಲೀಸರು ತಂದುಕೊಟ್ಟರಂತೆ. ಕೋರ್ಟಿನಲ್ಲಿ ಅವನೇಕೆ ಅದನ್ನು ಹಾಜರು ಪಡಿಸಲಿಲ್ಲ? ಗಾಂಧಿಯನ್ನು ಕೊಂದವನು ಬಳಸಿದ್ದು ಗೋಡ್ಸೆ ಕೈಯಲ್ಲಿದ್ದ ರೀತಿಯ ಇಟಾಲಿಯನ್ ಪಿಸ್ತೂಲು ಆಗಿರಲಿಲ್ಲ. ಅದು ರಿವಾಲ್ವರ್ ಆಗಿತ್ತು. ಅವೆರಡರ ರೀತಿ ಬೇರೆ ಬೇರೆ. ಅಲ್ಲದೆ ಗೋಡ್ಸೆ ಪಿಸ್ತುಲಿನಲ್ಲಿ ಎಲ್ಲ ಏಳು ಗುಂಡುಗಳೂ ಹಾಗೇ ಇದ್ದವು ಎನ್ನುವದು ಪ್ರಮುಖ ಆಧಾರವಾಗಬೇಕಲ್ಲವೇ? ಆಗಲೇ ಇಲ್ಲ. ಎಲ್ಲವೂ ಪೂರ್ವ ನಿರ್ಧಾರಿತವಾದಂತೆಯೇ ವಿಚಾರಣೆಯೆಂಬ ನಾಟಕ ಸಲೀಸಾಗಿ ನಡೆಯಿತು.   


ನೆಹರೂ ಕುತಂತ್ರ  

ಈಗ ಬೇರೆ ಕೆಲ ವಿಚಾರಗಳತ್ತ ಬರೋಣ. ಸ್ವಾತಂತ್ರ್ಯ ಘೋಷಣೆಯಾದಾಗ ಭಾರತದಲ್ಲಿ ಒಟ್ಟು 17 ಪ್ರಾದೇಶಿಕ ಕಾಂಗ್ರೆಸ್ ಸಮಿತಿಗಳಿದ್ದವು. ಈ ಹದಿನೇಳರಲ್ಲಿ ನಾಲ್ಕು ಸಮಿತಿಗಳು ಮಾತ್ರ ಪ್ರಧಾನಿ ಸ್ಥಾನಕ್ಕೆ ನೆಹರೂ ಹೆಸರು ಸೂಚಿಸಿದವು. ಉಳಿದ 13 ಸಮಿತಿಗಳು ಪಟೇಲರ ಹೆಸರು ಸೂಚಿಸಿದವು. ಆದರೆ ಬ್ರಿಟಿಷರ ಸಲಹೆಯಂತೆ ಮೌಂಟ್ ಬ್ಯಾಟನ್ನರಿಗೆ ನೆಹರೂರನ್ನೇ ತರಬೇಕಾಗಿತ್ತು. ಪಟೇಲರು ಬೇಕಾಗಿರಲಿಲ್ಲ. ಆಗ ಅವರು ಅದಕ್ಕೆ ಗಾಂಧಿಯನ್ನು ಬಳಸಿಕೊಂಡರು. ಹೇಗಾದರೂ ಮಾಡಿ ಪಟೇಲರನ್ನು ಹಿಂದಕ್ಕೆ ಸರಿಸಿ ಎಂದು ದುಂಬಾಲು ಬಿದ್ದರು. ಗಾಂಧಿ ಪಟೇಲರ ಮನವೊಲಿಸಿದರು.   

ನೆಹರೂ ಕಾಶ್ಮೀರವನ್ನು ಸ್ವಾಯತ್ತ, ಸ್ವತಂತ್ರ ಪ್ರದೇಶವಾಗಿ ಘೋಷಿಸಬಯಸಿದ್ದಕ್ಕೆ ಇನ್ನೊಂದು ಕಾರಣವಿತ್ತು. ನೆಹರೂ ತಂದೆ ಮೋತೀಲಾಲರಿಗೆ ಬೇರೊಬ್ಬ ಮುಸ್ಲಿಂ ಮಹಿಳೆಯಿಂದ ಹುಟ್ಟಿದ್ದ ಶೇಖ್ ಅಬ್ದುಲ್ಲಾರಿಗೆ ತನ್ನಂತೆಯೇ ಕಾಶ್ಮೀರದ ಪ್ರಧಾನಿಯನ್ನಾಗಿ ಮಾಡುವದು ನೆಹರೂ ಇಚ್ಛೆಯಾಗಿತ್ತು. ಅದೂ ಆಯ್ತು. ಈ ಮೋತಿಲಾಲರ ತಂದೆ ಫಯಾಸುದ್ದೀನ್ ಘಾಜಿ ಬ್ರಿಟಿಷರಿಂದ ಪಾರಾಗಲು ಗಂಗಾಧರ ನೆಹ್ರೂ ಎಂಬ ಸುಳ್ಳು ಹೆಸರಿಟ್ಟುಕೊಂಡಿದ್ದ.   

ಕಾಂಗ್ರೆಸ್ ಸಂಸ್ಥೆ ವಿಸರ್ಜನೆ ಮಾಡಿ ಎಂಬ ಗಾಂಧಿ ಸಲಹೆ ನೆಹರೂಗೆ ಇಷ್ಟವಿರಲಿಲ್ಲ. ಅಲ್ಲದೆ ಪ್ರಧಾನಿಯಾದ ನಂತರ ಗಾಂಧೀಜಿಯ ಅಗತ್ಯವೂ ಅವರಿಗಿರಲಿಲ್ಲ. ಇದ್ದರೆ ತಮಗೆ ತಲೆನೋವು ಎಂಬ ಭಾವನೆ ನೆಹರೂರಲ್ಲಿ ಹುಟ್ಟಿಕೊಂಡಿತ್ತು. ಅದೇ ವೇಳೆಗೆ ಕಾಕತಾಳೀಯವೆಂಬಂತೆ ಗೋಡ್ಸೆ ಗಾಂಧಿಯನ್ನು ಮುಗಿಸಬೇಕೆಂಬ ಯೋಜನೆ ಹಾಕಿಕೊಂಡಿದ್ದ. ಇದು ಸಹ ನೆಹರೂಗೆ ಅನುಕೂಲಕರವಾಗಿ ಒದಗಿಬಂತು. ಅದನ್ನು ಬಳಸಿಕೊಂಡು ಗಾಂಧೀ ಅಂತ್ಯಕ್ಕೆ ಮತ್ತೊಂದು ಪರ್ಯಾಯ ಯೋಜನೆ ಕಾಂಗ್ರೆಸ್ ಕಡೆಯಿಂದಲೇ ಸಿದ್ದವಾಯಿತು. ಆ ಪ್ರಕಾರ ಗೋಡ್ಸೆಯನ್ನು ಮುಂದಿಟ್ಟುಕೊಂಡು ಆ ಖಾದಿ ಕುರ್ತಾ ಪಾಯಿಜಾಮಾ ತೊಟ್ಟ ವ್ಯಕ್ತಿ ಗೋಡ್ಸೆ ಕೈ ಕೆಳಗಿನ ಸಂದಿಯಿಂದ ತನ್ನ ರಿವಾಲ್ವರನಿಂದ ಗುಂಡು ಹಾರಿಸಿದ. ಗೊಡ್ಸೆಗೆ ಗುಂಡು ಹಾರಿಸಲು ಅವಕಾಶವೇ ಸಿಗಲಿಲ್ಲ. ಆದರೆ ಅದಕ್ಕಾಗಿ ತಲೆ ತೆತ್ತಿದ್ದು ಗೋಡ್ಸೆ ಎನ್ನುವದು ಸಮಗ್ರ ವಿಚಾರಣೆಯ ನಾಟಕದಿಂದ ಸ್ಪಷ್ಟವಾಗಿದೆ. 

 

ಗಾಂಧಿ ನೀತಿ ನಿಲುವು  

ಪಾಕ್ ವಿಭಜನೆಯಾದಾಗ ಭಾರತ ಅದಕ್ಕೆ 55 ಕೋಟಿ ರೂ. ಕೊಡಬೇಕೆಂಬ ವಿಚಾರಕ್ಕೆ ನೆಹರೂ ಸಹ ಮೊದಲು ಒಪ್ಪಿರಲಿಲ್ಲ. ಕೊಡಬಾರದೆಂದು ಸಂಸತ್ತಿನಲ್ಲೂ ಠರಾವು ಆಗಿತ್ತು. ಆದರೆ ಗಾಂಧೀಜಿ ಹಣ ಕೊಡಲೇಬೇಕೆಂದು ಹಟ ಹಿಡಿದು ಉಪವಾಸಕ್ಕೆ ಕೂತರು. ಭಾರತೀಯರೆಲ್ಲ ಹಣ ಕೊಡುವದಕ್ಕೆ ವಿರೋಧವಾಗಿದ್ದರು.  ಆದರೂ ಗಾಂಧೀಜಿ ಮುಸ್ಲಿಮರ ಮೇಲಿನ ಕಾಳಜಿಯಿಂದ ಹಣ ಕೊಡಿಸಿದರು. ಇದು ಎಲ್ಲರೂ ಕೆರಳುವಂತೆ ಮಾಡಿತ್ತು. ಗೋಡ್ಸೆಯಂಥವರು  ಹುಟ್ಟಿಕೊಂಡಿದ್ದೇ ಆಗ.   

ವಿಭಜನೆಯ ನಂತರ ಪಾಕ್‌ನಿಂದ ಲಕ್ಷಾಂತರ ಹಿಂದೂ ನಿರ್ವಾಸಿತರು ಎಲ್ಲವನ್ನು ಕಳೆದುಕೊಂಡು ಭಾರತಕ್ಕೆ ಬಂದಾಗ  ಅವರ ಕುರಿತು ಇದೇ ಮಹಾತ್ಮ ಹೇಳಿದ ಮಾತೇನು-" ಎಲ್ಲಾದರೂ ಹೋಗಿ ಸಾಯಿರಿ. ಆಕಾಶ ಮೇಲಿದೆ, ಭೂಮಿ ಕೆಳಗಿದೆ, ಸಾಕಲ್ಲ"   

 ಆಗ ಅವರಿಗೆಲ್ಲ ಆಶ್ರಯ ಒದಗಿಸಿದವರು ಸರ್ದಾರ ಪಟೇಲರು. ಅವರನ್ನು ಮುಸ್ಲಿಂ ವಿರೋಧಿಗಳು ಎಂದರು. ಎಲ್ಲಾದರೂ ಹೋಗಿ ಸಾಯಿರಿ ಎಂದವರು ರಾಷ್ಟ್ರಪಿತ ಮಹಾತ್ಮರಾದರು. ಇಂತಹ ಹಲವು ಸಂಗತಿಗಳು ಬಹುಶಃ ಕೆಲವರಿಗೆ ಅಪ್ರಿಯವಾಗಬಹುದು. ಆದರೆ ಸತ್ಯ ಸತ್ಯವೇ. ಸತ್ಯ ಸಂಗತಿ ತಿಳಿದುಕೊಳ್ಳಬೇಕೆಂಬ ಜಿಜ್ಞಾಸು ಮನಸ್ಸು ಇದ್ದರೆ ಇಂತಹ ಪುಸ್ತಕಗಳನ್ನು ಓದಬಹುದು. ಸತ್ಯವನ್ನು ಎದುರಿಸಲು ಹೆದರುವವರು ಓದದಿದ್ದರೂ ನಡೆದೀತು.  ಇಲ್ಲಿ ನಾನು ಪುಸ್ತಕದಲ್ಲಿರುವ ವಿಚಾರಗಳು ಹೀಗಿವೆ ಎಂದು ಹೇಳಿದ್ದೇನೆ ಹೊರತು ಅದರಲ್ಲಿ ನನ್ನ ಸ್ವಂತದ ವಿಚಾರಗಳು ಏನೂ ಇಲ್ಲ. ನಾನು ಗೋಡ್ಸೆ ಸಮರ್ಥಕನೂ ಅಲ್ಲ, ಗಾಂಧಿ ವಿರೋಧಿಯೂ ಅಲ್ಲ.  ಆದರೆ ನನ್ನ ಕುತೂಹಲಕ್ಕೆ, ಸಂದೇಹಕ್ಕೆ  ಕಾರಣವಾದ ಕೆಲ ಸಂಗತಿಗಳ ನಿಜವನ್ನು ತಿಳಿಯುವ ಸಲುವಾಗಿ ಓದಿದ್ದೇನೆ. ಇತರರಿಗೂ ಅದರ ಸಂಕ್ಷಿಪ್ತ ವಿವರ ಹಂಚಿದ್ದೇನೆ. ಸರಿಯೋ ತಪ್ಪೋ ಅದು ಅವರವರ ನಿರ್ಣಯಕ್ಕೆ ಬಿಟ್ಟಿದ್ದು. ಪುಸ್ತಕ ಪೂರ್ತಿ ಓದುವದು ಒಳ್ಳೆಯದು. ಇಲ್ಲಿಯ ಅನೇಕ ವಿಷಯಗಳು ತರ್ಕಬದ್ಧವಾಗಿವೆ. ಆಧಾರಗಳೂ ಇವೆ. ಯಾವುದೇ ವಿಷಯವಿರಲಿ ಒಂದೇ ಮಗ್ಗುಲಲ್ಲಿ ನೋಡುತ್ತ ಹೋಗುವ ಬದಲು ಎರಡೂ ಮಗ್ಗುಲುಗಳಲ್ಲಿ ನೋಡಿ ತೀರ್ಮಾನಿಸುವದು ಉತ್ತಮ.   

- * * * -