ಅಕ್ಕಿ ಗಾಗಿ ಜನಜಂಗುಳಿ, ಹೊಸಕೋಟೆ ಪೊಲೀಸರೆ ಎಲ್ಲಿದ್ದಿರೀ

ದೇವನಹಳ್ಳಿ, ಏ 16, ಹೊಸಕೋಟೆಯಲ್ಲಿ  ಪೊಲೀಸರು ಇಲ್ಲವೇ ? ಇದ್ದರೂ ಅವರು  ತಮ್ಮ ಪಾಲಿನ ಕೆಲಸ  ಕೆಲಸ ಮರೆತು ಬಿಟ್ಟರೆ? ನಿಮ್ಮ  ಅಕ್ಕಪಕ್ಕ ಅದೂ  ಎಡ, ಬಲ ರಾಜರೋಷವಾಗಿ  ನಿಯಮ  ಉಲ್ಲಂಘನೆ ಮಾಡಿ ಸಾಮಾಜಿಕ ಅಂತರವಿಲ್ಲದೆ ಜನರು ಒಬ್ಬರ ಮೇಲೆ ಬೀಳುವಂತಹ ಪರಿಸ್ಥಿತಿ  ಬಂದರೂ ಕೇಳುವವರಿಲ್ಲವೆ?  ನೋಡುವವರಿಲ್ಲವೆ? ?  ಬಡವರಿಗೆ ಒಂದು ನ್ಯಾಯ,  ಬಲಾಡ್ಯರಿಗೆ ಒಂದು ನ್ಯಾಯವೇ ಒಂದೇ ಸ್ಥಳದಲ್ಲಿ ಸಾವಿರಾರು ಜನ ಸೇರಿದ್ದಾರೆ ಹೊಸಕೋಟೆ ನಗರದ 31 ನೇ ವಾರ್ಡ್ ನಲ್ಲಿ  ನಿಯಮ   ಉಲ್ಲಂಘನೆಯಾಗಿದೆ,  ಮಾಜಿ ಸಚಿವ ಎಂಟಿಬಿ ನಾಗರಾಜ್ ಅಕ್ಕಿ ವಿತರಣೆ  ಮಾಡಿದಾಗ ಸೇರಿದ್ದ ಜನಜಂಗುಳಿ ನಿಮ್ಮ ಗಮನಕ್ಕೆ ಬರಲಿಲ್ಲವೆ?   ಹೊಸಕೋಟೆ ತಾಲೂಕಿನಲ್ಲಿ ಈಗಾಗಲೇ 4 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿ,   ಡೇಂಜರ್ ವಲಯವಾಗಿದ್ದರೂ  ಪೋಲಿಸರು ಸರಿಯಾಗಿ ಗಮನ ಕೊಡದಿರುವ ಕಾರಣ  ಜನ ಸಾಗರೋಪಾದಿಯಲ್ಲಿ ಸೇರಿದ್ದು ಎಲ್ಲರಿಗೂ  ಗೊತ್ತಾಗಿರುವಾಗ  ನಿಮಗೆ ಗೊತ್ತಾಗಲಿಲ್ಲವೇ , ಅಥವಾ  ನಿಮ್ಮ ಗಮನಕ್ಕೆ ಬಾರದೆ ಕಾರ್ಯಕ್ರಮ ನಡೆಯಿತೆ ಎಂಬ ಅನುಮಾನ ಸಹ ಕಾಡುತ್ತಿದೆ .