ಜಾತೀಯತೆ ತೊಲಗಿದಾಗ ನೆಮ್ಮದಿಯ ಸಮಾಜ ನಿರ್ಮಾಣ ಸಾಧ್ಯ. ಮು.ಗು ಚಂದ್ರಯ್ಯ
When casteism is eliminated, a peaceful society can be built. M.G. Chandraiah
ಲೋಕದರ್ಶನ ವರದಿ
ಕಂಪಿ ್ಲ 15: ತಾಲೂಕು ಶರಣ ಸಾಹಿತ್ಯ ಪರಿಷತ್ ಇಲ್ಲಿನ ಗಂಗಾಸಂಕೀರ್ಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ 188ನೇ ಮಹಾಮನೆ ಕಾರ್ಯಕ್ರಮ ನಡೆಯಿತು.ಪಟ್ಟಣದ ಎಲೆಕ್ಟ್ರಾನಿಕ್ಸ್ ವಸ್ತು ದುರಸ್ತಿಗಾರ ಬಿ.ಎಚ್.ಎಂ.ಚಂದ್ರಮಹೇಶಶಾಸ್ತ್ರಿ ‘ಶರಣ ವಿಚಾರಧಾರೆ’ ಕುರಿತು ಮಾತನಾಡಿ, ಸರಳ ಮತ್ತು ಅರ್ಥಪೂರ್ಣ ಜೀವನ ನೆಡಸಲು ಶರಣರ ವಿಚಾರಧಾರೆ ಅಗತ್ಯವಾಗಿದೆ. ವಚನಗಳು ಸಮಾಜ ತಿದ್ದುವಲ್ಲಿ ಪ್ರಮುಖ ಪಾತ್ರವಹಿಸಿವೆ. ಶರಣರ ತತ್ವ ಆದರ್ಶಗಳನ್ನು ನಿಜ ಜೀವನದಲ್ಲಿ ಎಲ್ಲಾ ಸ್ತರಗಳಲ್ಲೂ ಅನುಷ್ಠಾನ ಅಗತ್ಯವಿದೆ ಎಂದರು. ಇಟಗಿ ಸಹಿಪ್ರಾ ಶಾಲೆ ಮುಖ್ಯ ಶಿಕ್ಷಕ ಚಂದ್ರಯ್ಯ ಸೊಪ್ಪಿಮಠ ಮಾತನಾಡಿ, ಜಾತೀಯತೆ ತೊಲಗಿದಾಗ ಮಾತ್ರ ಶಾಂತಿ, ನೆಮ್ಮದಿಯ ಸಮಾಜ ನಿರ್ಮಾಣ ಸಾಧ್ಯ.
ಸಮಾಜ ಒಡೆಯುವ ಕೆಲಸ ಯಾರೂ ಮಾಡಬಾರದು. ಸಮಾಜದಲ್ಲಿ ಉತ್ತಮ ವಾತಾವರಣ ಮೂಡಿಸಲು ಶರಣ ಸಾಹಿತ್ಯ ಚಿಂತನೆ ಮತ್ತು ಅಳವಡಿಕೆ ಅಗತ್ಯವಿದೆ ಶರಣ ತತ್ವ ಚಿಂತನೆಯ ಕೊರತೆಯಿಂದ ಜಗತ್ತಿನಲ್ಲಿ ಯುದ್ಧ ನಡೆಯಲು ಕಾರಣವಾಗಿದೆ ಎಂದು ಹೇಳಿದರು. ಪರಿಷತ್ ಅಧ್ಯಕ್ಷ ಜಿ.ಪ್ರಕಾಶ್ ಅಧ್ಯಕ್ಷತೆವಹಿಸಿದ್ದರು. ನಿವೃತ್ತ ಮುಖ್ಯಶಿಕ್ಷಕ ಕೆ.ಚಂದ್ರಶೇಖರ್, ಪರಿಷತ್ ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ, ಪ್ರಮುಖರಾದ ಎಸ್.ಡಿ.ಬಸವರಾಜ, ಎಲಿಗಾರ ವೆಂಕಟರೆಡ್ಡಿ, ಅಂಬಿಗರ ಮಂಜುನಾಥ, ಅಶೋಕ ಕುಕನೂರು, ಸಜ್ಜೇದ ವೀರಭದ್ರ್ಪ, ಎಸ್.ರಾಮಪ್ಪ, ಮಡಿವಾಳ ಹುಲುಗಪ್ಪ, ಟಿ.ನಿರಂಜನಸ್ವಾಮಿ, ಬಿ.ಎಂ.ರುದ್ರಯ್ಯ, ಸಿ.ಕೆ.ಚಿದಾಂಬರ, ಕೆ.ಯಂಕಾರೆಡ್ಡಿ, ಯು.ಎಂ.ವಿದ್ಯಾಶಂಕರ ಇತರರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 