ಯರಗಟ್ಟಿ ಪಟ್ಟಣ ಪಂಚಾಯಿತಿ ಚುನಾವಣೆ ಯಾವಾಗ?
When are the Yaragati Town Panchayat elections?
ವರದಿ: ಈರಣ್ಣಾ ಹುಲ್ಲೂರ, ಯರಗಟ್ಟಿ
ಕಣ್ಣು ಮುಚ್ಚಿ ಕುಳಿತ ಸರಕಾರ ಜನ ಪ್ರತಿನಿಧಿಗಳು
ಯರಗಟ್ಟಿ 25: ಸ್ಥಳೀಯರ ಬಹುದಿನಗಳ ತಾಲ್ಲೂಕು ಬೇಡಿಕೆ ಬೆಳಗಾವಿ ಜಿಲ್ಲೆಯಲ್ಲಿಯೇ ಮೊದಲಾಗಿ ಅಧಿಕೃತವಾಗಿ ಫೆಬ್ರುವರಿ 28, 2019ರಂದು ಯರಗಟ್ಟಿ ತಾಲೂಕು ಆಡಳಿತಾತ್ಮಕ ಅನಮೊದನೆ ಈಡೇರಿದೆ. ಈ ವೇಳೆ ಗ್ರಾಮ ಪಂಚಾಯಿತಿಯಾಗಿದ್ದ ಇಲ್ಲಿಯ ಆಡಳಿತ ಕೇಂದ್ರ ಒಂದುವರೆ ವರ್ಷದಲ್ಲಿ ಅಂದರೆ ಫೆಬ್ರುವರಿ 19, 2021ರಂದು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದೆ.
ಆದರೆ, ಇಲ್ಲಿವರೆಗೂ ಇದರ ಚುನಾವಣೆ ನಡೆಸದೆ ಮುಂದೂಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಅನುಮಾನಕ್ಕೆ ಕಾರಣವಾಗಿದ್ದು ಚುನಾವಣೆ ಯಾವಾಗ? ಎಂಬ ಪ್ರಶ್ನೆ ಕೇಳಿಬರುತ್ತಿದೆ.
ಈ ಮೊದಲು 2015ರ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದು ಬಂದ 25 ಜನಪ್ರತಿನಿಧಿಗಳು ಇದ್ದರು. 2020ರ ಅವಧಿಗೆ ಚುನಾವಣೆ ಪೂರ್ಣಗೊಳ್ಳುವ ಮುನ್ನವೇ ಪಿಡಿಓ, ಕಾರ್ಯದರ್ಶಿ ಹುದ್ದೆ ರದ್ದಾಗಿ ಆ ಜಾಗದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕುಳಿತುಕೊಂಡಿದ್ದಾರೆ. ನಂತರ ಸರಕಾರಿದಿಂದ ಮೂರುಜನ ನಾಮನಿರ್ದೇಶಿತ ಸದಸ್ಯರನ್ನು ಘೋಷಣೆ ಮಾಡಲಾಯಿತು.
ಜನವಸತಿ ಪ್ರದೇಶಗಳನ್ನು ಪರಿಷ್ಕೃತಗೊಳಿಸಿ ಸ್ಥಳೀಯವಾಗಿ ಗ್ರಾಮ ಪಂಚಾಯತ ಅವಧಿಯಲ್ಲಿ 09 ವಾರ್ಡಗಳನ್ನು ಹೊಂದಿತ್ತು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ನಂತರ ಒಟ್ಟು 11 ವಾರ್ಡ್‌ಗಳ ರಚನೆಯಾಯಿತು. ಪೂರಕವೆಂಬಂತೆ ವಾರ್ಡ್‌ವಾರು ಅಭ್ಯರ್ಥಿಗಳ ಚುನಾವಣಾ ಮೀಸಲಾತಿ ಪ್ರಕಟಿಸಿ ಸಾರ್ವಜನಿಕರ ಆಕ್ಷೇಪಣೆಗಳ ಸಲ್ಲಿಕೆ ಮುಕ್ತಾಯಗೊಂಡು 3 ವರ್ಷ ಮೇಲಾಗಿದೆ. ಆದರೆ ಇಲ್ಲಿವರೆಗೂ ಅದರ ಅಂತಿಮ ಅಧಿಸೂಚನೆ ಹೊರಬಿದ್ದಿಲ್ಲ.
ಈ ಪಂಚಾಯಿತಿ ಅಸ್ತಿತ್ವಕ್ಕೆ ಬಂದು ನಾಲ್ಕುವರೆ ವರ್ಷ ಕಳೆಯುತ್ತ ಐದು ವರ್ಷದ ಒಂದು ಅವಧಿಯೇ ಮುಗಿಯುವ ಹಂತದಲ್ಲಿದೆ. ಇಷ್ಟಾದರೂ ಚುನಾವಣೆ ನಡೆಯದೆ ಒಂದುಕಡೆ ಅಧಿಕಾರಿಗಳ ಮೇಲೆ ಆಡಳಿತದ ಭಾರ ಎನಿಸಿದರೆ, ಈ ನೀತಿ ಸಾರ್ವಜನಿಕರಿಗೆ ಹೊರೆಯಾಗಿ ಪರಿಣಮಿಸಿದೆ.
ಬೆಳಗಾವಿ ಜಿಲ್ಲೆಯ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ಯರಗಟ್ಟಿ, ಅಕ್ಕತಂಗೆರಹಾಳ ಪೀರನವಾಡಿ ಇಲ್ಲಿನ ಪಟ್ಟಣ ಪಂಚಾಯಿತಿಗೆ ಇದುವರೆಗೂ ಚುನಾವಣೆ ಪ್ರಕಟಗೊಂಡಿಲ್ಲಾ
ಆದರೆ, ರಚನೆಯಾದ ಯರಗಟ್ಟಿ ಪಟ್ಟಣ ಪಂಚಾಯಿತಿಗೆ ಚುನಾವಣೆ ಯಾಕೆ ಮುಂದೂಡಲಾಗುತ್ತಿದೆ? ಎಂದು ಸಂಬಂಧಪಟ್ಟ ಅಧಿಕಾರಿಗಳೇ ಉತ್ತರಿಸಬೇಕಿದೆ.
ವಾರ್ಡ್‌ವಾರು ಮೀಸಲಾತಿ ಪ್ರಕಟಿಸಿ ಆಕ್ಷೇಪಣೆ ಕರೆಯಲಾಗಿತ್ತು ಈ ಪ್ರಕ್ರಿಯೆಯೂ ಪೂರ್ಣಗೊಂಡಿದೆ. ಆದರೆ ಸರಕಾರದಿಂದ ಚುನಾವಣೆಗೆ ಅಂತಿಮ ಅಧಿಸೂಚನೆ ಪ್ರಕಟಗೊಂಡಿಲ್ಲ.
-ಮಹೇಶ ಭಜಂತ್ರಿ, ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ, ಯರಗಟ್ಟಿ
ಯಾವುದೇ ಅಡೆತಡೆ ಇಲ್ಲದಿದ್ದರೂ ಈ ಪಟ್ಟಣ ಪಂಚಾಯಿತಿ ಚುನಾವಣೆಗೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಇದು ಅವರಿಗೆ ಬೇಕಾದಂತೆ ಕಾಣುತಿಲ್ಲ.
-ಬಸವರಾಜ ಚನ್ನಮೇತ್ರಿ, ಮಾಜಿ ಗ್ರಾ. ಪಂ. ಸದಸ್ಯರು
ರಾಜ್ಯ ಸರಕಾರ ಕಣ್ಣು ಮುಚ್ಚಿ ಕುಳಿತಿದೆ ರಾಜ್ಯದ ತಾಲೂಕು ಪಂಚಾಯತ, ಜಿಲ್ಲಾ ಪಂಚಾಯತ, ಪಟ್ಟಣ ಪಂಚಾಯತ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ಬೇಗ ಆಗಬೇಕು ಈಗಲೇ ತಡವಾಗಿದೆ. ಚುನಾವಣೆ ಆಗದಿದ್ದರೆ ತಾ. ಪಂ, ಜಿ. ಪಂ., ಪ. ಪಂ, ಮತ್ತು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಲ್ಲಿ ಬಿಗು ಇರುವುದಿಲ್ಲ.
-ಈರಣ್ಣಾ ಚಂದರಗಿ, ಮಾಜಿ ಬಿಜೆಪಿ ಮಂಡಳ ಅಧ್ಯಕ್ಷ
ಈ ಚುನಾವಣೆ ನಡೆಯದಿರಲು ಕ್ಷೇತ್ರದ ಶಾಸಕರು ನಿರಾಸಕ್ತಿ ವಹಿಸುತ್ತಿದ್ದಾರೆ. ಚುನಾವಣೆ ಮುಂದೂಡಿಕೆಗೆ ಶಾಸಕರ ನಿಷ್ಕಾಳಜಿಯೆ ಕಾರಣ.
-ಚೇತನ ಜಕಾತಿ, ಸ್ಥಳೀಯ ನಿವಾಸಿ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 