ಹೆಗ್ಗೂರ ಆಂಜನೇಯ ದೇವಸ್ಥಾನದ ಸುತ್ತ ಭಂಡಾರ ಮೇಳೆ ಏನಿದು ಅಚ್ಚರಿ

ಹೆಗ್ಗೂರ ಆಂಜನೇಯ ದೇವಸ್ಥಾನದ ಸುತ್ತ ಭಂಡಾರ ಮೇಳೆ ಏನಿದು ಅಚ್ಚರಿ What is the surprise of the Bhandara Mela around the Heggur Anjaneya Temple?

ಹೆಗ್ಗೂರ ಆಂಜನೇಯ ದೇವಸ್ಥಾನದ ಸುತ್ತ ಭಂಡಾರ ಮೇಳೆ ಏನಿದು ಅಚ್ಚರಿ 

ಬೀಳಗಿ 13: ಮಳೆಹನಿಗಳ ರೂಪದಲ್ಲಿ ಆಂಜನೇಯ ದೇವಸ್ಥಾನದ 15 ಅಡಿ ಸುತ್ತಲೂ ಭಂಡಾರ ಮೇಳೆ ಸಿಂಪಡಣೆ ಆಗಿದೆ,ಇದನ್ನ ಕಣ್ಣಾರೆ ನೋಡಿರುವುದಾಗಿ ಗ್ರಾಮದ ಹಿರಿಯ ಜೀವಿ ಸಿದ್ದವ್ವ (90)ಎನ್ನುವ ವಯೋವೃದ್ಧರು ಇದು ಬಂಡಾರ ಮಳೆಯಾಗಿದೆ ಎಂದು ಹೇಳುತ್ತಿದ್ದಾರೆ.         

ತಾಲೂಕಿನ ಹೆಗ್ಗೂರ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ಅಚ್ಚರಿ ವಿದ್ಯಮಾನಕ್ಕೆ ಗ್ರಾಮಸ್ಥರು ಸಾಕ್ಷಿಯಾಗಿದ್ದಾರೆ, ಮಳೆಹನಿಗಳ ರೂಪದಲ್ಲಿ ದೇವಸ್ಥಾನದ ಆವರಣ ಸುತ್ತಲೂ ಭಂಡಾರ ಬಿದ್ದಿದೆ.ಇದನ್ನೇ ಗ್ರಾಮಸ್ಥರು ಭಂಡಾರದ ಮಳೆ ಎಂದು ತಿಳಿದು ದೇವಾಲಯದತ್ತ ಜನರು ಆಗಮಿಸಿ ಬಿದ್ದಿರೋ ಭಂಡಾರವನ್ನು ಹಣೆಗೆ ತಿಲಕವನ್ನಾಗಿ ಹಚ್ಚಿಕೊಳ್ಳುತ್ತಿದ್ದಾರೆ. ಕೆಲವರು ಈ ಭಂಡಾರವನ್ನು ಸಂಗ್ರಹಿಸಿ ತೆಗೆದುಕೊಂಡು ಹೋಗುತ್ತಿರುವುದು ಕಂಡಿತು.      ಇನ್ನು ಭಂಡಾರದ ಮಳೆ ಬಗ್ಗೆ ಅರ್ಚಕ ಮುತ್ತನಗೌಡ ಪಾಟೀಲ ಮಾತನಾಡಿ ಶುಕ್ರವಾರ ಸಂಜೆ 5ರ ವೇಳೆ ಗ್ರಾಮದಲ್ಲಿ ಮಳೆಯಾಗಿತ್ತು.ಬೆಳಗ್ಗೆ ದೇವಸ್ಥಾನಕ್ಕೆ ಬಂದ ಜನರು,ಹನಿಗಳ ರೂಪದಲ್ಲಿ ಭಂಡಾರ ಬಿದ್ದಿರೋದನ್ನು ಗಮನಿಸಿದ್ದಾರೆ.ಕೂಡಲೇ ನನಗೆ ಮಾಹಿತಿ ನೀಡಿದರು.ಬಂದು ನೋಡಿದಾಗ ಮಳೆಹನಿ ರೂಪದಲ್ಲಿ ಭಂಡಾರ ಬಿದ್ದಿರೋದು ನನ್ನ ಗಮನಕ್ಕೂ ಬಂತು.ನಂತರ ಗ್ರಾಮದ ಹಿರಿಯರಿಗೂ ತಿಳಿಸಲಾಯ್ತು.ಎಲ್ಲರೂ ದೇವಸ್ಥಾನದತ್ತ ಬರುತ್ತಿದ್ದಾರೆ ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.        

್ಖಕೋಟ್ಖ್‌ ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ಥರಾದ ನಾವು ಮುಳುಗಡೆ ನಂತರ ಹೊಸ ಊರಿಗೆ ಬಂದು 20-30 ವರ್ಷಗಳಿಂದ ಈ ಗ್ರಾಮದಲ್ಲಿದ್ದೇವೆ.ಒಳ್ಳೆಯದಕ್ಕೋ ಕೆಟ್ಟದಕ್ಕೋ ಗೊತ್ತಿಲ್ಲ,ದೇವಸ್ಥಾನದ ಸುತ್ತ ಹದಿನೈದು ಅಡಿ ವ್ಯಾಪ್ತಿ ಈ ತರಹ ಹಳದಿ ಕಲೆಗಳು ಕಾಣಿಸಿಕೊಂಡಿವೆ. ಇದು ಎಲ್ಲರಿಗೂ ಅಚ್ಚರಿ ಮೂಡಿಸುತ್ತಿದೆ.ಆದರೆ ಕಳೆದ ವರ್ಷ ಡಿಸೆಂಬರ್ 1 2024 ರಂದು ನಮ್ಮೂರಿನ ಸಂಜೀವಮೂರ್ತಿ ದೇವಸ್ಥಾನ ಜಾತ್ರೆಯ ಕೊನೆಯ ದಿನ ವಿಜಯಪುರ ಜಿಲ್ಲೆಯ ಝಳಕಿ  ಕಲಾವಿದರಿಂದ ಬೀರದೇವರ ನಾಟಕ ಪ್ರದರ್ಶನ ನಡೆಯಿತು, ಈ ನಾಟಕದಲ್ಲಿ ಝಳಕಿ ಬೀರದೇವರ ಅರ್ಚಕ ಹಾಗೂ ಕಲಾವಿದ ಯಲ್ಲಪ್ಪ ಗ್ರಾಮದ ಹಿರಿಯರ ಮುಂದೆ ಈ ಗ್ರಾಮದಲ್ಲಿ ಮುಂದಿನ ವರ್ಷ ಬೀರದೇವರ ದೇವಸ್ಥಾನ ನಿರ್ಮಾಣ ಆಗುತ್ತದೆ ಎಂದು ಭವಿಷ್ಯ ನಡೆದಿದ್ದರು, ಅದರಂತೆ ಇದೆ ಜಾಗದಲ್ಲಿ ಈಗ ಬಂಡಾರದ ಮಳೆ ಆಗಿದೆ,ನಮ್ಮೂರಲ್ಲಿ ಬೀರದೇವರ ದೇವಸ್ಥಾನ ಇಲ್ಲಾ. ಆಂಜನೇಯ ದೇವಸ್ಥಾನ ಸುತ್ತಲೂ ಭಂಡಾರ ಬಿದ್ದಿರೋದು ಕಂಡು ಆಶ್ಚರ್ಯ ಆಯ್ತು ಈ ರೀತಿಯ ಭಂಡಾರ ಮಳೆ ನೋಡಿಯೂ ಇಲ್ಲ ಮತ್ತು ಕೇಳಿಯೂ ಇಲ್ಲ. ಗ್ರಾಮಸ್ಥ ಕೆಂಚಪ್ಪ ಮೆಲ್ನಾಡಮಳೆ ಹನಿಯ ಹಳದಿ ಕಲೆಗಳನ್ನು ಕಂಡು ಜನರು ಅಚ್ಚರಿ ವ್ಯಕ್ತಪಡಿಸುತ್ತ ನಿಂತಾಗ ದೇವಸ್ಥಾನಕ್ಕೆ ಬಂದ 90 ವರ್ಷದ ಸಿದ್ದವ್ವ ಅಜ್ಜಿಯ ಮೇಲೆ ದೇವರ ಬಂದು ಕೆಲ ಹೇಳಿಕೆ ನೀಡಿದರು,ಭಂಡಾರ ಮಳೆಯಾಗಿದ್ದಕ್ಕೆ ಯಾವುದೇ ಭಯ ಬೇಡ.ಹೊಳೆ ದಾಟಿ ಬಂದ ನಂತರ ಇಲ್ಲಿನ ಎಲ್ಲರಿಗೂ ಸುಖವಿದೆ.ಭಂಡಾರ ಮಳೆ ಒಳ್ಳೆಯದರ ಸುಳಿವು ಎಂದು ಹೇಳಿಕೆ ನುಡಿದಿದ್ದಾರೆ.ಈ ಮೂಲಕ ಗ್ರಾಮಸ್ಥರಲ್ಲಿದ್ದ ಭಯವನ್ನು ನಿವಾರಿಸೋ ಪ್ರಯತ್ನ ಮಾಡಲಾಯ್ತು. 

ಈ ವಿದ್ಯಮಾನದ ಬಳಿಗ ಹೆಗ್ಗೂರು ಆಂಜನೇಯ ದೇವಸ್ಥಾನಕ್ಕೆ ಆಗಮಿಸುತ್ತಿರೋ ಭಕ್ತರ ಸಂಖ್ಯೆ ಏರಿಕೆಯಾಗಿದೆ. ಈ ವೇಳೆ ಕೆಂಚಪ್ಪ ಮೆಲ್ನಾಡ, ಪಡಿಯಪ್ಪ ಹೇರಕಲ, ಅರ್ಚಕ ಮುತ್ತನಗೌಡ  ಪಾಟೀಲ, ಸಿದ್ದವ್ವ ಒಗ್ಗರ, ಹಣಮವ್ವ  ಹೆರಕಲ, ಬಾಳವ್ವ ಮೆಲ್ನಾಡ ಸೇರಿ ಅನೇಕರು ಉಪಸ್ಥಿತರಿದ್ದರು.