ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ
ಡೊನಾಲ್ಡ್ ಟ್ರಂಪ್ ಜತೆ ಸಂಬಂಧ ಹೊಂದಿರುವುದಾಗಿ ಆರೋಪಿಸಿದ್ದ ನೀಲಿ ಚಿತ್ರಗಳ ತಾರೆ ಸ್ಟಾರ್ವಿು ಡೇನಿಯಲ್ಸ್
ಅವರನ್ನು ಗುರುವಾರ ಓಹಿಯೋ ಸ್ಟ್ರಿಪ್ ಕ್ಲಬ್ ನಲ್ಲಿ ಬಂಧಿಸಲಾಗಿದೆ.
ಓಹಿಯೋ ಸ್ಟ್ರಿಪ್ ಕ್ಲಬ್ ನಲ್ಲಿ
ಪ್ರದರ್ಶನ ನೀಡುತ್ತಿದ್ದ ವೇಳೆ ಲೈಂಗಿಕವಲ್ಲದ ರೀತಿಯಲ್ಲಿ ಗ್ರಾಹಕರು ತನ್ನನ್ನು ಸ್ಪರ್ಶಿಸಲು ಅನುವು
ಮಾಡಿಕೊಟ್ಟ ಆರೋಪದ ಮೇಲೆ ಸ್ಟಾರ್ಮಿಯನ್ನು ಬಂಧಿಸಲಾಗಿದೆ.
ಇದೊಂದು ಬಾಯಿ ಮುಚ್ಚಿಸುವ ಮತ್ತು
ರಾಜಕೀಯ ಪ್ರೇರಿತ ಕ್ರಮ ಎಂದು ಸ್ಟಾರ್ಮಿ ವಕೀಲ ಮೈಕಲ್ ಅವೆನಾಟ್ಟಿ ಅವರು ಆರೋಪಿಸಿದ್ದಾರೆ.
ಪೋರ್ನ್ ಸ್ಟಾರ್ ನಟಿ ಸ್ಟಾರ್ಮಿ
ಡೇನಿಯಲ್ಸ್ ಸಂದರ್ಶನವೊಂದರಲ್ಲಿ ತಾನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಸಂಬಂಧ ಹೊಂದಿರುವುದಾಗಿ
ಹೇಳಿಕೊಂಡಿದ್ದಳು.
ತಮ್ಮ ಜತೆ ಸಂಬಂಧ ಹೊಂದಿದ್ದರು ಎಂಬುದನ್ನು
ಬಹಿರಂಗಪಡಿಸದಿರಲು ಸ್ಟಾರ್ವಿುಗೆ ಟ್ರಂಪ್ ಅಂದಾಜು 84.60 ಲಕ್ಷ ರು. ಕೊಟ್ಟಿದ್ದರು. ಆದರೆ, ಈಗ ಈ
ಹಣವನ್ನು ಟ್ರಂಪ್ ಗೆ ಮರಳಿಸಿ, ತಮ್ಮಿಬ್ಬರ ಸಂಬಂಧವನ್ನು ಬಹಿರಂಗಪಡಿಸಲು ಸ್ಟಾರ್ವಿು ಬಯಸಿದ್ದಾರೆ.
ಈ ಹಿನ್ನೆಲೆಯಲ್ಲಿ ತಮ್ಮೊಂದಿಗೆ ಮಾಡಿಕೊಳ್ಳಲಾಗಿದ್ದ ಒಪ್ಪಂದದ ವಿರುದ್ಧ ಸ್ಟಾರ್ವಿು ನ್ಯಾಯಾಲಯದಲ್ಲಿ
ದಾವೆ ಹೂಡಿದ್ದಾರೆ.