ಕೊರೊನವೈರಸ್‍ಗೆ ಪಶ್ಚಿಮ ಬಂಗಾಳದಲ್ಲಿ ಮೊದಲ ಬಲಿ, ದೇಶದಲ್ಲಿ ಸಾವಿನ ಸಂಖ್ಯೆ 8ಕ್ಕೆ ಏರಿಕೆ

ನವದೆಹಲಿ / ಕೋಲ್ಕತಾ ಮಾರ್ಚ್ 23 ಕೋವಿದ್‍ -19 ಸೋಂಕು ಸೋಮವಾರ ಕೋಲ್ಕತಾದಲ್ಲಿ ಒಬ್ಬ ವ್ಯಕ್ತಿಯನ್ನು  ಬಲಿ ಪಡೆದಿದ್ದು, ಪಶ್ಚಿಮ ಬಂಗಾಳದಲ್ಲಿ ಸೋಂಕಿನಿಂದ ಸಂಭವಿಸಿದ ಮೊದಲನೆಯ ಪ್ರಕರಣ ಇದಾಗಿದೆ.  ಇದರೊಂದಿಗೆ ಮಾರಕ ಸೋಂಕಿನಿಂದ ದೇಶದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಎಂಟಕ್ಕೆ ತಲುಪಿದೆ.
 ಕರೋನವೈರಸ್‍ ದೃಢಪಟ್ಟಿದ್ದ 57 ವರ್ಷ ವಯಸ್ಸಿನ ರೋಗಿ ಸಾಲ್ಟ್ ಲೇಕ್‌ನ ಎಎಂಆರ್‌ಐ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಈ ವ್ಯಕ್ತಿಯು ಅಮೆರಿಕದಿಂದ ವಾಪಸ್ಸಾದ ಮಗನನ್ನು ಭೇಟಿಯಾಗಿರಬಹುದು ಎಂದು ಶಂಕಿಸಲಾಗಿದೆ. ಮಾರ್ಚ್ 8 ರಂದು ಮಾಲ್‌ಗೆ ಭೇಟಿ ನೀಡಿದ್ದಾಗ ಅಥವಾ ಮಾರ್ಚ್ 13 ರಂದು ಬಿಲಾಸ್‍ಪುರದಿಂದ ತಮ್ಮ ಹೆಂಡತಿಯೊಂದಿಗೆ ಪ್ರವಾಸದಿಂದ ಹಿಂತಿರುಗಿದ್ದಾಗ ಸೋಂಕಿಗೆ ಒಳಗಾಗಿರಬಹುದು ಎನ್ನಲಾಗಿದೆ.
 ವ್ಯಕ್ತಿಯನ್ನು ಮಾರ್ಚ್ 14 ರಂದು ಆಸ್ಪತ್ರೆಗೆ ದಾಖಲಿಸಲಾಗಿ, ಕೆಲ ದಿನಗಳ ನಂತರ ಅವರನ್ನು ಪರೀಕ್ಷಿಸಲಾಗಿತ್ತು. ತನ್ನ ಮಗನನ್ನು ಭೇಟಿಯಾದ ಕೆಲವೇ ದಿನಗಳಲ್ಲಿ ಚತ್ತೀಸ್‌ಗಢಕ್ಕೆ ಭೇಟಿ ನೀಡಿರುವುದು ವ್ಯಕ್ತಿಯ ಪ್ರಯಾಣ ಇತಿಯಾಸದಿಂದ ಗೊತ್ತಾಗಿದೆ. ಈ ವ್ಯಕ್ತಿ ಆಜಾದ್ ಹಿಂದ್ ಎಕ್ಸ್‌ಪ್ರೆಸ್ ಮೂಲಕ ಕೋಲ್ಕತ್ತಾಗೆ ಬಂದಿದ್ದರು. ರಾಜ್ಯದಲ್ಲಿ ರೋಗ ಹರಡದಂತೆ ತಡೆಯುವ ಕ್ರಮವಾಗಿ ಪಶ್ಚಿಮ ಬಂಗಾಳ ಸರ್ಕಾರದ ಸೂಚನೆಯಂತೆ ಮೃತ ವ್ಯಕ್ತಿಯ ಅಂತಿಮ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು. ಹೃದಯಾಘಾತದಿಂದ ವ್ಯಕ್ತಿ ಸೋಮವಾರ ಆಸ್ಪತ್ರೆಯಲ್ಲಿ ನಿಧನಹೊಂದಿದ್ದಾರೆ. ಈ ಮಧ್ಯೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ.ಆರ್.ಆರ್. ಗಂಗಖೇಡ್ಕರ್ ಅವರು ಹೇಳುವಂತೆ ದೇಶದಲ್ಲಿ ಸಮುದಾಯ ಹರಡುವಿಕೆ ಲಕ್ಷಣಗಳು ಇನ್ನೂ ಕಂಡುಬಂದಿಲ್ಲ.