ವೆಲ್ಫೇರ್ ಪಾರ್ಟಿ ಮೂರು ಜಿಲ್ಲೆಗಳ ಸಮಾವೇಶ

ವೆಲ್ಫೇರ್ ಪಾರ್ಟಿ ಮೂರು ಜಿಲ್ಲೆಗಳ ಸಮಾವೇಶ  Welfare Party three district convention

ಕೊಪ್ಪಳ  13: ಸಾಮಾಜಿಕ ನ್ಯಾಯ, ಪ್ರಜಾಸತ್ತಾತ್ಮಕ ಮೌಲ್ಯಗಳ ರಕ್ಷಣೆ ಹಾಗೂ ಹಿಂದುಳಿದ ಮತ್ತು ಶೋಷಿತ ವರ್ಗದ ಸಮುದಾಯಗಳಿಗೆ ಸಮರ​‍್ಕ ರಾಜಕೀಯ ಪ್ರತಿನಿಧಿತ್ವ ದೊರಕಬೇಕಾದ ಅಗತ್ಯ ಇದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಜ್ಯಾಧ್ಯಕ್ಷ ನ್ಯಾಯವಾದಿ ತಾಹೇರ್ ಹುಸೇನ್ ಅವರು ಹೇಳಿದರು.ಅವರು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ “ಸಾಮಾಜಿಕ ನ್ಯಾಯಕ್ಕಾಗಿ ರಾಜಕೀಯ ಸಬಲೀಕರಣ” ಎಂಬ ಘೋಷವಾಕ್ಯದಡಿ  ಚರುಗಿದ ಜಿಲ್ಲಾ ಸಮಾವೇಶವನ್ನು ಶುಕ್ರವಾರ ಸಂಜೆ ವೇಳೆಯಲ್ಲಿ ನಗರದ ಮುಸ್ಲಿಂ ಶಾದಿಮಹಲ್ನಲ್ಲಿ ನಡೆದ ಸಮಾವೇಶದಲ್ಲಿ  ಪಾಲ್ಗೊಂಡು ಸಮಾವೇಶದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.

ಅವರು ಮುಂದುವರಿದು ಮಾತನಾಡುತ್ತಾ ಸಂವಿಧಾನವು ದೇಶದ ಪ್ರತಿಯೋಬ್ಬ ನಾಗರಿಕನಿಗೂ ಸಮಾನವಾದ ಹಕ್ಕು ಕಲ್ಪಿಸಿಕೊಟ್ಟಿದೆ, ಆದರೆ ಇಲ್ಲಿನ ರಾಜಕೀಯ ವ್ಯವಸ್ಥೆ ಮತ್ತು ಕೆಲವು ರಾಜಕೀಯ ಪಕ್ಷಗಳು  ಅಲ್ಪಸಂಖ್ಯಾತರ ಹಕ್ಕಗಳನ್ನು ಕಿತ್ತುಕೊಳ್ಳಲು ಹುನ್ನಾರ ನಡೆಸಿವೆ ಎಂದು ಹಾಗೂ ಸಮಾಜದ ಎಲ್ಲ ವರ್ಗಗಳ ಸಬಲೀಕರಣಕ್ಕಾಗಿ ರಾಜಕೀಯ ಜಾಗೃತಿ ಮತ್ತು ಸಂಘಟಿತ ಹೋರಾಟ ಅಗತ್ಯವೆಂದು ಅವರು ಅಭಿಪ್ರಾಯಪಟ್ಟರು.ದೇಶದ ಒಂದು ದೊಡ್ಡ ಸಮುದಾಯವನ್ನು ತಮ್ಮ ಮೂಲ ಭೂತ ಹಕ್ಕುಗಳಿಂದ ವಂಚಿತರನ್ನಾಗಿ ಮಾಡಿದರೆ ದೇಶ ಅದು ಹೇಗೆ ಅಭಿವೃದ್ದಿ ಹೋದಲು ಸಾಧ್ಯ ಎಂದು  ವೆಲ್ಫೇರ್ ಪಾರ್ಟಿಯ ರಾಜ್ಯ ಅಧ್ಯಕ್ಷರಾದ ನ್ಯಾಯವಾದಿ ತಾಹೇರ್ ಹುಸೇನ್ ಪ್ರಶ್ನಿಸಿದರು.

ಕಾರ್ಯಕ್ರಮದಲ್ಲಿ ವೆಲ್ಫೇರ್ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ಹಬಿಬುಲ್ಲಾ ಖಾನ್ ರವರು ಮಾತನಾಡಿ ಸಾಮಾಜಿಕ ನ್ಯಾಯಕ್ಕಾಗಿ ಸ್ಥಾಪಿತಗೊಂಡಿರುವ ನಮ್ಮ ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಮಹಿಳೆಯರು ಸೇರಬೇಕು ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಇದರಿಂದ ಜನಸಾಮಾನ್ಯರಿಗೆ ಅವರ ಸಮಸ್ಯೆಗಳಿಗೆ ನೇರ ಸ್ಪಂದನೆ ನೀಡಿ ಶ್ರಮಿಸಲು ನಮ್ಮ ಪಕ್ಷ ಸಿದ್ಧವಿದೆ ಎಂದರು,ರಾಜ್ಯ ಮಹಿಳಾ ಅಧ್ಯಕ್ಷೆ ಸಬಿಹಾ ಪಟೇಲ್ ರವರು ಮಾತನಾಡಿ ಪಕ್ಷದ ಮಹಿಳಾ ಸಂಘಟನೆ ಬಲವರ್ಧನೆ ಗೊಳಿಸಿ ಸಾಮಾನ್ಯ ಜನರ ಸೇವೆ ಮಾಡಲು ಮಹಿಳೆಯರು ಕೂಡ ಮುಂದಾಗಬೇಕು ಎಂದರು0

ರಾಜ್ಯ ಮಹಿಳಾ ಕಾರ್ಯದರ್ಶಿ ತಲತ್ ಯಾಸ್ಮಿನ್,  ವಲಯ ಕಾರ್ಯದರ್ಶಿ ಇರ್ಫಾನ್, ರಾಜ್ಯ ಕಾರ್ಮಿಕರ ಸಂಘ  ಸಂಚಾಲಕ ರಾಜಾ ನಾಯಕ. ಧಾರವಾಡ ಜಿಲ್ಲಾ ಅಧ್ಯಕ್ಷ ಅಬ್ದುಲ್ ಮಲಿಕ್, ಗದಗ್ ಜಿಲ್ಲಾ ಅಧ್ಯಕ್ಷ ಜುನೆದ್ ಉಮಚ್ಗಿ, ವೇದಿಕೆ ಮೇಲೆ ಉಪಸ್ಥಿತರಿದ್ದು ಕೊಪ್ಪಳ ಜಿಲ್ಲಾ ಅಧ್ಯಕ್ಷ ಆದಿಲ್ ಪಟೇಲ್ ರವರು ಪ್ರಾಥಮಿಕವಾಗಿ ಮಾತನಾಡಿ ಪಕ್ಷದ ಜನಪರ ಕಾರ್ಯಕ್ರಮ ಮತ್ತು ಯೋಜನೆಗಳ ಬಗ್ಗೆ ಸಮಾವೇಶದಲ್ಲಿ ಮಾಹಿತಿ ನೀಡಿದರು.

ಕೊಪ್ಪಳ ಜಿಲ್ಲಾ ಕಾರ್ಯದರ್ಶಿ ಮುಹಮ್ಮದ್ ಅನ್ಸರ್, ಮಹಿಳಾ ಘಟಕ ಜಿಲ್ಲಾ ಕಾರ್ಯದರ್ಶಿಸಲಿಮಾ ಜಹಾನ್, ಕೊಪ್ಪಳ ಜಿಲ್ಲೆ ಉಪಾಧ್ಯಕ್ಷಮಹಬೂಬ್ ಸಾಬ್ ಕುಷ್ಟಗಿ ಹಾಗೂ ಕಾರ್ಯಕರ್ತರು ಮತ್ತು ಅಭಿಮಾನಿಗಳು ಭಾಗವಹಿಸಿದ್ದರು. ಕೊಪ್ಪಳ ಗದಗ್ ಮತ್ತು ಧಾರವಾಡ ಜಿಲ್ಲೆಗಳಿಂದ ವೆಲ್ಫೇರ್ ಪಾರ್ಟಿಯ ಪದಾಧಿಕಾರಿಗಳು ಕಾರ್ಯಕರ್ತರು ಮತ್ತು ಅಭಿಮಾನಿಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದರು ಇದಕ್ಕೂ ಮುನ್ನ ರಾಜ್ಯ ಮುಖಂಡರ ಬೈಕ್ ರ್ಯಾಲಿ ಕೊಪ್ಪಳ ನಗರದ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಶಾದಿ ಮಹಲ್ ಆವರಣಕ್ಕೆ ತಲುಪಿತು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು,