ಸಚಿವರ ಅನುದಾನದಲ್ಲಿ ನೇಕಾರ ಕಾಲೋನಿ ಹಾಗೂ ಸಮುದಾಯ ಭವನ ಉದ್ಘಾಟನೆ
Weaver colony and community hall inaugurated with ministerial funding
ಯಮಕನಮರಡಿ 31: ಸಮೀಪದ ಆನಂದಪೂರ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಲಾದ ಬನಶಂಕರಿ ಕಲ್ಯಾಣ ಮಂಟಪ ಹಾಗೂ ಸತೀಶ ಜಾರಕಿಹೊಳಿ ನೇಕಾರ ಕಾಲೋನಿ ಉದ್ಘಾಟಣೆ ಸಮಾರಂಭವು ದಿ. 30 ರಂದು ಆನಂದಪೂರದಲ್ಲಿ ಜರುಗಿತು.
ಕಾರ್ಯಕ್ರಮಕ್ಕೆ ದೇವಾಂಗ ಸಮಾಜದ ಜಗದ್ಗುರು ಶ್ರೀ ದಯಾನಂದಪುರಿ ಮಹಾಸ್ವಾಮಿಗಳು ಹೆಮಕೂಟ ಹಂಪಿ ಇವರು ಆಗಮಿಸಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಾ ನಮ್ಮ ಬಡ ಸಮಯದಾಯಕ್ಕೆ ಸಚಿವರಾದ ಸತೀಶ ಅಣ್ಣಾ ಜಾರಕಿಹೋಳಿರವರು ತಮ್ಮ ಅನುದಾನದಲ್ಲಿ ಸಾಕಷ್ಟು ಸಹಾಯವಾಗಿ ಬಡ ನೇಕಾರರಿಗೆ ಬೆಳದಿಂಗಳ ಬೆಳಕಾಗಿದ್ದಾರೆ. ಅವರ ಶ್ರಮವನ್ನು ಹಾಗೂ ಅವರ ಶತಪ್ರಯತ್ನವನ್ನು ನಮ್ಮ ಸಮಾಜ ಎಂದಿಗೂ ಮರೆಯುವಂತಿಲ್ಲ ಸುಮಾರು 20 ವರ್ಷಗಳ ಕಾಲ ತೊಂದರೆ ಅನುಭವಿಸುತ್ತಿರುವ ಆನಂದಪೂರ ನೇಕಾರ ಸಮುದಾಯಕ್ಕೆ ಅನೇಕ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದಾರೆ ಇವರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರು ಕಡಿಮೆ ಎಂದು ಪ್ರಶಂಶಿಸಿದರು.
ಉದ್ಘಾಟಕರಾಗಿ ಆಗಮಿಸಿದ್ದ ಸಚಿವರು ಮಾತನಾಡುತ್ತಾ ನೇಕಾರ ಸಮುದಾಯದೊಂದಿಗೆ ನಾವು ಯಾವತ್ತು ಇರುತ್ತೇವೆ. ಸಮುದಾಯಕ್ಕೆ ಎಲ್ಲ ಅನೂಕೂಲತೆ ಕಲ್ಪಿಸಿ ಕೊಡಲಾಗುತ್ತದೆ ಎಂದು ಹೆಳಿದರು. ಅದರಂತೆ ಹತ್ತರಗಿ ಕಾರಿಮಠದ ಪೂಜ್ಯರಾದ ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಉಪಸ್ಥಿತರಿದ್ದು ಆತ್ಮಿಯವಾಗಿ ಸನ್ಮಾನ ಸ್ವಿಕರಿಸಿದರು. ನೇಕಾರರಿಗೆ ಸಿಗಬೇಕಾದ ಸವಲತ್ತುಗಳನ್ನು ಸಚಿವರ ಗಮನಕ್ಕೆ ತಂದು ಪರಶುರಾಮ ಡಗೆ ಅಧ್ಯಕ್ಷರು ಕರ್ನಾಟಕ ರಾಜ್ಯ ನೆಕಾರ ಮಹಾ ಮಂಡಳ ಹಾಗೂ ಕರ್ನಾಟಕ ರಾಜ್ಯ ದೇವಾಂಗ ಸಂಘ ಅಧ್ಯಕ್ಷರು ರವೀಂದ್ರ ಕಲಬುರ್ಗಿ ಮಾತನಾಡಿದರು. ಪ್ರಾಸ್ತಾವಿಕವಾಗಿ ವಿದ್ಯುತ ಚಾಲಿತ ಸಂಘದ ಅಧ್ಯಕ್ಷ ಸಂತೋಷ ಅತ್ತಿಮರದ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಾಂಗ್ರೇಸ್ ಪಕ್ಷದ ಯುವಧುರಿಣರಾದ ರವೀಂದ್ರ ಜಿಂಡ್ರಾಳಿ, ಸಿ ಪಿ ಐ ಜಾವೇದ ಮುಶಾಪಿರಿ ಯಮಕನಮರಡಿ ಪೋಲಿಸ ಠಾಣೆ, ಆಡಳಿತ ಮಂಡಳಿ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಹಾಗೂ ನೇಕಾರ ಸಮುದಾಯದ ಕುಲಬಾಂದವರು ಉಪಸ್ಥಿರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 