ಸಹಕಾರ ಸಂಘಗಳ ಅಭಿವೃದ್ಧಿಗೆ ಒಗ್ಗಟಿನಿಂದ ಶ್ರಮಿಸಬೇಕು: ಶಾಸಕ ವೈದ್ಯ
We should work together for the development of cooperative societies: MLA Vaidya
ಲೋಕದರ್ಶನ ವರದಿ
ಯರಗಟ್ಟಿ 26: ಸಹಕಾರ ಸಂಘಗಳ ಅಭಿವೃದ್ಧಿಗೆ ಎಲ್ಲ ನಿರ್ದೇಶಕರು ಒಗ್ಗಟಿನಿಂದ ಶ್ರಮಿಸಬೇಕು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಸಮೀಪದ ಮಬನೂರ ಗ್ರಾಮದ ವಿವಿದ್ದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಸಭಾ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಲ ವಿತರಣಾ ಸಮಾರಂಭದಲ್ಲಿ ಸಾಲಗಾರರಿಗೆ ಸಾಲ ವಿತರಿಸಿ ಮಾತನಾಡಿ, ಕ್ಷೇತ್ರದ ಅನ್ನದಾತರ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಮತ್ತು ನಾನು ಸದಾ ನಿಮ್ಮ ಜೋತೆಗೆ ಇರುತ್ತೆನೆ. ಈ ಸಾಲ ಸೌಲಭ್ಯದ ಸದುಪಯೋಗವನ್ನು ಪ್ರತಿಯೊಬ್ಬ ರೈತರು ಪಡೆದುಕೊಂಡು ಕೃಷಿಯಲ್ಲಿ ಮತಷ್ಟು ಪ್ರಗತಿ ಸಾಧಿಸಲಿ ಎಂದು ಹೇಳಿದರು.
ತಾಲೂಕಾ ಕಾಂಗ್ರೆಸ್ ಮುಖಂಡ ಆರ್.ಕೆ.ಪಟಾತ ಮಾತನಾಡಿ, ಸಾಲಗಾರರು ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದರೆ ಠೇವುದಾರರಿಗೆ ಹಣ ಮರಳಿ ಕೊಡಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಸಂಘದ ಅಧ್ಯಕ್ಷ ಮಹಾದೇವ ಪಟಾತ್, ಜಿಪಂ ಮಾಜಿ ಸದಸ್ಯ ಫಕೀರ್ಪ ಹದ್ದನ್ನವರ, ಬ್ಯಾಂಕ ನೀರೀಕ್ಷಕ ಎಸ್.ಎನ್.ಸಿದ್ದನ್ನವರ, ತಾಲೂಕ ನಿಯಂತ್ರನಾಧಿಕಾರಿ ಚಂದ್ರಶೇಖರ ಕೊರಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕುಮಾರ ಅಂಗಡಿ, ವಾಯ್,ಎಸ್,ನರಿ, ಭೀಮಪ್ಪ ಮಳಗಲಿ, ಶಿವಪ್ಪ ಅಗಸಿಮನಿ, ಭೀಮಪ್ಪ ಚುಂಚನೂರ, ವಿಠ್ಠಲ ಮಾದರ, ಹನಮಂತ ಅಗಸಿಮನಿ, ನಿಂಗಪ್ಪ ನರಿ, ರಮೇಶ ಪಟಾತ, ಸಿದ್ದಪ್ಪ ಮಳಗಲಿ, ಪುಂಡಲೀಕ ಮಳಗಲಿ ಮತ್ತಿತರಿದ್ದರು.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 