ಪರಮಾತ್ಮ ಮೆಚ್ಚುವಂತ ಬದುಕು ನಮ್ಮದಾಗಬೇಕು: ಇಂಚಲಶ್ರೀ
We should live a life that pleases the Supreme Being: Inchalashri
42ನೇ ವೇದಾಂತ ಪರಿಷತ್ ಜಾತ್ರಾಮಹೋತ್ಸವದ 2ನೇ ದಿನದ ಪ್ರವಚನ
ಹಾರೂಗೇರಿ 04: ಮನುಷ್ಯ ಜನ್ಮ ಪಾವನವಾಗಲು ಮಹಾತ್ಮರ ದರ್ಶನಾಶೀರ್ವಾದಗಳನ್ನು ಆಲಿಸಿ, ಧರ್ಮ ಮತ್ತು ಪುಣ್ಯದ ಕಾರ್ಯಗಳನ್ನು ಮಾಡುತ್ತಿರಬೇಕು. ಪರಮಾತ್ಮ ಮೆಚ್ಚುವಂತ ಬದುಕು ನಮ್ಮದಾಗಿರಬೇಕು ಎಂದು ಇಂಚಲ-ಹಾರೂಗೇರಿ ಮಠಗಳ ಪೀಠಾಧ್ಯಕ್ಷ ಸದ್ಗುರು ಶ್ರೀ ಡಾ.ಶಿವಾನಂದ ಭಾರತಿ ಮಹಾಸ್ವಾಮಿಗಳು ಹೇಳಿದರು.
ಇಲ್ಲಿನ ಶ್ರೀ ಚನ್ನವೃಷಭೇಂದ್ರ ದೇವರಕೊಂಡಜ್ಜನವರ ಲೀಲಾಮಠದಲ್ಲಿ ನಡೆಯುತ್ತಿರುವ 42ನೇ ವೇದಾಂತ ಪರಿಷತ್ ಜಾತ್ರಾ ಮಹೋತ್ಸವದ 2ನೇ ದಿನದ ಆಧ್ಯಾತ್ಮಿಕ ಪ್ರವಚನದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮನುಷ್ಯ ಸಂಪತ್ತನ್ನು ಗಳಿಸಿ ಸಿರಿವಂತನಾಗುವುದಕ್ಕಿಂತ, ಮಹಾತ್ಮರ ಸತ್ಸಂಗ ಪ್ರವಚನಗಳಲ್ಲಿ ಭಾಗಿಯಾಗಿ ಮನಸ್ಸನ್ನು ಪರಿಶುದ್ಧ ಮಾಡಿಕೊಂಡು, ಸಂತೋಷ, ನೆಮ್ಮದಿಯ ಬದುಕು ನಮ್ಮದಾಗಬೇಕು. ಕಷ್ಟಗಳನ್ನು ಎದುರಿಸುವ ಶಕ್ತಿ ಮಹಾತ್ಮರ ದರ್ಶನದಿಂದ ಸಾಧ್ಯವಿದೆ. ಸತ್ಪಾತ್ರಕ್ಕೆ ದಾನ ಮಾಡುತ್ತ, ಒಳ್ಳೆಯ ನಡೆ-ನುಡಿಗಳನ್ನು ಹೊಂದಿ, ದೇವನೊಲುಮಿಗೆ ಪಾತ್ರರಾಗಬೇಕೆಂದು ಇಂಚಲಶ್ರೀಗಳು ಹೇಳಿದರು.
ಹಂಪಿ ಶಿವರಾಮಾವಧೂತಾಶ್ರಮದ ಡಾ.ವಿದ್ಯಾನಂದ ಭಾರತಿ ಸ್ವಾಮಿಗಳು ಆಶೀರ್ವಚನ ನೀಡುತ್ತ ಮಹಾತ್ಮರು ಮನದ ಕತ್ತಲೆಯನ್ನು ಕಳೆಯಲು ಆಧ್ಯಾತ್ಮ ಎಂಬ ಜ್ಯೋತಿಯನ್ನು ಹೊತ್ತಿಸಿದ್ದಾರೆ. ಸ್ವಾರ್ಥವನ್ನು ಬಿಟ್ಟು ನಿಸ್ವಾರ್ಥದಿಂದ ಭಕ್ತಿ ಮಾಡಿದರೆ ಪರಮಾತ್ಮ ಒಲಿಯುತ್ತಾನೆ. ಮಹಾತ್ಮರ ನುಡಿಗಳು ಅಂತರಂಗದ ಶಕ್ತಿಯನ್ನು ಇಮ್ಮಡಿಸುತ್ತವೆ. ಆತ್ಮ ಜಾಗೃತಿಯ ಚಿಂತನೆಗಳು ಈ ವೇದಾಂತ ವೇದಿಕೆಯಲ್ಲಿ ನಡೆಯುತ್ತಿದ್ದು, ಹೃದಯದಲ್ಲಿ ಪ್ರೀತಿಯನ್ನು ತುಂಬಿಕೊಂಡು ಬರುವ ಭಕ್ತರು ಪೂಜ್ಯರ ಕೃಪೆಗೆ ಪಾತ್ರರಾಗುತ್ತಾರೆ ಎಂದರು.
ಇಂಚಲದ ಪೂರ್ಣಾನಂದ ಭಾರತಿ ಸ್ವಾಮೀಜಿ, ರಾಯಚೂರ ಶಂಕರಾಚಾರ್ಯ ಮಠದ ಶಿವರಾಮಾನಂದ ಭಾರತಿ ಸ್ವಾಮೀಜಿ, ಹುಬ್ಬಳ್ಳಿ ಸಿದ್ಧಾರೂಢ ಮಠದ ಸಚ್ಚಿದಾನಂದ ಸ್ವಾಮೀಜಿ, ಕಲಬುರ್ಗಿ ಸಿದ್ಧಾರೂಢ ಮಠದ ಮಾತೋಶ್ರೀ ಲಕ್ಷ್ಮೀ ತಾಯಿಯವರು, ಪರಮಾನಂದವಾಡಿಯ ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ, ಅನಗವಾಡಿಯ ಮಾತೋಶ್ರೀ ಅನುಸೂಯಾ ತಾಯಿಯವರು, ಸವಟಗಿಯ ಶ್ರೀ ನಿಂಗಾನಂದ ಸ್ವಾಮೀಜಿ, ಹಡಗಿನಾಳದ ಮಲ್ಲೇಶ್ವರ ಶರಣರು, ಅಥಣಿಯ ಬಿ.ಎಂ.ಮುಜಾವರ ಸಾಹೇಬರು ಆಧ್ಯಾತ್ಮಿಕ ಪ್ರವಚನ ನೀಡಿದರು.
ಸಂಜೆ ಚನ್ನವೃಷಭೇಂದ್ರ ಭಜನಾ ತಂಡ ಹಾಗೂ ಪರಸ್ಥಳದಿಂದ ಆಗಮಿಸಿದ ವಿವಿಧ ಮೇಳಗಳಿಂದ ಭಜನಾ ಕಾರ್ಯಕ್ರಮ ನಡೆದವು. ಗಣ್ಯರಾದ ಮಾಜಿ ಶಾಸಕ ಬಿ.ಸಿ.ಸರಿಕರ, ರಾಮಣ್ಣ ಗಸ್ತಿ, ಮಹಾಲಿಂಗ ಸಾಯಣ್ಣವರ, ಧನಪಾಲ ಶಿರಹಟ್ಟಿ, ಶ್ರೀಪಾಲ ದಟವಾಡ, ಡಿ.ಎಸ್.ನಾಯಿಕ, ಭೀಮು ಬದ್ನಿಕಾಯಿ, ಮಲ್ಲಪ್ಪ ಗಸ್ತಿ, ಸದ್ಭಕ್ತರಾದ ಶಿವಗೊಂಡ ಧರ್ಮಟ್ಟಿ, ವಿಠ್ಠಲರಾವ ಬಂತಿ, ನೇಮಣ್ಣ ಕೊತ್ತಲಗಿ, ಬಾಬು ಪರಮಗೌಡರ ಮೊದಲಾದ ಗಣ್ಯರು ವೇದಿಕೆಯಲ್ಲಿದ್ದರು.
ಶ್ರೀಮಠದ ಕಾರ್ಯದರ್ಶಿ ಅಪ್ಪಾಸಾಬ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿ, ಮಂಗಲಗೀತೆ ಹಾಡಿದರು.
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ 