ದುಡಿದು ಗಳಿಸಿದ ಹಣದಲ್ಲಿ ನಮ್ಮ ಸಂಸ್ಕೃತಿಯ ಸಂರಕ್ಷಣೆಗೂ ಸಹಿತ ಮುಂದಾಗಬೇಕು
We should also use our hard-earned money to preserve our culture.
ಲೋಕದರ್ಶನ ವರದಿ
ದುಡಿದು ಗಳಿಸಿದ ಹಣದಲ್ಲಿ ನಮ್ಮ ಸಂಸ್ಕೃತಿಯ ಸಂರಕ್ಷಣೆಗೂ ಸಹಿತ ಮುಂದಾಗಬೇಕು
ಶಿಗ್ಗಾವಿ 05 : ಭಾರತದ ಶ್ರೇಷ್ಟ ಸಂಸ್ಕೃತಿಯನ್ನ ನಮ್ಮ ಮಕ್ಕಳಿಗೆ ಬಾಲ್ಯದಲ್ಲಿಯೇ ತಿಳಿಸಿಕೊಡಬೇಕು, ದೇಶದ ಅಖಂಡತೆಯನ್ನ ಉಳಿಸಬೇಕು ಜೊತೆಗೆ ನಾವು ದುಡಿದು ಗಳಿಸಿದ ಹಣದಲ್ಲಿ ನಮ್ಮ ಸಂಸ್ಕೃತಿಯ ಸಂರಕ್ಷಣೆಗೂ ಸಹಿತ ಮುಂದಾಗಬೇಕು ಎಂದು ಜಂಗಮವಾಡಿಮಠದ ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಪಟ್ಟಣದ ಸಂಸ್ಕೃತಿ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ನೂತನ ಕಟ್ಟಡದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಭಾರತೀಯ ಸಂಸ್ಕೃತಿಯಲ್ಲಿ ಶಿಕ್ಷಣಕ್ಕೆ ಬಹಳಷ್ಡು ಪ್ರಾಧಾನ್ಯತೆ ನೀಡಲಾಗಿದೆ, ಮೊದಲು ಗುರುಕುಲ ಪದ್ದತಿ ಇತ್ತು, ಗುರು ಸೇವೆಯ ಮೂಲಕ ಗುರುಕೃಪೆ ಪಡೆಯಲಾಗುತ್ತಿತ್ತು, ಆಧುನಿಕ ಪದ್ದತಿಯಲ್ಲಿ ನಾವು ಕಾಲಕ್ಕೆ ತಕ್ಕಂತೆ ಬದಲಾಗುತ್ತಿದ್ದೇವೆ, ಆದರೆ ನಮ್ಮ ಸಂಸ್ಕೃತಿ ಪದ್ದತಿಗಳು ಬದಲಾಗಬಾರದು, ತಂದೆ-ತಾಯಿ ಮತ್ತು ಹುಟ್ಟಿದ ಜನ್ಮ ಭೂಮಿಯ ಬಗ್ಗೆ ಅರಿವು ಇರಬೇಕು, ಊಟದ ಪದ್ದತಿಯಲ್ಲಿ ವಿಕೃತಿ ಸ್ವರೂಪವನ್ನ ತಾಳಿದ್ದೇವೆ, ಮಕ್ಕಳ ಭವಿಷ್ಯದ ಭದ್ರ ಬುನಾದಿಯನ್ನ ಪ್ರಾಥಮಿಕವಾಗಿ ಈ ಸಂಸ್ಕೃತಿ ಶಾಲೆ ನೀಡುತ್ತಿದೆ ಇದು ಹೀಗೆಯೇ ಮುಂದುವರೆಯಲಿ ಎಂದು ಆಶೀರ್ವದಿಸಿದರು.
ಶಿಗ್ಗಾವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಮಾತನಾಡಿ, ಇಡಿ ನಾಡಿಗೆ ಜ್ಞಾನವನ್ನ ಪ್ರಸಾರ ಮಾಡುವ ಕೇಂದ್ರ ಕಾಶಿ ಜಗದ್ಗುರುಗಳಾಗಿದ್ದಾರೆ ಎಂದರು.
ಬಂಡಿವಾಡದ ಸೀತಾಗಿರಿಯ ಸದ್ಗುರು ಸಮರ್ಥ ಡಾ. ಎ ಸಿ ವಾಲಿ ಮಹಾರಾಜರು ಮಾತನಾಡಿ, ಎಲ್ಲಿ ಸಂಸ್ಕೃತಿ ಇರುತ್ತದೋ ಅಲ್ಲಿ ಸಂಸ್ಕಾರ ಇರುತ್ತದೆ, ಕಾಶಿ ಶ್ರೀಗಳ ಭವದಿಂದ ಮುಕ್ತಿ ಹೊಂದಲು ಸಿದ್ದಾಂತ ಶಿಖಾಮಣಿ ಅಪಾರ ಜ್ಞಾನವನ್ನ ನೀಡುತ್ತಿದೆ, ಜ್ಞಾನ ಯಾವ ದಿಕ್ಕಿನಿಂದ ಬಂದರೂ ಅದು ಸ್ವೀಕಾರಾರ್ಹ, ಗೆಳತನದಲ್ಲಿ ಸಂಸ್ಕಾರ ಇರಬೇಕು ಆ ಸಂಸ್ಕಾರ ಇರುವುದರಿಂದಲೇ ಈ ಶಾಲೆಗೆ ಸಂಸ್ಕೃತಿ ಶಾಲೆ ಎಂದು ನಾಮಕರಣ ಮಾಡಿದ್ದಾರೆ ಎಂದು ಭಾವಿಸುವೆ ಎಂದರು.
ಧಾರವಾಡದ ನಿವೃತ್ತ ಡಿಡಿಪಿಐ ಎಸ್ ಬಿ ಕೊಡ್ಲಿ ಮಾತನಾಡಿದರು, ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದ ಪೂರ್ವಿಕಾ ಗರಗ ವಿದ್ಯಾರ್ಥಿನಿಯನ್ನು ಶ್ರೀಗಳು ಸನ್ಮಾನಿಸಿದರು.
ನಂತರ ನಡೆದ ವಿಜ್ಞಾನ ವಸ್ತು ಪ್ರದರ್ಶನವನ್ನ ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಬಿ ಅಂಬಿಗೇರ ಉದ್ಘಾಟಿಸಿದರು, ಸಂಸ್ಕೃತಿ ಶಾಲೆಯ ಅದ್ಯಕ್ಷ ಮಂಜುನಾಥ ಮೊರಬದ, ಸಂಸ್ಥಾಪಕ ಕಾರ್ಯದರ್ಶಿ ದೇವರಾಜ ಸುಣಗಾರ, ಸಂಸ್ಕೃತಿ ಶಾಲೆಯ ಮುಖ್ಯ ಶಿಕ್ಷಕಿ ಅನಿತಾ ಹಿರೇಮಠ, ಮಾಜಿ ಪುರಸಭೆ ಸದಸ್ಯ ಸಂತೋಷ ಮೊರಬದ, ಶಿಕ್ಷಕರಾದ ರಮೇಶ ಭಾವಿ, ಜಯರಾಜ ಬದಗಿ, ಸ್ವೇತಾ ದುಬೆ, ಗಾಯತ್ರಿ ಎಂ ವಿ, ಸ್ವಪ್ನಾ ಪಠ್ಯೇದ, ಸವಿತಾ ಗೌರಿಮಠ ಸೇರಿದಂತೆ ಶಾಲೆಯ ಶಿಕ್ಷಕರು, ನಿರ್ದೇಶಕರು ಹಾಗೂ ಮಕ್ಕಳ ಪಾಲಕರು, ವಿದ್ಯಾರ್ಥಿಗಳು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 