ಮಂದಿನ ಪೀಳಿಗೆಗೆ ರಂಗಭೂಮಿಯನ್ನು ಉಳಿಸಿಕೊಂಡು ಹೋಗಬೇಕಾಗಿದೆ: ರೇಷ್ಮಾ ಅಳವಂಡಿ
We need to preserve theater for future generations: Reshma Alavandi
ಬೆಳಗಾವಿ 24: ಇಳಕಲ್ ತಾಲೂಕು ರಂಗ ಸಂಗಮ ಕಲೆ ಮತ್ತು ಸಂಸ್ಕೃತಿಕ ಸಂಘ (ರಿ) ಇಳಕಲ್ ತಂಡ ಮತ್ತು ಕನ್ನಡ ಭವನ ಸಂಯುಕ್ತ ಆಶ್ರಯದಲ್ಲಿ ರಾಮದೇವ ಹೊಟೇಲ್ ಹತ್ತಿರವಿರುವ ಕನ್ನಡ ಭವನದಲ್ಲಿ ಇದೇ ದಿ. 26 ಶನಿವಾರದಂದು ಸಾಯಂಕಾಲ 6-30 ಕ್ಕೆ “ಮಾಯಾ ಮದ ಮರ್ದನ ಅಲ್ಲಮಪ್ರಭು” ನಾಟಕವು ಪ್ರದರ್ಶನಗೊಳ್ಳಲಿದ್ದು ಈ ನಾಟಕ ಕುರಿತಂತೆ ತಮ್ಮ ವಿಚಾರಗಳನ್ನು ಹಂಚಿಕೊಳ್ಳಲು ರಂಗ ಸಂಗಮ ಕಲೆ ಮತ್ತು ಸಾಂಸ್ಕೃತಿಕ ಸಂಘ ದ ಅಧ್ಯಕ್ಷೆ ಶ್ರೀಮತಿ ರೇಷ್ಮಾ ಅಳವಂಡಿಯವರು ಕನ್ನಡ ಸಾಹಿತ್ಯ ಭವನದಲ್ಲಿ ಪತ್ರಿಕಾ ಗೋಷ್ಠಿಯನ್ನು ಕರೆದಿದ್ದು ಇಲ್ಲಿ ಅವರು ಮಾತನಾಡಿದರು.
ನಾವು ಹೆಚ್ಚಿನ ಲಾಭ ಕುರಿತು ಚಿಂತಿಸದೇ ವೃತ್ತಿ ರಂಗಭೂಮಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾಟಕಗಳನ್ನು ಮಾಡುತ್ತ ಬಂದಿದ್ದೆವೆ. ನಶಿಸಿಹೋಗುತ್ತಿರುವ ಈ ಕ್ಷೇತ್ರ ಮುಂದಿನ ಪೀಳಿಗೆಯವರಿಗೆ ನೋಡಲು ಸಿಗುವಂತಾಗಬೇಕೆಂಬ ನಿಟ್ಟಿನಲ್ಲಿ ರಂಗಭೂಮಿಯನ್ನು ಉಳಿಸಿಕೊಂಡು ಹೋಗುತ್ತಿದ್ದೇವೆ. ಇದರಿಂದ ಜೀವನ ನಡೆಸುವುದು ಕಷ್ಟದಾಯಕವಾಗಿದೆ. ಬೆಳಗಾವಿಯ ಕಲಾರಸಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ನಾಟಕವನ್ನು ನೋಡವುದರ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸುತ್ತಾರೆಂಬ ನಂಬಿಕೆ ನನಗೆ ಎಂದು ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆ ಉತ್ತರ ಕರ್ನಾಟಕ ಅಧ್ಯಕ್ಷರಾದ ಮಹಾಂತೇಶ ರಣಗಟ್ಟಿಮಠ ಅವರು ಮಾತನಾಡಿ “ಮಾಯಾ ಮದ ಮರ್ದನ ಅಲ್ಲಮಪ್ರಭು” ನಾಟಕವು ಭಕ್ತಿ ಪ್ರಧಾನವಾದ ನಾಟಕವನ್ನು ನೋಡಬೇಕು ಅದರಲ್ಲಿಯೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ನೋಡುವಂತಾಗಬೇಕು ಎಂದು ಹೇಳಿದರು.
ಈ ಪತ್ರಿಕಾ ಗೋಷ್ಠಿಯಲ್ಲಿ ಹೇಮಾ ಪಾಟೀಲ, ಡಾ. ಕೆ.ಡಿ. ದೇಶಪಾಂಡೆ ಮತ್ತು ಸಂಘಟಕರಾದ ಬಿ. ಎ. ಪಾಟೀಲ ಉಪಸ್ಥಿತರಿದ್ದರು.
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ 