ದೇಶಕ್ಕೆ ಅನ್ನದಾತ ಹಾಗೂ ದೇಶ ಕಾಯುವ ಸೈನಿಕರನ್ನು ಸದಾ ಕಾಲ ಸ್ಮರಿಸಬೇಕಾಗುತ್ತದ
We must always remember the soldiers who feed the country and protect it
ಹಾವೇರಿ 09 :ಪ್ರಗತಿಪರ ಕೃಷಿಕರು ಹಾಗೂ ಸಮಾಜ ಸೇವಕರಾದ ಪರಶುರಾಮ ಹರ್ಲಾಪುರ ಅವರಿಗೆ ಹಸಿರೇ ಉಸಿರು ಟ್ರಸ್ಟ್(ರಿ)ಬೆಟ್ಟಹಲಸೂರ ಅವರ ವತಿಯಿಂದ 2025ನೇ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ರಾಜ್ಯ ಕರುನಾಡು ಕೃಷಿರತ್ನ ಪ್ರಶಸ್ತಿಯನ್ನು ಬೆಂಗಳೂರಿನ ಯಲಹಂಕ ಹತ್ತಿರದ ಬೆಟ್ಟಹಲಸೂರಿನಲ್ಲಿ ಜರುಗಿದ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ರಾಜ್ಯ ಕರುನಾಡು ಕೃಷಿರತ್ನ ಪ್ರಶಸ್ತಿ ಸ್ವೀಕರಿಸಿದ ಪರಶುರಾಮ ಹರ್ಲಾಪುರ ಮಾತನಾಡಿ ಈ ದೇಶಕ್ಕೆ ಅನ್ನದಾತ ಹಾಗೂ ದೇಶ ಕಾಯುವ ಸೈನಿಕರನ್ನು ಸದಾ ಕಾಲ ಸ್ಮರಿಸಬೇಕಾಗುತ್ತದೆ.ಅವರ ಶ್ರಮ ಹಾಗೂ ಸೇವೆ ಅವಿಸ್ಮರಣೀಯವಾಗಿದೆ.ನಮ್ಮ ಕೃಷಿ ಹಾಗೂ ಸಾಮಾಜಿಕ ಸೇವೆಯನ್ನು ಗುರುತಿಸಿ ರಾಜ್ಯ ಮಟ್ಟದ ಕರುನಾಡು ಕೃಷಿರತ್ನ ಪ್ರಶಸ್ತಿ ನೀಡಿದ್ದು,ತಮ್ಮೆಲ್ಲರಿಗೂ ಧನ್ಯವಾದಗಳು.
ಕೃಷಿಯ ಜೊತೆಗೆ ನಮ್ಮ ಕೈಲಾದಷ್ಟು ಜನರ ಸೇವೆ ಮಾಡೋಣ ಎಂದು ಪರಶುರಾಮ ಹರ್ಲಾಪುರ ರೈತರನ್ನು ಹಾಗೂ ಸೈನಿಕರನ್ನು ಸ್ಮರಸಿದರು.ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಹಸಿರೇ ಉಸಿರು ಟ್ರಸ್ಟ್(ರಿ) ಸಂಸ್ಥಾಪಕರು,ರಾಜಾಧ್ಯಕ್ಷರಾದ ಬೆಟ್ಟಹಲಸೂರು ಡಾ.ಶ್ರೀನಿವಾಸ್,ರೈತ ಸಂಘದ ರಾಜ್ಯ ಮುಖಂಡರು ಹಾಗೂ ಸಾಧಕ ರತ್ನ ಪ್ರಶಸ್ತಿ ಪುರಸ್ಕೃತರಾದ ಬಿ.ಜಿ.ನಂಜುಂಡಪ್ಪ, ಬಸವಶ್ರೀ ಪ್ರಶಸ್ತಿ ಪರುಸ್ಕೃತರಾದ ಎಸ್.ಬಸವರಾಜ,ಬಿಎಸ್ ಚಿತ್ರಶೇಖರ,ನಾಗರಾಜ ಬಾಬು,ಬಿ.ಆರ್,ಪ್ರವೀಣ,ಬಿ.ಬಿ.ಉಮೇಶ,ಬಿ.ಕೆ ರವಿಂಧ್ರನಾಥಗೌಡ,ಶಶಿಧರ ಕೋಟೆ,ರೈತ ಮುಖಂಡರಾದ ಶಿವಪುತ್ರ್ಪ ಸಂಪಗಾವಿ, ಗುಡ್ಡನಗೌಡ ಕರೆಗೌಡ್ರ,ಪುಟ್ಟರಾಜ ಕೋಡಿಹಳ್ಳಿ,ಪ್ರಕಾಶ ಗೌಡ್ರ ಸೇರಿದಂತೆ ಟ್ರಸ್ಟ್ ಪದಾಧಿಕಾರಿಗಳು,ರೈತರು,ಕನ್ನಡಪರ ಹೋರಾಟಗಾರರು,ಕಲಾವಿದರು ಮತ್ತು ಸಾಮಾಜಿಕ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 