ರುದ್ರಭೂಮಿ ಸಮಗ್ರ ಅಭಿವೃದ್ಧಿಗೆ ಸಂಕಲ್ಪ ಮಾಡಿದ್ದೇವೆ : ಕೇದಾರ​‍್ಪ

ರುದ್ರಭೂಮಿ ಸಮಗ್ರ ಅಭಿವೃದ್ಧಿಗೆ ಸಂಕಲ್ಪ ಮಾಡಿದ್ದೇವೆ : ಕೇದಾರ​‍್ಪ  We have resolved to comprehensively develop the cremation ground: Kedarappa

 ಶಿಗ್ಗಾವಿ  01: ರುದ್ರಭೂಮಿಯು ಪ್ರತಿಯೊಬ್ಬರ ಜೀವನದ ಅಂತಿಮ ಪಯಣಕ್ಕೆ ಗೌರವಯುತ ವಿದಾಯ ನೀಡುವ ಪವಿತ್ರ ಸ್ಥಳವಾಗಿದ್ದು, ಅದರ ಸಮಗ್ರ ಅಭಿವೃದ್ಧಿಗೆ ಸಂಕಲ್ಪ ಮಾಡಿದ್ದೇವೆ ಎಂದು ರುದ್ರಭೂಮಿ ಸಮಿತಿ ಅಧ್ಯಕ್ಷ ಕೇದಾರ​‍್ಪ ಬಗಾಡೆ ಹೇಳಿದರು. ಪಟ್ಟಣದ ಹೊರವಲದಲ್ಲಿರುವ ರುದ್ರಭೂಮಿಯಲ್ಲಿ ಹಸಿರು ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸ್ವಚ್ಛತೆ, ಹಸೀರೀಕರಣ ಹಾಗೂ ಸಾರ್ವಜನಿಕರಿಗೆ ಅಗತ್ಯವಿರುವ ಎಲ್ಲ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಸಮಿತಿಯು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಿದೆ ಎಂದರು. ಕಳೆದ ಕೆಲವು ವರ್ಷಗಳಲ್ಲಿ ರುದ್ರಭೂಮಿಯ ಅಭಿವೃದ್ಧಿಗೆ ಸಹಕರಿಸಿದ ದಾನಿಗಳು, ಸಮಾಜದ ಮುಖಂಡರನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಲಕ್ಷ್ಮಣ ಕುಂದಗೋಳ, ಕಾರ್ಯದರ್ಶಿ ನಾರಾಯಣ ಬಗಾಡೆ, ಸದಸ್ಯರಾದ ನಾಗರಾಜ ಬ್ರಹ್ಮಾವರ, ಸುರೇಶ್ ಮೂಳೆ, ರವಿ ಕಡೆಮನಿ, ಆನಂದ್ ದಾನಿ, ಮಾರುತಿ ರಾಯ್ಕರ, ಮಂಜುನಾಥ ಆಸ್ವಾಲೇಕರ, ಮಂಜುನಾಥ ಡಂಬಳ್, ಶಿವಪ್ಪ ದಾಸರ್, ಪಕೀರ​‍್ಪ ಸುಲ್ತಾನವರ್ ಸೇರಿದಂತೆ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ರಾಘವೇಂದ್ರ ದೇಶಪಾಂಡೆ ಅವರು ಕಾರ್ಯಕ್ರಮ ನಿರ್ವಹಿಸಿದರು.