ನಮ್ಮದೂ ಯಾವ ಬಣವೂ ಇಲ್ಲ, ನಮ್ಮದು ಸ್ವತಂತ್ರ ಸ್ಪರ್ಧೆ: ಡಿಸಿಸಿ ಬ್ಯಾಂಕ್ ಚುನಾವಣೆ ಕುರಿತು ರಾಜು ಕಾಗೆ ಅಭಿಮತ
We have no faction, we are an independent contest: Raju Kage's opinion on DCC Bank elections
ಲೋಕದರ್ಶನ ವರದಿ
ನಮ್ಮದೂ ಯಾವ ಬಣವೂ ಇಲ್ಲ, ನಮ್ಮದು ಸ್ವತಂತ್ರ ಸ್ಪರ್ಧೆ: ಡಿಸಿಸಿ ಬ್ಯಾಂಕ್ ಚುನಾವಣೆ ಕುರಿತು ರಾಜು ಕಾಗೆ ಅಭಿಮತ
ಕಾಗವಾಡ 08: ಡಿಸಿಸಿ ಬ್ಯಾಂಕಿನ ಚುನಾವಣೆಗೆ ಸಂಬಂಧಿಸಿದಂತೆ ಶುಕ್ರವಾರ ದಿ.10 ರಂದು ನಾನು ಹಾಗೂ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಕೂಡಿಕೊಂಡು ನಾಮಪತ್ರ ಸಲ್ಲಿಸಲಿದ್ದೇವೆ. ನಮ್ಮದು ಸ್ವತಂತ್ರ ಸ್ಪರ್ಧೆಯಾಗಿರಲಿದ್ದು, ನಾವು ಯಾರ ಬಣದಲ್ಲಿಯೂ ಗುರುತಿಸಿಕೊಳ್ಳುವುದಿಲ್ಲವೆಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿಗಮದ ಅಧ್ಯಕ್ಷ ಹಾಗೂ ಕಾಗವಾಡ ಶಾಸಕ ರಾಜು ಕಾಗೆ ತಿಳಿಸಿದ್ದಾರೆ.
ಅವರು ಬುಧವಾರ ದಿ. 08 ರಂದು ಕಾಗವಾಡ ಮತಕ್ಷೇತ್ರದ ಅರಳಿಹಟ್ಟಿ ಗ್ರಾಮದಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಆರೋಗ್ಯ ಸ್ವಾಸ್ಥ್ಯ ಕೇಂದ್ರದ ನಿರ್ಮಾಣ ಹಾಗೂ ಸಂಬರಗಿ ಗ್ರಾಮದಲ್ಲಿ ವಿಠ್ಠಲ ರುಕ್ಮೀಣಿ ದೇವಸ್ಥಾನದ ಹತ್ತಿರ ಸಮುದಾಯ ಭವನಕ್ಕೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ, ಮಾತನಾಡುತ್ತಿದ್ದರು. ನಾನು ಯಾವುದೇ ಬಣ ಹಾಗೂ ವ್ಯಕ್ತಿಗತ ರಾಜಕಾರಣದಲ್ಲಿ ಭಾಗಿಯಾಗಿಲ್ಲ. ನನ್ನದು ಸರಳ ರಾಜಕಾರಣ. ನಾನು ಯಾರ ಪರವಾಗಿಯೂ ಇಲ್ಲ. ಯಾರ ವಿರುದ್ದವೂ ಇಲ್ಲ. ನಾನು ಲಕ್ಷ್ಮಣ ಸವದಿ ಕೂಡಿಕೊಂಡು ನಾಮಪತ್ರ ಸಲ್ಲಿಸಲಿದ್ದೇವೆ ಎಂದರು. ಈ ವೇಳೆ ಅರಳಿಹಟ್ಟಿ ಗ್ರಾ.ಪಂ. ಅಧ್ಯಕ್ಷ ಬಸನಗೌಡ ಪಾಟೀಲ(ಬಮ್ನಾಳ), ಮಾಜಿ ಅಧ್ಯಕ್ಷ ಕಾಮಗೌಡ ಪಾಟೀಲ, ತಾಲೂಕಾ ವೈದ್ಯಾಧಿಕಾರಿ ಡಾ. ಬಸಗೌಡ ಕಾಗೆ, ಜಿಲ್ಲಾ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವೀರಣ್ಣ ವಾಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಇ ರಾಜಕಿಶೋರ, ಗುತ್ತಿಗೆದಾರರಾದ ವ್ಹಿ.ಬಿ. ಅಳವಂಡಿ, ದೀಪಕ ಪವಾರ, ಸುಹಾಸ ಬಿರಾದರ, ಸದಾಶಿವ ಪಾಟೀಲ, ಪರಶುರಾಮ ನಾಯಿಕ, ಕೇದಾರಿ ನಾಗರಾಳೆ, ಮಲ್ಲಿಕಾರ್ಜುನ ದಳವಾಯಿ, ಅಣ್ಣಾಸಾಬ ಮಿಸಾಳ, ವಿಲಾಸ ಟೋಣೆ, ತುಕಾರಾಮ ಶೇಳಕೆ, ವಿಠ್ಠಲ ಗಸ್ತಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 