ಉಚ್ಚಾಟನೆ ಮಾಡಿದ್ದು ನಾವು ಒಪ್ಪುವುದಿಲ್ಲ: ಸಾಂಗ್ಲೀಕರ
We do not agree with the expulsion: Sanglikar
ಬಸವಜಯ ಮೃತ್ಯುಂಜಯ ಶ್ರೀಗಳ ಉಚ್ಚಾಟನೆಗೆ ಪಂಚಮಸಾಲಿಗಳ ಖಂಡನೆ
ಮಹಾಲಿಂಗಪುರ 27: ಶಾಸಕ ಕಾಶಪ್ಪನವರ ಬಸವಜಯ ಮೃತ್ಯುಂಜಯ ಶ್ರೀಗಳನ್ನು ಉಚ್ಚಾಟನೆ ಮಾಡಿದ್ದನ್ನು ನಾವು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಎಂದು ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ದರೇಪ್ಪಣ್ಣ ಸಾಂಗ್ಲೀಕರ ಹೇಳಿದರು.
ಸ್ಥಳೀಯ ಜಿ.ಎಲ್.ಬಿ.ಸಿ ಅತಿಥಿಗೃಹದಲ್ಲಿ ಪಂಚಮಸಾಲಿ ಶ್ರೀಗಳಾದ ಬಸವಜಯ ಮೃತ್ಯುಂಜಯ ಶ್ರೀಗಳ ಉಚ್ಚಾಟನೆ ಖಂಡಿಸಿ ಮುಧೋಳ ತಾಲೂಕು ಹಾಗೂ ರಬಕವಿ ಬನಹಟ್ಟಿ ತಾಲೂಕು ಪಂಚಾಮಸಾಲಿಗಳು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಟ್ರಸ್ಟನಲ್ಲಿ ಮೊದಲಿನಿಂದ ಕಾಶಪ್ಪನವರು ಹಾಗೂ ಶ್ರೀಗಳು ಕೂಡಾ ಸದಸ್ಯರು ಸಹ ಇರಲಿಲ್ಲ, ಆದರೆ ಇತ್ತಿತ್ತಲ್ಲಾಗಿ ಅವರ ದುಷ್ಟಕೂಟಗಳೇಲ್ಲ ಸೇರಿ ಟ್ರಸ್ಟ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಇದಕ್ಕೆ ಕೇವಲ ಅವರ ಬೆಂಬಲಿಗರು ಮಾತ್ರ ಸೇರಿ ಮಾಡಿದ ಟ್ರಸ್ಟ ಆಗಿದೆ.ಪಂಚಮಸಾಲಿ ಫೀಠ ಕೂಡಲಸಂಗಮ ಸ್ಥಾಪನೆಯಾಗಿ ಕೆಲವು ದಿನಗಳ ನಂತರ ಈ ಸೃಷ್ಠಿ ರಚನೆಯಾಗಿದೆ. ಅದಕ್ಕಾಗಿ ಶ್ರೀಗಳಿದ್ದರೆ ಫೀಠ, ಅವರಿಲ್ಲದ್ದಿದ್ದರೆ ಆ ಫೀಠಕ್ಕೆ ಯಾವುದೇ ಬೆಲೆ ಇಲ್ಲ, ಕಾಶಪ್ಪನವರ ನಮ್ಮ ಸಮಾಜದ ಯಾವುದೇ ಸ್ಥಾನದಲ್ಲಿಲ್ಲ, ಸಮಾಜಕ್ಕೆ ಒಬ್ಬ ಸಾಮಾನ್ಯ ವ್ಯೆಕ್ತಿ, ಈ ಪರಿಸ್ಥೀತಿಯಲ್ಲಿ ಶ್ರೀಗಳನ್ನು ಉಚ್ಚಾಟಿಸಲು ಅವನಿಗೆ ಯಾವುದೇ ಹಕ್ಕಿಲ್ಲ, ಶ್ರೀಗಳ ಪೀಠ ಕೂಡಲಸಂಗಮವೇ, ಬೇರೆ ಪೀಠದ ಮಾತೆ ಇಲ್ಲ ಎಂದರು.
ನಂತರ ಮಾತನಾಡಿದ ಸಮಾಜದ ಮುಖಂಡರಾದ ಹನಮಂತ ಶಿರೋಳ ಮತ್ತು ಪರ್ಪ ಹುದ್ದಾರ ಬಸವಜಯ ಮೃತ್ಯುಂಜಯ ಶ್ರೀಗಳ ಉಚ್ಚಾಟನೆಯನ್ನು ನಾವು ಕಡಾ ಕಂಡಿತವಾಗಿಯೂ ಒಪ್ಪುವುದಿಲ್ಲ, ಪೀಠದಿಂದ ಬಸವಜಯ ಮೃತ್ಯುಂಜಯ ಶ್ರೀಗಳಲ್ಲ, ಶ್ರೀಗಳಿದ್ದಾಗ ಮಾತ್ರ ಆ ಪೀಠ, ಆದ್ದರಿಂದ ಅವರನ್ನು ಉಚ್ಚಾಟನೆ ಮಾಡಿದ್ದೇನೆ ಎನ್ನುವುದು ಸರಿಯಲ್ಲ, ಕೂಡಲಸಂಗಮಕ್ಕೆ ಶ್ರೀಗಳು ಬಂದ ನಂತರ ನಮ್ಮ ಸಮಾಜವನ್ನು ಸಂಘಟನೆ ಮಾಡುತ್ತಿದ್ದಾರೆ. ಅಂದಿನಿಂದ ಇಡಿ ಕರ್ನಾಟಕದ ಪಂಚಮಸಾಲಿಗಳೇಲ್ಲ ಅವರನ್ನೆ ಜಗದ್ಗುರುಗಳೆಂದು ಒಪ್ಪಿಕೊಂಡಿದ್ದೇವೆ, ಎಲ್ಲ ತಾಲೂಕುಗಳ ಹಿರಿಯರನ್ನು ಸೇರಿಸಿ ಮಾಡಿದ್ದರೆ ಅದು ಒಂದು ಸಮಾಜದ ಟ್ರಸ್ಟ ಆಗುತ್ತಿತ್ತು. ಕೆವಲ ತಮ್ಮ ಸುತ್ತಮುತ್ತ ಇರುವ ಜನರನ್ನು ಸೇರಿಸಿಕೊಂಡು ಮಾಡಿದ ಟ್ರಸ್ಟಗೆ ಮತ್ತು ನಮ್ಮ ಪೀಠಕ್ಕೆ ಯಾವುದೇ ಸಂಭಂದವಿಲ್ಲ, ಕಾಶಪ್ಪನವರ ಅವರು ಬೊಮ್ಮಾಯಿ ಸರ್ಕಾರದಲ್ಲಿ 2ಡಿ. ಮೀಸಲಾತಿ ನೀಡಿದಾಗ ಆ ಆದೇಶ ಪ್ರತಿಯನ್ನು ಹರಿದು ಹಾಕಿ ನಾನು ಸಮಾಜದ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದಿದ್ದರು. ಅವತ್ತಿನಿಂದ ಈವತ್ತಿನವರೆಗೂ ಕರ್ನಾಟಕದಾಧ್ಯಂತ ಅವರು ನಮಗೆ ಯಾವುದೇ ಸಂಬಂದ ಇಲ್ಲ ಎಂದು ತಿಳಿದ್ದಾರೆ , ಇಂಥಾ ಸ್ಥೀತಿಯಲ್ಲಿ ಶ್ರೀಗಳನ್ನು ಉಚ್ಚಾಟನೆ ಮಾಡಿದ್ದೇನೆ ಎನ್ನುವುದು ಸಮಂಜಸವಲ್ಲ ಎಂದರು.
ಪಂಚಮಸಾಲಿ ನಗರ ಘಟಕದ ಅಧ್ಯಕ್ಷ ಬಸಪ್ಪ ಕೊಪ್ಪದ, ಮತ್ತು ಮಹಾದೇವ ಮರಾಪುರ,ಚನಬಸು ಯರಗಟ್ಟಿ, ಡಾ.ಅಶೋಕ ದಿನ್ನಿಮನಿ, ಚನ್ನಪ್ಪ ಪಟ್ಟಣಶೆಟ್ಟಿ, ವಿನೋದಗೌಡ ಉಳ್ಳಾಗಡ್ಡಿ, ಈರ್ಪ ದಿನ್ನಿಮನಿ, ಮಲ್ಲಪ್ಪ ಕೌಜಲಗಿ, ಶ್ರೀಶೈಲಪ್ಪ ಉಳ್ಳಾಗಡ್ಡಿ, ಬಸು ನಾಗನೂರ, ಮಹಾಲಿಂಗಪ್ಪ ಕಂಠಿ, ಅಲ್ಲಪ್ಪ ಕಲ್ಲೋಳಿ, ಸಂದೀಪ ಸುರಗೊಂಡ, ಪಂಡಿತ ಖೋತ, ರವಿ ಗಿರಿಸಾಗರ, ಶ್ರೀಶೈಲ ಬಿರಾದಾರ ಸೇರಿದಂತೆ ಹಲವರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 