ರಾಣೇಬೆನ್ನೂರು ಅಭಿವೃದ್ಧಿಗೆ ಸಂಕಲ್ಪ ತೊಟ್ಟಿದ್ದೇವೆ - ಪ್ರಕಾಶ ಕೋಳಿವಾಡ
We are determined to develop Ranebennur - Prakash Koliwada
ರಾಣೇಬೆನ್ನೂರು 17: ಅಭಿವೃದ್ಧಿ ಕಾಮಗಾರಿಗಳಲ್ಲಿ ತಾವು ಯಾವುದೇ ಕಾರಣಕ್ಕೂ ರಾಜಕೀಯ ಮಾಡುವುದಿಲ್ಲ. ಸಮಗ್ರ ನಗರದ ಅಭಿವೃದ್ಧಿಯೇ ನನ್ನ ಮುಖ್ಯ ಗುರಿಯಾಗಿದೆ ಅಲ್ಲದೆ ನನ್ನ ಸಂಕಲ್ಪವು ಸಹ ಅದೇ ಆಗಿದೆ ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು. ಅವರು ಸೋಮವಾರ, ದೊಡ್ಡಪೇಟೆಯ, ಕುಂಬಾರ ಓಣಿ ದುರ್ಗಮ್ಮ ದೇವಿ ಕಟ್ಟೆ ಬಳಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ, ಅಮೃತ ನಗರೊತ್ತಾನ, ನಗರ ಸಭೆ 20 ಲಕ್ಷ ರೂ ವೆಚ್ಚದ ನೂತನ ಅಂಗನವಾಡಿ ಕಟ್ಟಡದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಹಾವೇರಿ ಜಿಲ್ಲೆಯ ವಾಣಿಜ್ಯ ನಗರ ರಾಣೇಬೆನ್ನೂರಿಗೆ ರಾಜ್ಯದಲ್ಲಿ ಒಳ್ಳೆಯ ಹೆಸರಿದೆ. ಆ ಹೆಸರು ಮತ್ತಷ್ಟು ಬಲಪಡಿಸುವಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳಿಗೆ ನಾವೆಲ್ಲರೂ ಒಂದಾಗಿ, ಒಗ್ಗಟ್ಟಾಗಿ ಅಭಿವೃದ್ಧಿ ಕಾರ್ಯಗಳು ಮಾಡಬೇಕಾಗಿದೆ ಎಂದರು. ಅಧಿಕಾರ, ಆಸ್ತಿ, ಅಂತಸ್ತು ಯಾರಿಗೂ, ಎಂದಿಗೂ ಶಾಶ್ವತವಲ್ಲ. ಜನರು ಸೇವೆ ಮಾಡಲು ಅವಕಾಶಕೊಟ್ಟಾಗ ಅವರ ಬೇಕು, ಬೇಡಗಳಿಗೆ ಸ್ಪಂದಿಸುವುದು ನಮ್ಮೆಲ್ಲ ಜನಪ್ರತಿನಿಧಿಗಳ ಆದ್ಯ ಕರ್ತವ್ಯವಾಗಬೇಕು, ಅದಕ್ಕಾಗಿ ಅನೇಕ ಕ್ರಿಯಾ ಯೋಜನೆಗಳನ್ನು ರೂಪಿಸಲಾಗಿದ್ದು ಸುಂದರ ನಗರದ ಸಮಗ್ರ ಅಭಿವೃದ್ಧಿಗೆ ಪ್ರತಿಯೊಬ್ಬ ನಾಗರೀಕರ ಸಹಕಾರ ಅಗತ್ಯವಿದೆ ಎಂದು ಅವರು ಕೋರಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಪುಟ್ಟಪ್ಪ ಮರಿಯಮ್ಮನವರ, ಮಲ್ಲಣ್ಣ ಅಂಗಡಿ, ಶೇಖಣ್ಣ ಹೊಸಗೌಡ್ರ, ಮಂಜುಳಾ ಹತ್ತಿ, ಗಂಗಮ್ಮ ಹಾವನೂರ, ಶ್ರೀಮತಿ ಕಸ್ತೂರಿ ಸಿದ್ದಣ್ಣ ಚಿಕ್ಕಬಿದರಿ, ರಾಜಶೇಖರಯ್ಯ ಅಜ್ಜೋಡಿಮಠ, ಬಸವರಾಜ ಹುಚ್ಚಗೊಂಡರ, ಮಧು ಕೋಳಿವಾಡ, ಮಲ್ಲೇಶಪ್ಪ ಮದ್ಲೆರ, ಪೌರಾಯುಕ್ತ ಎಫ್. ಐ. ಇಂಗಳಗಿ, ಸಿಡಿಪಿಓ ಪಾರ್ವತಿ ಹುಂಡೆಕಾರ, ಎಇಇ ಮರಿಗೌಡರ, ಗುತ್ತಿಗೆದಾರರಾದ ನಿರಂಜನ್ ಗಡಾದ, ನಾಗಾರ್ಜುನ ಗಡಾದ, ಸ್ಥಳೀಯ ಗಣ್ಯರಾದ ಬಿದ್ದಾಡಪ್ಪ ಚಕ್ರಸಾಲಿ, ಕಪ್ಪತ್ತಪ್ಪ ಸಾಲಿಮನಿ, ನಾಗರಾಜ ರಾಮಾಳದ, ಕೊಟ್ರೇಶ್ ರಮಾಳದ, ಗಣೇಶ್ ಸಾಲಿಮನಿ, ನಾಗಣ್ಣ ಹೊಸರಿತ್ತಿ, ಷಣ್ಮುಖಪ್ಪ ಸಾಲಿಮನಿ, ಕೊಟ್ರೇಶಪ್ಪ, ಬಸವಣ್ಣೇಪ್ಪ, ಸೇರಿದಂತೆ ಮತ್ತಿತರ ಗಣ್ಯರು ವಿವಿಧ ವಾರ್ಡುಗಳ ನಗರಸಭಾ ಸದಸ್ಯರು, ಸ್ಥಳೀಯ ನಾಗರಿಕರು ಪಾಲ್ಗೊಂಡಿದ್ದರು. ಸಂದರ್ಭದಲ್ಲಿ ಶಾಸಕ ಪ್ರಕಾಶ್ ಕೋಳಿವಾಡ ಅವರಿಗೆ ದೊಡ್ಡಪೇಟೆ ಕುಂಬಾರ ಓಣಿಯ ನಾಗರಿಕರು, ಹಾರ್ದಿಕವಾಗಿ ಸ್ವಾಗತಿಸಿ, ಅಭಿನಂದಿಸಿ ಸನ್ಮಾನಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 