ಹಳ್ಳಿಗೋಗುವ ನಾವು ಹಳ್ಳಿಗೋಗುವಾ: ಮಕ್ಕಳ ಪರಿಚಯ ಶಿಬಿರ ಸಂಪನ್ನ
We are a villager, we are a villager: Children's introduction camp Sampanna
ಬೆಳಗಾವಿ 19: ಶಾಲಾ ಸಮವಸ್ತ್ರದಲ್ಲಿದ್ದ 100ಕ್ಕೂ ಹೆಚ್ಚು ಮಕ್ಕಳು ಅಂಗಳದ ಕಲ್ಲು, ಮಣ್ಣು, ಹುಲ್ಲು, ಎಲೆ, ಕಸಗಳನ್ನು ಆಯ್ದುಕೊಂಡು ಪೇಪರ್ ಮೇಲೆ ಅದ್ಭುತವಾದ ಚಿತ್ತಾರಗಳನ್ನು ಬಿಡಿಸಿದರು. ದುರ್ಬಿನು ಹಾಕಿಕೊಂಡು ಹಕ್ಕಿಗಳನ್ನು ಪರಿಚಯಿಸಿಕೊಂಡರು. ಟೆಲಿಸ್ಕೊಪಿಂದ ನಕ್ಷತ್ರಗಳ ನೋಡಿದರು, ಶನಿಗ್ರಹದ ಉಂಗುರ ಕಂಡು ನಲಿದರು. "ಹಳ್ಳಿಗೋಗುವ ನಾವು ಹಳ್ಳಿಗೋಗುವಾ" ಅನ್ನುತ್ತಾ, ಹಾಡುತ್ತ ಹಳ್ಳಿ ಬದುಕಿನ ಸತ್ವವನ್ನು ಸಂಭ್ರಮಿಸಿದರು.
ಆದಿತ್ಯ ಬಿರ್ಲಾ, ಸ್ನೇಹಾಲಯ್ ಅಹಮದಾನಗರ್, ಅಟ್ವಾಸ್ ಫೌಂಡೇಶನ್, ಪಾಲಿ ಹೈಡ್ರೋನ್ ಫೌಂಡೇಶನ್, ಎ ಕೆ ಪಿ ಫೌಂಡ್ರಿಸ್ ಮತ್ತು ಸಮುದಾಯದ ಸಹಭಾಗಿತ್ವದೊಂದಿಗೆ ಶಿಬಿರ ಆಯೋಜನೆಗೊಂಡಿತ್ತು. ಬೆಳಗಾವಿ ತಾಲೂಕಿನ ಗೋರಮಟ್ಟಿ, ಗೋಡಿಹಳ್ಳ, ನಿಂಗೇನಟ್ಟಿ ಹಳ್ಳಿಯ ಮಕ್ಕಳಿಗಾಗಿ ಅಗಸ್ತ್ಯ ಫೌಂಡೇಶನ್ ಮತ್ತು ಕಾಲ್ಮರಿ ಸ್ಟುಡಿಯೋ ಸಂಯೋಜಿಸಿದ ಮೂರು ದಿನಗಳ "ಪರಿಚಯ" ಶಿಬಿರದಲ್ಲಿ ಇಂತಹ ಹತ್ತಾರು ವಿಶೇಷಗಳು ನವೆಂಬರ್ 14, 15, 16ರಂದು ನಡೆದವು.
ಕಲಾವಿದರಾದ ವಿಜು, ಸ್ಮೃದುಲ್ ಅವರಿಂದ ಮಣ್ಣಿನ ವಿವಿಧ ಕಲಾಕೃತಿಗಳ ತಯಾರಿ ಹಾಗೂ ಬಣ್ಣಗಳಿಂದ ಪರಿಸರದ ಅಂಶಗಳ ಚಿತ್ತಾರ, ಹೇಮಂತ್, ಸುಧಾಠು ಅವರ ಮಾರ್ಗದರ್ಶನದ ಪರಿಸರ ವೀಕ್ಷಣೆಯಿಂದ ಹಕ್ಕಿ, ಕೀಟ, ಹಾವುಗಳ ಪರಿಚಯ ಹಾಗೂ ಜಾಗೃತಿ, ಸಂಜೆ ಆಕಾಶ ಕಾಯಗಳ ವೀಕ್ಷಣೆ ಮತ್ತು ಛಾಯಾಚಿತ್ರದ ಮೂಲಕ ಪರಿಚಯ. ಬಿಂದು ರಕ್ಷಿದಿ, ಸುಜಿತ್ ಕಾರ್ಕಳ, ನಾದ, ಶಶಿ ಸಾತ್’ಘಟ್ಟ ಅವರಿಂದ ರಂಗಭೂಮಿ ಚಟುವಟಿಕೆ ಗಳಿಂದ ಹಾಡು, ನಾಟಕ, ಆಟಗಳು, ಮುಖಕ್ಕೆ ವಿವಿಧ ಬಣ್ಣಗಾರಿಕೆ ಮೂಲಕ ಮಕ್ಕಳ ಸರ್ವತೋಮುಖ ವಿಕಸನದ ಚಟುವಟಿಕೆ ಗಳು ನಡೆದವು.
ಕಲಾವಿದ ಶಿವರಂಜನ್ ಹಾಗೂ ಸಂಸ್ಥೆಯ ನಿರ್ದೇಶಕಿ ಪೂರ್ಣಿಮಾ ಅವರ ಮಾರ್ಗದರ್ಶನದಲ್ಲಿ ದೇಶದ ವಿವಿಧ ಕಡೆಯ ಸಂಪನ್ಮೂಲ ವ್ಯಕ್ತಿಗಳ ಒಗ್ಗೂಡುವಿಕೆಯಲ್ಲಿ ಶಿಬಿರವು ಯಶಸ್ವಿಯಾಗಿ ಸಂಪನ್ನ ಗೊಂಡಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 