ಸಂವಿಧಾನ ಉಳಿವಿಗಾಗಿ ನಾವೆಲ್ಲರೂ ಶ್ರಮಹಿಸಬೇಕಿದೆ
We all need to work hard to preserve the Constitution
ಹಾವೇರಿ 27 :ಭಾರತ ಸಂವಿಧಾನ ರಚನೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪಾತ್ರ ಬಹುಮುಖ್ಯವಾಗಿದ್ದು,ಸಂವಿಧಾನ ಉಳಿಸುವ ಜವಾಬ್ದಾರಿಯ ಎಲ್ಲರ ಮೇಲಿದೆ ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷರಾದ ಅಶೋಕ ಮರೆಣ್ಣನವರ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ವತಿಯಿಂದ 77ನೇ ಗಣರಾಜ್ಯೋತ್ಸವ ಹಾಗೂ ಸಂವಿಧಾನ ದಿನಾಚಾರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ಭಾರತದಲ್ಲಿ ಎಲ್ಲರಿಗೂ ಅವಕಾಶಗಳು ಹಾಗೂ ಸೌಲಭ್ಯಗಳು ನಮ್ಮ ಸಂವಿಧಾನದಲ್ಲಿನ ಕಾನೂನುಗಳಿಂದ ಸಿಗುವಂತಾಗಿವೆ. ಸಂವಿಧಾನ ಉಳಿವಿಗಾಗಿ ನಾವೆಲ್ಲರೂ ಶ್ರಮಹಿಸಬೇಕಿದೆ.ಈ ನಿಟ್ಟಿನಲ್ಲಿ ಎಐಬಿಎಸ್‌ಪಿ ಪಕ್ಷ ಬಹುಮುಖ್ಯ ಅಂಶವನ್ನು ಇಟ್ಟಿಕೊಂಡು ಕೆಲಸ ಮಾಡುವ ಗುರಿಯನ್ನು ಹೊಂದಿದೆ ಎಂದರು.ಇದೇ ಅವಧಿಯಲ್ಲಿ ಹಾವೇರಿ ಶಹರ ಘಟಕದ ಅಧ್ಯಕ್ಷರಾಗಿ ಮಹಮ್ಮದಸಾಧಿಕ ದಾದಾಫೀರ,ಉಪಾಧ್ಯಕ್ಷರನ್ನಾಗಿ ರೋಷನ್ ಜಮೀರ ಅಮೀನಬಾವಿ,ಕಾರ್ಯದರ್ಶಿಯಾಗಿ ಮಹ್ಮದರಫೀಕ ಭಾವಿಕಟ್ಟಿ,ಖಜಾಂಚಿಯಾಗಿ ಮಹಮ್ಮದ ಜಾಫರ ದೊಡ್ಡಮನಿ ಸಂಯೋಜಕರಾಗಿ ಮುದಾಸಿರ್ ತಟ್ಗಾರ ಸದಸ್ಯರಾಗಿ ಪ್ರವೀಣ ಅಳ್ಳಳ್ಳಿ,ಕುಮಾರ ಕಳಸೂರ ಇವರುಗಳನ್ನು ನೇಮಕ ಮಾಡಲಾಯಿತು.ಇದೇ ಅವಧಿಯನ್ನು ಅವರಿಗೆ ಪಕ್ಷದ ಶಾಲು ನೀಡಿ ಪಕ್ಷವನ್ನು ಬಲಪಡಿಸಲು ಸೂಚಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ವಿಜಯಕುಮಾರ ವಿರಕ್ತಮಠ,ಶಂಭುಲಿಂಗಯ್ಯ ಹನಗೊಡಿಮಠ,ರಾಜಣ್ಣ ಉಪ್ಪಾರ,ವಿಜಯಕುಮಾರ ಬೆನಕನವಾರಿ,ಪ್ರವೀಣಕುಮಾರ ಹತ್ತಿಮತ್ತೂರ,ಮೃತ್ಯಂಜಯ ನೆಲ್ಲೂರ.ಮಹಾದೇವಪ್ಪ ಹುಡೇದ, ಆಜೀಮಸಾಬ ಮನ್ನಂಗಿ,ಮಹೇಶ ಮಡಿವಾಳರ,ಶರಣಪ್ಪ ದೊಡ್ಡಕರೆಪ್ಪನವರ ಹಾಗೂ ಅನೇಕ ಮುಖಂಡರು ಮತ್ತು ಪಕ್ಷದ ಕಾರ್ಯಕರ್ತರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 