ಸಿರುಗುಪ್ಪ 06: ಜಗತ್ತಿನಲ್ಲಿ ಪ್ರತಿಯೊಬ್ಬರು ಅಲ್ಲಾಹನ ಭಯದಲ್ಲಿ ಬದುಕಬೇಕು ಅಲ್ಲಾಹನಿಂದಲೇ ನಾವೆಲ್ಲ, ಈ ಭೂಮಿಯ ಮೇಲೆ ಬಂದಿದ್ದೇವೆ ಅಲ್ಲಾಹನದಯೆ ಮತ್ತುಕರುಣೆಯಿಂದ ಇಲ್ಲಿ ನೆಮ್ಮದಿಯಿಂದ ಇದ್ದೇವೆ ಆದ್ದರಿಂದ ಎಲ್ಲರೂ ಅಲ್ಲಾಹನ ಇರುವಿಕೆಯ ಪ್ರಜ್ಞೆ ಹಾಗೂ ಭಯದಿಂದ ಬದುಕಿದರೆ ಜೀವನ ಸಾರ್ಥಕವಾಗುತ್ತದೆ ಎಂದು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಹಾಗೂ ಖ್ಯಾತ ವಚನಕಾರ ಮಹಮ್ಮದ್ ಕುಂಞಿ ಅವರು ಹೇಳಿದರು.
ಸಿಂಧನೂರು ನಗರದಲ್ಲಿ ಅವರು ಮೂರನೇ ದಿನದ ಸಾರ್ವಜನಿಕ ಖುರಾನ್ ಪ್ರವಚನ ಕಾರ್ಯಕ್ರಮದಲ್ಲಿ ಸರ್ವರನ್ನು ಉದ್ದೇಸಿ ಮಾತನಾಡುತ್ತಾ ಪ್ರತಿಯೊಬ್ಬ ವಿದ್ಯಾರ್ಥಿ ಜೀವನದಲ್ಲಿ ಪರೀಕ್ಷೆ ಇದ್ದಂತೆ ಪ್ರತಿಯೊಬ್ಬ ಮನುಷ್ಯನಿಗೂ ಭೂ ಲೋಕದ ನಂತರ ಪರಲೋಕದಲ್ಲಿ ಅವನ ಸತ್ಕರ್ಮಗಳ ಆಧಾರದ ಮೇಲೆ ಪರೀಕ್ಷೆಗಳು ನಡೆಯುತ್ತವೆ ಒಳ್ಳೆ ಫಲಿತಾಂಶ ಬರಬೇಕೆಂದರೆ ಎಲ್ಲರೂ ಭೂಲೋಕದಲ್ಲಿ ಉತ್ತಮ ಕೆಲಸಗಳನ್ನು ಪರೋಪಕಾರಗಳನ್ನು ಮಾಡಬೇಕು ತಮಾಸ ಗುಣವನ್ನು ತೊರೆದು ಅಂತರಂಗ ಶುದ್ಧಿ ಸಾತ್ವಿಕ ಸ್ವಭಾವ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರಂಭಾಪುರಿ ಶಾಖ ಮಠದ ಸೋಮನಾಥ ಶಿವಾಚಾರ್ಯರು ಸರ್ವಜನಾಂಗದವರನ್ನು ಉದ್ದೇಶಿಸಿ ಮಾತನಾಡಿ ಜಾಗತಿಕ ಮಟ್ಟದಲ್ಲಿ ಮಾನವ ಬೆಳೆಯುತ್ತಿದ್ದಾನೆ. ಮಂಗಳ ಅಂಗಳದಲ್ಲಿ ಮನೆ ಮಾಡುವ ಕನಸು ಆಕಾಶದಲ್ಲಿ ಹಕ್ಕಿಯ ಹಾಗೆ ನೀರಿನಲ್ಲಿ ಮೀನಿನ ಹಾಗೆ ಈಸುವುದನ್ನುಕಲಿತಿರುವ ಮನುಷ್ಯ ಮಾನವೀಯ ಮೌಲ್ಯಗಳಿಂದ ದೂರವಾಗುತ್ತಿದ್ದಾನೆ. ಮನುಷ್ಯತ್ವ ಇಲ್ಲದ ಧರ್ಮವೇ ಅಲ್ಲ ವಿದ್ಯೆಗೆ ವಿನಯವೇ ಭೂಷಣ ಎನ್ನುವಂತೆ ಧರ್ಮಕ್ಕೆ ಸಂಸ್ಕಾರವೇ ಕಳಶಪ್ರಾಯ ಎಂದು ಹೇಳಿದರು. ಎದ್ದಲ ದೊಡ್ಡಿ ಸುವರ್ಣಗಿರಿ ವಿರಕ್ತ ಮಠದ ಮಹಾಲಿಂಗ ಮಹಾಸ್ವಾಮಿಗಳು ತುರುವೀಹಾಳದ ಪುರವರಅಮರಗುಂಡ ಶಿವಚಾರ್ಯರು ಹೋಲಿ ಫ್ಯಾಮಿಲಿ ಚರ್ಚ್ ನ ಫಾದರ್ಜ್ಞಾನ ಪ್ರಕಾಶ್ ಮಸ್ಕಿ ವಿಧಾನಸಭಾಕ್ಷೇತ್ರದ ಮಾಜಿ ಶಾಸಕ ಪ್ರತಾಪ್ಗೌಡ ಪಾಟೀಲ್ಅವರು ಮಾತನಾಡಿದರು. ಸನ್ಮಾನಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷ ಎಸ್ ಶರಣೆಗೌಡ ಪ್ರವಚನಕಾರ ಮಹಮ್ಮದ್ಕುಂಞಿ ಜಮಾತೆ ಇಸ್ಲಾಮಿ ಹಿಂದ್ತಾಲೂಕ ಘಟಕದ ಅಧ್ಯಕ್ಷ ಹುಸೇನ್ ಸಾಬ್ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಸಿರುಗುಪ್ಪ ತಾಲೂಕು ದೇಶನೂರು ಗ್ರಾಮದ ಗ್ರಾಮಸ್ಥರು ಮಹಮ್ಮದ್ಕುಂಞಿ ಅವರಿಗೆ ಗೌರವ ಪೂರ್ವಕ ಸನ್ಮಾನಿಸಿದರು. ಖುರಾನ್ ವಸ್ತು ಪ್ರದರ್ಶನದಲ್ಲಿ ಪ್ರಥಮ ದ್ವಿತೀಯತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವಿಧಾನಸಭಾಕ್ಷೇತ್ರದ ಶಾಸಕ ಹಂಪನಗೌಡ ಬಾದರ್ಲಿ ಸೈಯದ್ ಜಾಫರ್ ಅಲಿ ಜಾಗೀರ್ದಾರ್ಡಾಚನ್ನನಗೌಡ ಪಾಟೀಲ್ ವೈ ನರೇಂದ್ರನಾಥ್ ಪ್ರಹ್ಲಾದಗುಡಿ ವಕೀಲ ಜೆರಾಯಪ್ಪ ವಕೀಲ ಚಂದ್ರಶೇಖರ್ ಹೀರೆಮಠಡಾ ಹುಸೇನಪ್ಪಅಮರಾಪುರ ಎಂ ಡಿ ನದಿಮುಲ್ಲಾ ಸೇರಿದಂತೆ ಅನೇಕರು ಇದ್ದರು. ಇದೇ ಸಂದರ್ಭದಲ್ಲಿಜಮಾತೆಇಸ್ಲಾಮಿ ಹಿಂದ್ತಾಲೂಕಘಟಕದಅಧ್ಯಕ್ಷ ಹುಸೇನ್ ಸಾಬ್ಅವರ ಸುಪುತ್ರ ನ ವಿವಾಹ ನಿಖಾ ಅತ್ಯಂತ ಸರಳವಾಗಿ ಇದೇ ವೇದಿಕೆಯಲ್ಲಿ ನಡೆದದ್ದು ವಿಶೇಷವಾಗಿತ್ತು ನಂತರ ಸರ್ವಜನಾಂಗದಎಲ್ಲರಿಗೂ ಭೋಜನಓತಣಕೂಟ ವ್ಯವಸ್ಥೆಯನ್ನು ಸ್ವಾಗತ ಸಮಿತಿಯವರು ಏರಿ್ಡಸಿದ್ದರು. ಸಿರುಗುಪ್ಪ ಸಿಂಧನೂರು ಮಾನ್ವಿಗಂಗಾವತಿಕಾರಟಗಿ ಮಸ್ಕಿ ಸುತ್ತಮುತ್ತ ಗ್ರಾಮಗಳ ಬೃಹತ್ ಸಂಖ್ಯೆಯಲ್ಲಿಜನರು ಆಗಮಿಸಿದ್ದರು.