ವೇವ್ಸ್ ಆಫ್ ಗ್ಲೋರಿ-2026 ಪ್ರಶಸ್ತಿ ಪ್ರಧಾನ..!
Waves of Glory-2026 Award-winning..!
ಲೋಕದರ್ಶನ ವರದಿ
ಮಿರಜನ ಹೆಸರಾಂತ ಮನೋವೈದ್ಯ ಡಾ. ಚಂದ್ರಶೇಖರ ಹಳಿಂಗಳೆ ಅವರ ಸಾಧನೆಗೆ ಮತ್ತೊಂದು ಗರಿ;
ಕಾಗವಾಡ 29: ಮಿರಜ ಪಟ್ಟಣದ ನಿರ್ಮಲ ಆಸ್ಪತ್ರೆ ಮತ್ತು ವ್ಯಸನಮುಕ್ತಿ ಕೇಂದ್ರದ ಖ್ಯಾತ ಮನೋವೈದ್ಯ, ಸಮಾಜ ಸೇವಕ ಡಾ. ಚಂದ್ರಶೇಖರ ಹಳಿಂಗಳೆ ಅವರಿಗೆ ಮನೋವೈದ್ಯಶಾಸ್ತ್ರ ಮತ್ತು ವ್ಯಸನಮುಕ್ತಿ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಪರೀಗಣಿಸಿ ದೈನಿಕ್ ಭಾಸ್ಕರ್ ಗ್ರೂಪ್ನವರು ಕೊಡಮಾಡುವ ‘ವೇವ್ಸ್ ಆಫ್ ಗ್ಲೋರಿ-2026’ ಪ್ರಶಸ್ತಿಯನ್ನು ಗೋವಾದ ಪಣಜಿಯ ನಿರ್ವಾಣ ಕ್ರೂಸ್ನಲ್ಲಿ ಇತ್ತಿಚಿಗೆ ಖ್ಯಾತ ನಟಿ ಸೋನಾಲಿ ಕುಲಕರ್ಣಿ ಅವರ ಹಸ್ತದಿಂದ ನೀಡಿ, ಗೌರವಿಸಲಾಯಿತು.
ನಿರ್ಮಲ ಆಸ್ಪತ್ರೆಯು ಮಾನಸಿಕ ಆರೋಗ್ಯ ಮತ್ತು ವ್ಯಸನಮುಕ್ತಿ ಕ್ಷೇತ್ರದಲ್ಲಿ ಸಾವಿರಾರು ರೋಗಿಗಳಿಗೆ ಮಾನಸಿಕ ಹಾಗೂ ಮದ್ಯ, ತಂಬಾಕು, ಗಾಂಜಾ, ಬ್ರೌನ್ ಶುಗರ್ ಮತ್ತು ಇತರ ಮಾದಕ ವಸ್ತುಗಳ ವ್ಯಸನವನ್ನು ತೊಡೆದುಹಾಕಲು ಪರಿಣಾಮಕಾರಿ ಚಿಕಿತ್ಸೆಯನ್ನು ಒದಗಿಸುತ್ತಿದ್ದು, ಈ ಕೇಂದ್ರವು ಮಹಾರಾಷ್ಟ್ರ ಮತ್ತು ಕರ್ನಾಟಕದ ರೋಗಿಗಳಿಗೆ ವಿಶ್ವಾಸಾರ್ಹ ಸ್ಥಳವಾಗಿದೆ. ನಿರ್ಮಲ್ ಆಸ್ಪತ್ರೆಯನ್ನು ಸ್ಥಾಪಿಸಿ, ವ್ಯಸಮುಕ್ತಿ ಕ್ಷೇತ್ರದಲ್ಲಿ ಡಾ. ಚಂದ್ರಶೇಖರ ಹಳಿಂಗಳೆ ಅವರ ಕಾರ್ಯಕ್ಕೆ ಈ ಪ್ರಶಸ್ತಿಗೆ ಅವರು ಭಾಜನಾರಿದ್ದಾರೆ. ಈ ವೇಳೆ ಡಾ. ಚಂದ್ರಶೇಖರ ಹಳಿಂಗೆಳೆ ಅವರ ಪತ್ನಿ, ಸ್ತ್ರೀರೋಗತಜ್ಞ ಡಾ. ನಿಶಾ ಹಳಿಂಗಳೆ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 