ಜಲಾನಯನ ಯೋಜನೆ ರೈತರಿಗೆ ವರದಾನ: ಶಾಸಕ ನಾಡಗೌಡ

ಜಲಾನಯನ ಯೋಜನೆ ರೈತರಿಗೆ ವರದಾನ: ಶಾಸಕ ನಾಡಗೌಡ Watershed project a boon for farmers: MLA Nadagowda

ಮುದ್ದೇಬಿಹಾಳ: ಜಲಾನಯನ ಯೋಜನೆ ರೈತರಿಗೆ ವರದಾನವಾಗಿದ್ದು, ಬದು ನಿರ್ಮಾಣದಿಂದ ಮಣ್ಣಿನ ಸವಕಳಿ ತಡೆಗಟ್ಟಬಹುದು ಮತ್ತು ಅಂತರ್ಜಲ ಮಟ್ಟ ಹೆಚ್ಚಳವಾಗಿ ನೀರಾವರಿ ಕ್ಷೇತ್ರ ಹೆಚ್ಚಳವಾಗುತ್ತದೆ ಮಾತ್ರವಲ್ಲದೇ ರೈತರು ಉತ್ತಮ ಬೆಳೆದು ಉತ್ತಮ ಆದಾಯ ಗಳಿಸಬಹುದಾಗಿದೆ ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಭೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ (ಅಪ್ಪಾಜಿ) ಹೇಳಿದರು. ತಾಲೂಕಿನ ಕವಡಿಮಟ್ಟಿ ಗ್ರಾಮದಲ್ಲಿ ಕೃಷಿ ಇಲಾಖೆಯ ನೇತೃತ್ವದಲ್ಲಿ ಜಲಾನಯನ  ಮಹೋತ್ಸವ ಕಾರ್ಯಕ್ರಮವನ್ನು ಶನಿವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು. 

ಇಂದು ರೈತರು ತಮ್ಮ ಹೊಲಗಳಿಗೆ ಬದು ನಿರ್ಮಾಣವನ್ನೇ ಮಾಡುವುದನ್ನು ಕೈಬಿಟ್ಟಿದ್ದಾರೆ. ಇದರಿಂದ ಮಳೆ ಬಂದಾಗ ನೀರು ಭೂಮಿ ನಿಲ್ಲದೇ ಹರಿದು ಹೋಗಿ ಭೂಮಿಯ ಫಲವತ್ತತೆ ಕುಂಟಿತಗೊಳ್ಳುವ ಸಾಧ್ಯತೆ ಹೆಚ್ಚಾಗುತ್ತದೆ. ಅದಲ್ಲದೇ ಇತ್ತಿಚಿಗೆ ಬರಿ ರಾಸಾಯನಿಕ ಗೊಬ್ಬರ ಹಾಗೂ ವಿಷಕಾರಿ ಓಷದ ಬಳಸುತ್ತಿರುವುದರಿಂದ ಆಹಾರದಲ್ಲಿ ಸತ್ವ ಕಳೆದುಕೊಳ್ಳುವಂತಾಗುತ್ತಿದೆ. ಕಾರಣ ರೈತರು ಕೃತಕ ಗೊಬ್ಬರ ಬಳಸುವ ಮೂಲಕ ಸಾವಯುವ ಕೃಷಿ ಪದ್ದತಿ ಹಾಗೂ ಮಿಶ್ರಬೆಳೆಗಳನ್ನು ಬೆಳೆಯುವ ಪದ್ದತಿ ರೂಢಿಸಿಕೊಳ್ಳಬೇಕು ಎಂದರು.ಜಮೀನಿನಲ್ಲಿ ತೋಟಗಾರಿಕೆ ಗಿಡಗಳನ್ನು ನೆಡುವುದರಿಂದ ಆರ್ಥಿಕವಾಗಿ ಸಬಲರಾಗುವರು ಮತ್ತು ಸುಸ್ಥಿರ, ನಿರಂತರ ಆದಾಯ ಕೂಡ ಪಡೆಯಬಹುದು. ಬದುವಿನಲ್ಲಿ ಅರಣ್ಯ ಗಿಡಗಳನ್ನು ನೆಡುವುದರಿಂದ ಶುದ್ಧವಾದ ಗಾಳಿ ಮತ್ತು ಬೆಳಕು ಸಿಗುವುದರಿಂದ ಧೀರ್ಘ ಕಾಲದಲ್ಲಿ ಇದರ ಉಪಯೋಗ ಪಡೆಯಬಹುದು.

ಅಲ್ಲದೇ, ಕೃಷಿ ಇಲಾಖೆಯಲ್ಲಿ ರೈತರಿಗೆ ಅನೇಕ ಅನುಕೂಲಗಳಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು. ಕೇದ್ರ ಹಾಗೂ ರಾಜ್ಯ ಸರಕಾರಗಳು ಸಮನಯ್ವ ಒಡಂಡಿಕೆಯಿಂದ ರೈತರಿಗೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕು ಆದರೇ ಕೇಂದ್ರ ಸರಕಾರ ರಾಜ್ಯ ಸರಕಾರಕ್ಕೆ ಸಕಾರಾತ್ಮಕ ಸ್ಪಂದನೆ ನೀಡುತ್ತಿಲ್ಲ ಜತೆಗೆ ಕಬ್ಬು ಸೇರಿದಂತೆ ರೈತರು ಬೆಳೆದ ಯಾವೂದೇ ಬೆಂಬಲ ಬೆಲೆ ನಿಗದಿ ಮಾಡಬೇಕಾದರೇ ಕೇಂದ್ರ ಸರಕಾರ ನಿಗದಿಗೊಳಿಸಬೇಕಾಗುತ್ತದೆ ಆದರೇ  ನಮ್ಮ ಮುಖ್ಯಮಂತ್ರಿಗಳು ನಮ್ಮ  ರೈತರಿಗೆ ಅನುಕೂಲವಾಗಲೇಂದು ಸಧ್ಯ ನಮ್ಮ ರಾಜ್ಯಸರಕಾರದಿಂದ ಬೆಂಬಲ ಬೆಲೆ ನೀಗದಿ ಮಾಡುವ  ಮೂಲಕ ರೈತರ ಧ್ವನಿಯಾಗಿ ನಿಂತಿದೆ ಎಂಬುದನ್ನು ರೈತರು ಅರ್ಥೈಸಿಕೊಳ್ಳಬೇಕು. 

ಸಧ್ಯ ಜಲಾನಯನ ಯೋಜನೆಯಿಂದ ಸುಮಾರು 2800 ಹೇಕ್ಟೇರ ಜಮೀನು ಅಭಿವೃದ್ಧಿ ಪಡಿಸಲಾಗುವ ಮಹತ್ತರ ಯೋಜನೆ ಇದಾಗಿದೇ ರೈತರು ಮತ್ತು ಗ್ರಾಮಸ್ಥರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು. ವಿಜಯಪುರ ಉಪ ಕೃಷಿ ನಿರ್ದೇಶಕ ಶರಣಗೌಡ  ಅವರು ಮಾತನಾಡಿ, ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಾಭೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷರಾದ ಸಿ ಎಸ್ ನಾಡಗೌಡ(ಅಪ್ಪಾಜಿ) ಅವರು ಪರಿಶ್ರಮದಿಂದ ಸಧ್ಯ ತಮ್ಮ ತಾಲೂಕಿಗೆ ಜಲಾನಯನ ಯೋಜನೆ ಈ ಭಾಗಕ್ಕೆ ಬಂದಿರುವುದು ನಿಮ್ಮ ಭಾಗ್ಯ, ಈ ಯೋಜನೆಯಡಿ ಮುಖ್ಯವಾಗಿ ರೈತರಿಗೆ ಮಣ್ಣಿನ ಬದು, ತಡೆ ಅಣೆ, ತೋಟಗಾರಿಕೆ, ಕೃಷಿ ಅರಣ್ಯ, ಪಶು ಸಂಗೋಪನೆ ಮತ್ತು ಆಸ್ತಿ ರಹಿತರಿಗೆ ಜೀವನೋಪಾಯಕ್ಕಾಗಿ ಕೂಲಿ ಕೆಲಸದ ಜೊತೆಗೆ ಮಹಿಳೆಯರಿಗೆ ಸ್ವ-ಉದ್ಯೋಗ ಮಾಡಲುಹವಾಮಾನ ಬದಲಾವಣೆ, ಭೂಮಿ, ಶಾಶ್ವತ ಜಲಾನಯನ ನಿರ್ವಹಣೆಗೆ ಸಂಬಂಧಿಸಿದ ಜ್ಞಾನ ಮತ್ತು ಅನುಭವ ವಿನಿಮಯಕ್ಕೆ ಜಾಗತಿಕ ತಜ್ಞರು, ಸಂಶೋಧಕರು ಹಾಗೂ ವಿಜ್ಞಾನಿಗಳನ್ನು ಈ ಯೋಜನೆಗಳನ್ನು ರೂಪಿಸುವಲ್ಲಿ ಅಗತ್ಯ ಸಲಹೇ ಸೂಚನೆಗಳನ್ನು ನೀಡಿದ್ದಾರೆ.  

“ಯಶಸ್ವಿ ಜಲಾನಯನ ಅಭಿವೃದ್ಧಿಯ ಎರಡುಸ್ತಂಭಗಳು ತಾಂತ್ರಿಕ ಸಾಮರ್ಥ್ಯ ಮತ್ತು ಬಲವಾದ ಆಡಳಿತವಾಗಿದೆ. ಪಿ ಎಂ ಕ ಎಸ್ ವಾಯ್ ಡಬ್ಲೂ ಡಿ ಸಿ 2.0  ಈಕಾರ್ಯಕ್ರಮವು ದೇಶವ್ಯಾಪಿ  ಕಾರ್ಯಕ್ರಮದಲ್ಲಿ ವಿಸ್ತರಿಸಲು ಅಗತ್ಯವಾದ ತಾಂತ್ರಿಕ ಬಲವನ್ನು ಒದಗಿಸುತ್ತದೆ ಎಂದು ಅವರು ತಿಳಿಸಿದರು. ಸ್ಥಳೀಯ ಸಮುದಾಯಗಳು ಮತ್ತು ಸಂಸ್ಥೆಗಳನ್ನು ಬಲಪಡಿಸುವ ಮೂಲಕ ಅಭಿವೃದ್ಧಿಗೆ ಒತ್ತು ನೀಡುವ ಅಗತ್ಯವಿದೆ” ಎಂದು ಹೇಳಿದರು.ಈ ವೇಳೆ ರೈತರಿಗೆ ಕೃಷಿ ಪರಿಕರಗಳನ್ನು ವಿತರಿಸಲಾಯಿತು. ಚಿತ್ರಕಲಾ ಹಾಗೂ ರಂಗೋಲಿ ಸ್ಪರ್ಧೆಯಲ್ಲಿ ಬಾಗವಹಿಸಿ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪಾರಿತೋಷಕ ನೀಡಿ ಗೌರವಿಸಲಾಯಿತು. ಹಾಗೂ ಕೃಷಿ ಇಲಾಖೆ ವತಿಯಿಂದ ಕವಡಿಮಟ್ಟಿ ಸರಕಾರಿ ಪ್ರಾಥಮೀಕ ಶಾಲೆಗೆ 92 ಡೆಸ್ಕ್‌ ಗಳನ್ನು ವಿತರಿಸಲಾಯಿತು,

ನಿವೃತ್ತ ಸಹಾಯಕ ಕೃಷಿ ನಿರ್ಧೇಶಕ ಎ ಎಂ ಸಾವಳಗಿ ವಿಶೇಷ ಉಪನ್ಯಾಸ ನೀಡಿದರು. ಕವಡಿಮಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷೇ ಶಕುಂತಲಾ ಚಂದಾಲಿಂಗ ಹಂಡರಗಲ್‌ತಾಲೂಕಾ ಕೃಷಿ ಸಹಾಯಕ ನಿರ್ದೆಶಕ ಎಸ್ ಡಿ ಭಾವಿಕಟ್ಟಿ, ಕೃಷಿ ಅಧಿಕಾರಿ ಅರವಿಂದ ಹೂಗಾರ, ಸೋಮನಗೌಡ ಬಿರಾದಾರ, ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಬಿ ಎಸ್ ಸಾವಳಗಿ,ಕೃಷಿ ಅಧಿಕಾರಿ ಗೋವಿಂದರೆಡ್ಡಿ ಮೆದಿಕಿನಾಳ, ಹಿರಿಯ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ಧೇಶಕ ಆರ್ ಟಿ ಹಿರೇಮಠ, ಎಸ್ ಡಿ ಎಂ ಸಿ ಅಧ್ಯಕ್ಷ ಬಸವರಾಜ ಪಾಟೀಲ, ಮುಖಂಡರಾದ ಸಂಗನಗೌಡ ಪಾಟೀಲ, ಚಂದಾಲಿಂಗ ಹಂಡರಗಲ್, ಸಿದ್ರಾಮಪ್ಪ ವಾಲಿಕಾರ ಸೇರಿದಂತೆ ಹಲವರು ಇದ್ದರು.