ಮುಖ್ಯ ಕಾಲುವೆಯಿಂದ ಕೆರೆಗೆ ನೀರು ಬರಲು ಪ್ರಾರಂಭ
Water starts coming from the main canal to the lake
ಸಂಬರಗಿ, 09 ; ಗಡಿ ಭಾಗದ ರೈತರ ಕನಸಾಗಿರುವ ಖಿಳೇಗಾವಿ ಬಸವೇಶ್ವರ ಏತ ನೀರಾವರಿ ಯೋಜನೆ ಕಾಲುವೆ ಮುಖಾಂತರ ನೀರು ಹರಿಯಲು ಪ್ರಾರಂಭವಾಗಿದ್ದು, ಮದಭಾವಿ ಕೆರೆಯಲ್ಲಿ ನೀರು ಬರಲು ವಿಳಂಬವಾದನಂತರ ಗ್ರಾಮಸ್ಥರು ಸೇರಿ ಶಾಸಕ ರಾಜು ಕಾಗೆ, ಶಾಸಕ ಲಕ್ಷ್ಮಣ ಸವದಿ ಇವರ ಸತತ ಪ್ರಯತ್ನದಿಂದ ಮುಖ್ಯ ಕಾಲುವೆಯಿಂದ ಕೆರೆಗೆ ನೀರು ಬಿಡಲು ಪ್ರಾರಂಭ ಮಾಡಿದ್ದಾರೆ. ಶೀಘ್ರದಲ್ಲಿ ಶಾಸಕರ ಉಪಸ್ಥಿತಿಯಲ್ಲಿ ಬಾಗಿನ ಅರ್ಣ ಕಾರ್ಯಕ್ರಮ ಮಾಡಲಾಗುವುದು ಎಂದು ಪಿ.ಕೆ.ಪಿ.ಎಸ್. ಸಂಘದ ಅಧ್ಯಕ್ಷರಾದ ನಿಜಗುಣಿ ಮಗದುಮ್ ಹೇಳಿದರು.
ಮದಭಾವಿ ಗ್ರಾಮದಲ್ಲಿ ಮುಖ್ಯ ಕಾಲುವೆಯಿಂದ ಕೆರೆಗೆ ನೀರು ಬರಲು ಪ್ರಾರಂಭವಾದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿ ಅವರು ನೇರವಾಗಿ ಕೆರೆಗೆ ನೀರು ಬರಲು ವಿಳಂಬವಾದ ನಂತರ ನೀರಾವರಿ ಅಧಿಕಾರಿ ಹಾಗೂ ಶಾಸಕರ ಪ್ರಯತ್ನದಿಂದ ಮುಖ್ಯ ಕಾಲುವೆಯಿಂದ ಕೆರೆಗೆ ನೀರು ಬರಲು ವ್ಯವಸ್ಥೆ ಮಾಡಿದರು. ಕೆರೆ ತುಂಬಿದ ನಂತರ ಈ ಭಾಗದಲ್ಲಿ ಕೊಳವೆ ಬಾವಿ, ತೆರೆದ ಬಾವಿಗಳ ನೀರಿನ ಮಟ್ಟ ಹೆಚ್ಚುತ್ತದೆ. ಈ ಭಾಗದಲ್ಲಿ ಇರುವ ಬರಗಾಲ ಹಣೆಪಟ್ಟಿ ಮುಕ್ತಗೊಳ್ಳುತ್ತದೆ.
ಈ ಯೋಜನೆಯಿಂದ ವಂಚಿತಗೊಂಡಿರುವ ಏಳು ಗ್ರಾಮಗಳಿಗೆ ಕೃಷ್ಣಾ ನದಿಯಿಂದ ಪೈಪ್‌ಲೈನ್ ಮುಖಾಂತರ ಪಾರ್ಥನಹಳ್ಳೀ, ಗುಂಡೆವಾಡಿ, ಬಳ್ಳಿಗೇರಿ, ಅನಂತಪೂರ, ಮಲಾಬಾದ ಈ ಗ್ರಾಮಗಳಲ್ಲಿ ಇರುವ ಕೆರೆಗಳಲ್ಲಿ ನೀರು ತುಂಬುವ ನದಿಯಿಂದ ಪೈಪ್‌ಲೈನ ಕಾಮಗಾರಿಯು ಭರದಿಂದ ಸಾಗುತ್ತಿದೆ. ಚುನಾವಣೆಯಲ್ಲಿ ನೀಡಿರುವ ಭರವಸೆಯನ್ನು ಅವರು ಪೂರ್ಣಗೊಳಿಸುತ್ತಿದ್ದಾರೆ ಎಂದು ಹೇಳಿದರು.
ಈ ವೇಳೆ ಅಶೋಕ ಪೂಜಾರಿ, ಅಪ್ಪಾಸಾಬ ಚೌಗಲಾ, ಸಾತಪ್ಪ ನಿವಲಗಿ, ಶಿವಾನಂದ ಮಗದುಮ್, ರಾವಸಾಬ ಚೌಗಲಾ, ಮಹಾಂತೇಶ ಮೇಜ, ಸಿದರಾಯ ಒಣಜೋಳಿ, ಭೈರು ಪಾಟೀಲ್, ಮನೋಹರ ಪೂಜಾರಿ, ಆದರ್ಶ ಪವಾರ, ಆದರ್ಶ ಪೂಜಾರಿ, ಲಕ್ಷ್ಮಣ ಮಗದುಮ್, ಬಾಹುಬಲಿ ಉಮದಿ ಉಪಸ್ಥಿತ ಇದ್ದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 