ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆ ಮೇಲೆ ನೀರು: ಸುಗಮ ವ್ಯವಸ್ಥೆಗೆ ಆಗ್ರಹ
Water on the road without a drainage system: Demand for a smooth system
ಆಲಮೇಲ 18: ಪಟ್ಟಣದ ವಿವಿಧ ವಾರ್ಡಗಳ ರಸ್ತೆಗಳು ಹಾಳಾಗಿದ್ದು ಸುಮಾರು 4ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು ರಸ್ತೆಗಳೆಲ್ಲ ಕೆಸರಾಗಿ ಸರಿಯಾದ ಒಂದು ರಸ್ತೆ, ಚರಂಡಿ ಇಲ್ಲದೆ ಹದಗೆಟ್ಟ ವ್ಯವಸ್ಥೆಯಿಂದ ಜನರು ಓಡಾಡುವುದೇ ಕಷ್ಟವಾಗಿದೆ.
ಗಣೇಶ ನಗರದಲ್ಲಿ ಚರಂಡಿ ವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ನೀರು ಹೋಗಲು ದಾರಿ ಇಲ್ಲ. ಕೇಳುವವರು ಯಾರು ಎಂದು ಇಲ್ಲಿನ ಜನರ ಗೋಳು. ರಸ್ತೆ ದಾಟಲು ವಾಹನ ಸವಾರರು ಹರಸಾಹಸ ಮಾಡಬೇಕಾಗಿದ್ದು, ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಾಗಿದೆ. ಪಟ್ಟಣ ಪಂಚಾಯತಿ ಗಮನ ಹರಿಸಿ ಗ್ರಾಮದ ವಿವಿಧ ರಸ್ತೆಗಳು ಜಲ ಯೋಜನೆ ಗುತ್ತಿಗೆದಾರ ಉತ್ತಮವಾಗಿದ್ದ ರಸ್ತೆಗಳನ್ನು ಜಿಸಿಬಿಯಿಂದ ಎರಾ್ರ ಬಿರಿ್ರ ಅಗೆದು ಹಾಳು ಮಾಡಿ ರಸ್ತೆ ಪಕ್ಕದಲ್ಲಿ ಮಣ್ಣಿನ ರಾಶಿ ಹಾಕಿದ್ದು, ಗ್ರಾಮದ ರಸ್ತೆಗಳು ಸಂಪೂರ್ಣ ಕೆಸರುಗದ್ದೆಯಂತಾಗಿವೆ. ಪಟ್ಟಣ ಪಂಚಾಯತಿ ಗಮನ ಹರಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿ ಕೊಡಬೇಕೆಂದು ಇಲ್ಲಿನ ಜನರ ಆಗ್ರಹವಾಗಿದೆ.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 