ಹಿಪ್ಪರಗಿ ಬ್ಯಾರೇಜ್‌ನಿಂದ ನೀರು ಸೋರಿಕೆ: ನೀರಿನ ಗಂಭೀರ ಕೊರತೆ ಎದುರಾಗುವ ಸಾಧ್ಯತೆ
Water leakage from Hipparagi Barrage: Serious water shortage likely
ಮಾಂಜರಿ 10: ಹಿಪ್ಪರಗಿ ಬ್ಯಾರೇಜ್‌ನಿಂದ ಸುಮಾರು 2.5 ಟಿಎಂಸಿ ಕೃಷ್ಣಾ ನದಿ ನೀರು ಸೋರಿಕೆಯಾಗಿದೆ. ಪರಿಣಾಮ ಕರ್ನಾಟಕ ಮಾತ್ರವಲ್ಲದೆ ನೆರೆಯ ಮಹಾರಾಷ್ಟ್ರದ ಗಡಿ ಗ್ರಾಮಗಳಿಗೂ ನೀರಿನ ಗಂಭೀರ ಕೊರತೆ ಎದುರಾಗಿದೆ ಎಂದು ಅಂಕಲಿ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಮಾಜಿ ತಾಲೂಕಾ ಪಂಚಾಯತ್ ಸದಸ್ಯರಾದ ಸುರೇಶ್ ಪಾಟೀಲ್ ತಿಳಿಸಿದ್ದಾರೆ.
ಅವರು ಶನಿವಾರದಂದು ಅಂಕಲಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ ಈ ವಿಷಯ ತಿಳಿಸಿದರು. ನೆರೆಯ ಮಹಾರಾಷ್ಟ್ರದ ಶಿರೋಳ ತಾಲ್ಲೂಕಿನ ಗೌರವಾಡ, ನರಸಿಂಗವಾಡಿ, ಓರವಾಡ, ಗಣೇಶವಾಡಿ, ಶೇಡಶ್ಯಾಳ, ಕೌವಟೆಗುಲಂದ, ಅಲಾಸ, ಬುಬನಾಳ, ಬಸ್ತವಾಡ, ಅಕಿವಾಟ ಮತ್ತು ಸೈನಿಕ ಟಾಕಳಿ ಗ್ರಾಮಗಳೊಂದಿಗೆ, ಕರ್ನಾಟಕದ ಕಾಗವಾಡ, ರಾಯಬಾಗ, ಚಿಕ್ಕೋಡಿ, ಅಥಣಿ, ರಬಕವಿ-ಬನಹಟ್ಟಿ ಮತ್ತು ಜಮಖಂಡಿ ತಾಲ್ಲೂಕಿನ ಕೃಷ್ಣಾ ನದಿ ತೀರದ ಗ್ರಾಮಗಳು ಕೂಡ ನೀರಿನ ಕೊರತೆ ಅನುಭವಿಸಲಿವೆ.
ಇಲ್ಲಿಯವರೆಗೆ ನೆರೆಯ ಮಹಾರಾಷ್ಟ್ರದ ರೈತರು ಹಿಪ್ಪರಗಿ ಆನೆಕಟ್ಟೆಯ ಹಿನ್ನೀರನ್ನು ಮೇಲಿನ ಗ್ರಾಮದವರು ಉಪಯೋಗಿಸಿಕೊಂಡಿರುವುದು ಸಾಬೀತಾಗಿದೆ. ಈಗ ಮಹಾರಾಷ್ಟ್ರದ ಗಡಿ ಗ್ರಾಮಗಳ ರೈತರು ಸಹ ಕೃಷ್ಣಾ ನದಿಗೆ 2 ಟಿಎಂಸಿ ನೀರು ಬಿಡುವಂತೆ ಒತ್ತಾಯಿಸುತ್ತಿದ್ದಾರೆ. ಆದ್ದರಿಂದ ಗಡಿ ಭಾಗದ ಎರಡೂ ರಾಜ್ಯಗಳ ರೈತರ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಮಹಾರಾಷ್ಟ್ರ ಸರಕಾರ ಕೃಷ್ಣಾ ನದಿಗೆ ನೀರು ಬಿಡುವಂತೆ ಮನವಿ ಮಾಡಿದರು.
ಈ ಕುರಿತಂತೆ ಮಾಜಿ ಉಪಮುಖ್ಯಮಂತ್ರಿ, ಅಥಣಿ ಶಾಸಕ ಲಕ್ಷ್ಮಣ ಸವದಿ ಕೂಡ ಘಟಪ್ರಭಾ ಹಾಗೂ ಮಹಾರಾಷ್ಟ್ರದಿಂದ ಕೃಷ್ಣಗೆ ನೀರು ಬಿಡಿಸುವ ಕುರಿತಂತೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಖಂಡಿತವಾಗಿಯೂ ನೀರುಬಿಡಿಸುವ ಬಗ್ಗೆ ಭರವಸೆ ನೀಡಿದ್ದಾರೆ ಎಂದರು.
ಆಕಸ್ಮಿಕವಾಗಿ ಹಿಪ್ಪರಗಿ ಬ್ಯಾರೇಜ್‌ನ 22ನೇ ಗೇಟ್ ಕಟ್ ಆದ ಪರಿಣಾಮ, ಈ ಭಾಗದ ಕೃಷ್ಣಾ ನದಿಯ ನೀರಿನ ಮಟ್ಟ ಸುಮಾರು 7-8 ಅಡಿಗಳಷ್ಟಿದ್ದು ಇದರಿಂದ ನದಿ ಪಾತ್ರದ ರೈತರು ಆತಂಕಗೊಂಡಿದ್ದು, ಈಗಲೇ ಈ ಸ್ಥಿತಿಯಾದರೆ ಬೇಸಿಗೆಯಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿ, ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.
ಈಗಲೇ ಕೃಷ್ಣಾ ನದಿಯಲ್ಲಿ ಸುಮಾರು 8 ಅಡಿಗಳಷ್ಟು ನೀರು ಕಡಿಮೆಯಾಗಿದ್ದು, ಬೇಸಿಗೆ ಪ್ರಾರಂಭಕ್ಕಿಂತ ಮುಂಚೆ ಹೀಗಾದರೆ ಮಾರ್ಚ ತಿಂಗಳಲ್ಲಿ ಕೃಷ್ಣ ಬರಿದಾಗುವ ಸಾಧ್ಯತೆ ಇದೆ ಎಂದರು. ಈ ಹಿನ್ನೆಲೆಯಲ್ಲಿ, ಮಹಾರಾಷ್ಟ್ರ ಸರ್ಕಾರವು ತನ್ನ ರೈತರ ಹಿತ ಕಾಪಾಡುವ ಜೊತೆಗೆ ಗಡಿ ಭಾಗದ ಕರ್ನಾಟಕದ ಗ್ರಾಮಗಳಿಗೆ ಕುಡಿಯುವ ನೀರಿನ ಕೊರತೆ ಉಂಟಾಗದಂತೆ, ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸಬೇಕು ಎಂದು ಸುರೇಶ್ ಪಾಟೀಲ್ ಮನವಿ ಮಾಡಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 