ಶಾಸಕ ರಾಜು ಕಾಗೆ, ಲಕ್ಷ್ಮಣ ಸವದಿ ಪ್ರಯತ್ನದಿಂದ ಗಡಿ ಗ್ರಾಮಗಳಲ್ಲಿ ನೀರು
Water in border villages with the efforts of MLA Raju Kage, Lakshman Savadi
ವರದಿ: ಸುಭಾಷ ಕಾಂಬಳೆ
ಸಂಬರಗಿ 07: ಗಡಿ ಪ್ರದೇಶದಲ್ಲಿ ರೈತರು ಬರಗಾಲದ ನೆರಳಿನಲ್ಲಿದ್ದು, ಅಂದಿನ ಎಸ್.ಎಂ. ಕೃಷ್ಣ ಸರ್ಕಾರದ ಅವಧಿಯಲ್ಲಿ ಸಂಕಷ್ಟದಲ್ಲಿ ಸಿಲುಕಿ ಹಲವು ವರ್ಷಗಳೇ ಕಳೆದಿವೆ. ಅಂದಿನ ಶಾಸಕ ಶಹಜನ್ ಡೊಂಗರಗಾಂವ್ ಬಸವೇಶ್ವರ ಏತ ನೀರಾವರಿ ಯೋಜನೆ ಸೂಚಿಸಿದರು. ಅಂತಿಮವಾಗಿ, ಶಾಸಕ ರಾಜು ಕಾಗೆ, ಶಾಸಕ-ಲಕ್ಷ್ಮಣ್ ಸವದಿ ಜೋಡಿ, ಯೋಜನೆಯನ್ನು ಪೂರ್ಣಗೊಳಿಸಿ ರೈತರ ಜಮೀನಿಗೆ ನೀರು ಹರಿಯುವಂತೆ ಮಾಡಿದರು.
ಗಡಿ ಭಾಗದ 22 ಗ್ರಾಮಗಳು ನಿರಂತರವಾಗಿ ಬರಗಾಲದ ನೆರಳಿನಲ್ಲಿತ್ತು ಮತ್ತು ಪ್ರತಿ ವರ್ಷವೂ ಕಷ್ಟಪಡುತ್ತಿತ್ತು. ಪ್ರತಿ ವರ್ಷ, ನೀರಿಗಾಗಿ ಹೋರಾಟ್ ಮಾಡಬೇಕಾಗಿತ್ತು. ಮಳೆ ಬರದಿದ್ದರೆ, ವರ್ಷಕ್ಕೆ ಎಂಟು ತಿಂಗಳು ಮಹಾರಾಷ್ಟ್ರಕ್ಕೆ ಹೋಗಿ ಹೊಟ್ಟೆತುಂಬಿಸಿಕೊಳ್ಳಬೇಕಾಗಿತ್ತು. 2001 ರಲ್ಲಿ ಗಡಿ ಭಾಗದ ಹೋರಾಟಗಾರ ದೋಂಡಿರಾಮ ಸುತಾರ್ ಇವರ ನೇತೃತ್ವದಲ್ಲಿ , ಅಭಿವೃದ್ಧಿಪಡಿಸಿರಿ ಇಲ್ಲವಾದರೆ ಮಹಾರಾಷ್ಟ್ರಕ್ಕೆ ಸೇರಿಸಿ ಎಂದು ಹೋರಾಟ ಮಾಡಿದ ನಂತರ ಅಂದಿನ ಶಾಸಕ ಶಹಜನ್ ಡೊಂಗರಗಾಂವ್ ಅವರ ನಿರಂತರ ಪ್ರಯತ್ನದಿಂದಾಗಿ, ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ಮನವಿ ಸಲ್ಲಿಸಿದ ನಂತರ, ಅಂದಿನ ದಿವಂಗತ ಗ್ರಾಮೀಣಾಭಿವೃದ್ಧಿ ಪಂಚಾಯತ್ ಸಚಿವ ಎಂ ವಾಯ ಘೋರೆ್ಡ ಇವರನ್ನು ಪರೀಶೀಲನೆ ಮಾಡಲು ತಂಡ ನೇಮಿಸಿದರು. ಆನಂತರ ಸರಕಾರ ವಿಶೇಷ ಅನುದಾನ ಬಿಡುಗಡೆ ಮಾಡಿ ಗಡಿ ಭಾಗ ಅಭಿವೃದ್ಧಿ ಮಾಡಿದರು.
ಆ ಸಮಯದಲ್ಲಿ, ಆಗಿನ ನೀರಾವರಿ ಸಚಿವ ಎಚ್ ಕೆ ಪಾಟೀಲ್ ಅವರ ಸಮ್ಮುಖದಲ್ಲಿ, ಬರ ಪ್ರದೇಶಕ್ಕೆ ನೀರಿನ ಯೋಜನೆಯನ್ನು ಖೀಳೀಗಾಂವ್ ಬಸವೇಶ್ವರ ಏತ ನೀರಾವರಿ ಯೋಜನೆ ನಾಮಕರಣ ಮಾಡಿದ ನಂತರ ಸರ್ವೆ ಕಾರ್ಯ ಪ್ರಾರಂಭ ಮಾಡಿ ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ನೀಡಲಾಯಿತು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮದುಭಾವಿ ಗ್ರಾಮದಲ್ಲಿ 2017 ರಲ್ಲಿ ಈ ಯೋಜನೆಗೆ ಚಾಲನೆ ನೀಡಿದರು. ಅದರ ನಂತರ, ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದು ಕೆಲಸವು ವಿಳಂಬವಾಯಿತು. ಮರಳಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಶಾಸಕ ರಾಜು ಕಾಗೆ ಮತ್ತು ಶಾಸಕ ಲಕ್ಷ್ಮಣ ಸವದಿ ಅವರ ಪ್ರಯತ್ನದಿಂದ ಅಂತಿಮವಾಗಿ ಈ ಯೋಜನೆ ಪೂರ್ಣಗೊಂಡಿತು. ಚುನಾವಣೆಯಲ್ಲಿ ಭರವಸೆ ನೀಡಿದಂತೆ, ಅವರು ಕೆಲಸವನ್ನು ಪೂರ್ಣಗೊಳಿಸಿದರು. ಅದೇ ಸಮಯದಲ್ಲಿ, ಈ ಯೋಜನೆಯಿಂದ ವಂಚಿತರಾದ ಏಳು ಹಳ್ಳಿಗಳಿಗೆ ಕೃಷ್ಣಾ ನದಿಯಿಂದ ನೀರು ತರುವ ಮೂಲಕ ಕೆರೆಗಳನ್ನು ತುಂಬಿಸುವ ಕಾರ್ಯವನ್ನು ಅವರು ಕೈಗೆತ್ತಿಕೊಂಡರು. ಈ ಪ್ರದೇಶದಿಂದ ಬರಗಾಲದ ಹೆಸರನ್ನು ಶಾಶ್ವತವಾಗಿ ಅಳಿಸಿಹಾಕಲಾಯಿತು ಮತ್ತು ಸಮೃದ್ಧಿಯನ್ನು ತಂದಿತು. ಅವರ ಕೆಲಸವನ್ನು ನೋಡಿ, ರೈತರು ಅವರ ಬೆನ್ನಿಗೆ ದೃಢವಾಗಿ ನಿಲ್ಲಲು ನಿರ್ಧರಿಸಿದ್ದಾರೆ. ಎಷ್ಟೇ ಜನರು ಬಂದರೂ, ಯಾರ ಮಾತನ್ನೂ ಕೇಳದೆ ಕೆಲಸ ನಡೆಯುತ್ತದೆ ಎಂಬುದು ಸ್ಪಷ್ಟವಾಗಿದೆ.
ಮಹಾರಾಷ್ಟ್ರದಿಂದ ಮೈಶಾಳ ಕಾಲಿವೇ ಮುಖಾಂತರ ಅಗ್ರಾಣಿ ನದಿಗೆ ನೀರ್ ಹರಿಸಿದ್ರು ಆ ಕಾರಣ ಯೋಜನೆ ನೀರಿನಿಂದ ರೈತರಿಗೆ ಭಾರಿ ಅನುಕೂಲವಾಗಿದೆ. ಅಗ್ರಾಣಿ ನದಿ ತೀರದಲ್ಲಿ ಇರುವ ಕೊಳವೆಭಾವಿ ಹಾಗೂ ತೆರದಭಾವಿ ನೀರಿನ ಮಟ್ಟ ಹೆಚ್ಚಾಗಿ ರೈತರಿಗೆ ಮುಂಗಾರು ಹಾಗೂ ಹೆಂಗಾರಿ ಬೆಳೆ ಅನುಕೂಲವಾಗುತ್ತದೆ ದಡದಲ್ಲಿರುವ ಬಾವಿಗಳ ನೀರಿನ ಮಟ್ಟ ಹೆಚ್ಚಾಗಿದೆ. ಬರಗಾಲದಲ್ಲಿ ಸಿಲುಕಿದ್ದ ರೈತರು ಹಸಿರು ಕ್ರಾಂತಿ ಆಗಲು ಸಾಧ್ಯವಿದೆ.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 