ಕಾಲುವೆ ಒಡೆದು ರೈತರ ಹೊಲಗಳಿಗೆ ನುಗ್ಗಿದ ನೀರು ಅಪಾರ ಬೆಳೆ ಹಾನಿ
Water from a canal burst and entered farmers' fields, causing extensive crop damage
ಕಾಲುವೆ ಒಡೆದು ರೈತರ ಹೊಲಗಳಿಗೆ ನುಗ್ಗಿದ ನೀರು ಅಪಾರ ಬೆಳೆ ಹಾನಿ
ಇಂಡಿ 06 : ತಾಲ್ಲೂಕಿನ ತಡವಲಗಾ ಗ್ರಾಮದ ಕಲಬುರ್ಗಿ ವಸತಿ ಬಳಿ ಗುತ್ತಿ ಬಸವಣ್ಣ ಏತ ನೀರಾವರಿಯ ಕಾಲುವೆ ಒಡೆದು ರೈತರ ಹೊಲಗಳಿಗೆ ನೀರು ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿಯಾದ ಘಟನೆ ರವಿವಾರ ರಾತ್ರಿ ವೇಳೆ ನಡೆದಿದೆ.ರವಿವಾರ ರಾತ್ರಿ ಸುರಿದ ಭಾರಿ ಮಳೆಯಿಂದ ನೀರು ಕಾಲುವೆ ಮೂಲಕ ಹರಿದು ಕಾಲುವೆ ಒಡೆದ ರೈತರ ಹೊಲಗಳಿಗೆ ನೀರು ನುಗ್ಗಿದ್ದು ರೈತರು ಕಂಗಾಲಾಗಿದ್ದಾರೆ.ಈ ಹಿಂದೆ ಅಂದರೆ ಒಂದು ತಿಂಗಳ ಹಿಂದೆ ಕಾಲುವೆ ನೀರು ಬಿಟ್ಟಾಗ ನೀರು ಕಾಲುವೆ ಮೇಲೆ ಹಾಯಿದ್ದು ಇದೆ ರೈತರ ಹೊಲಗಳಿಗೆ ನೀರು ನುಗ್ಗಿತ್ತು.ಈ ಸಂದರ್ಭದಲ್ಲಿ ಇಂಡಿ ಉಪವಿಭಾಗಾಧಿಕಾರಿ ಅನುರಾಧ ವಸ್ತ್ರದ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನಾಧಿಕಾರಿಗಳು ಸ್ಥಳಕ್ಕಾಗಮಿಸಿ ಶೀಘ್ರದಲ್ಲೇ ಕಾಲುವೆ ರೀಪೆರಿ ಮಾಡಿಕೊಡುತ್ತೆವೆ ಎಂದು ಹೇಳಿದರು.ಆದರೆ ಕೆಲಸ ಮಾತ್ರ ಶೂನ್ಯ ಆದರೆ ನಿನ್ನೆ ಸುರಿದ ಭಾರಿ ಮಳೆಯಿಂದ ನೀರು ಕಾಲುವೆ ಮೂಲಕ ವೇಗವಾಗಿ ಬಂದು ಕಾಲುವೆ ಒಡೆದು ರೈತರ ಹೊಲಗಳಿಗೆ ನೀರು ನುಗ್ಗಿ ರೈತರ ಬದುಕು ಮೂರಾಬಟ್ಟೆ ಮಾಡಿದೆ.ಕಾಲುವೆ ನೀರು ನುಗ್ಗಿ ರೈತರ ಬೆಳೆಗಳಾದ ನಿಂಬೆ ದಾಳಿಂಬೆ ಕಬ್ಬು ಮೆಕ್ಕಿಜೋಳ ತೋಗರಿ ಹತ್ತಿ ಬೆಳೆಗಳು ನೀರಿನಲ್ಲಿ ನಿಂತಿವೆ.ರೈತರಾದ ಇಸ್ಮಾಯಿಲ್ ಕಲಬುರ್ಗಿ ಸೈಫನ್ ಕಲಬುರ್ಗಿ ಮೈಬೂಬ ಕಲಬುರ್ಗಿ ರುಕ್ಮುದಿನ್ ಕಲಬುರ್ಗಿ ಬಂದಗೀಸಾಬ ಕಲಬುರ್ಗಿ ಸೈಫನಸಾಬ್ ಮಣ್ಣೂರ ಅಲ್ಲಿಸಾಬ್ ಮಣ್ಣೂರ ಹಾಗೂ ಶಾಂತಪ್ಪ ಖಸ್ಕಿ ಹಣಮಂತರಾಯ ಮಿರ್ಜಿ ಪಂಚನಗೌಡ ಪಾಟೀಲ ದಾನಪ್ಪ ಮದರಿ ಮಳಸಿದ್ದಪ್ಪ ರಾಂಪೂರ ಸೇರಿದಂತೆ ಅನೇಕ ರೈತರ ಹೊಲಗಳಿಗೆ ನೀರು ನಿಂತಿದ್ದು ಬೆಳೆ ಹಾನಿಗೊಳಗಾಗಿವೆ ನಮಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ತಪಿಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. 1) ಒಂದು ತಿಂಗಳ ಹಿಂದೆ ಕಾಲುವೆ ಮೇಲೆ ನೀರು ಹಾಯಿದಾಗ ನಾವು ಇಂಡಿ ಉಪವಿಭಾಗಾಧಿಕಾರಿಗಳಿಗು ಹಾಗೂ ಕೆಬಿಜೆಎನ್‌ಎಲ್ ಅಧಿಕಾರಿಗಳ ಗಮನಕ್ಕೆ ತಂದಿದ್ದೆವು ಉಪವಿಭಾಗಾಧಿಕಾರಿಗಳು ಹಾಗೂ ಕೆಬಿಜೆಎನ್‌ಎಲ್ ಅಧಿಕಾರಿಗಳ ಬಂದು ಕಾಲು ರೀಪೆರೀ ಮಾಡುವುದಾಗಿ ಭರವಸೆ ನೀಡಿದರು ಹೊರತು ಕಾಲುವೆ ರೀಪೇರಿ ಮಾಡಲ್ಲಿಲ್ಲ ಅವರು ಸಕಾಲದಲ್ಲಿ ಕಾಲುವೆ ರೀಪೇರಿ ಮಾಡಿದರೆ ಕಾಲುವೆ ಒಡಿಯುತ್ತಿರಲಿಲ್ಲ ನಮಗೆ ಈ ಗತಿ ಬರುತ್ತಿರಲಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು .ನೊಂದ ರೈತ ಸೈಫನಸಾಬ ಹುಸೇನಸಾಬ ಮಣ್ಣೂರ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 