ಕಾಲುವೆ ಒಡೆದು ರೈತರ ಹೊಲಗಳಿಗೆ ನುಗ್ಗಿದ ನೀರು: ಅಪಾರ ಬೆಳೆ ಹಾನಿ

ಕಾಲುವೆ ಒಡೆದು ರೈತರ ಹೊಲಗಳಿಗೆ ನುಗ್ಗಿದ ನೀರು: ಅಪಾರ ಬೆಳೆ ಹಾನಿ  Water from a canal burst and entered farmers' fields: Massive crop damage

ಕಾಲುವೆ ಒಡೆದು ರೈತರ ಹೊಲಗಳಿಗೆ ನುಗ್ಗಿದ ನೀರು: ಅಪಾರ ಬೆಳೆ ಹಾನಿ  

ಲೋಕದರ್ಶನ ವರದಿ   

ಇಂಡಿ 06: ತಾಲೂಕಿನ ತಡವಲಗಾ ಗ್ರಾಮದ ಕಲಬುರ್ಗಿ ವಸತಿ ಬಳಿ ಗುತ್ತಿ ಬಸವಣ್ಣ ಏತ ನೀರಾವರಿಯ ಕಾಲುವೆ ಒಡೆದು ರೈತರ ಹೊಲಗಳಿಗೆ ನೀರು ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿಯಾದ ಘಟನೆ ರವಿವಾರ ರಾತ್ರಿ ವೇಳೆ ನಡೆದಿದೆ.ರವಿವಾರ ರಾತ್ರಿ ಸುರಿದ ಭಾರಿ ಮಳೆಯಿಂದ ನೀರು ಕಾಲುವೆ ಮೂಲಕ ಹರಿದು ಕಾಲುವೆ ಒಡೆದ ರೈತರ ಹೊಲಗಳಿಗೆ ನೀರು ನುಗ್ಗಿದ್ದು ರೈತರು ಕಂಗಾಲಾಗಿದ್ದಾರೆ. 

ಈ ಹಿಂದೆ ಅಂದರೆ ಒಂದು ತಿಂಗಳ ಹಿಂದೆ ಕಾಲುವೆ ನೀರು ಬಿಟ್ಟಾಗ ನೀರು ಕಾಲುವೆ ಮೇಲೆ ಹಾಯಿದ್ದು ಇದೆ ರೈತರ ಹೊಲಗಳಿಗೆ ನೀರು ನುಗ್ಗಿತ್ತು.ಈ ಸಂದರ್ಭದಲ್ಲಿ ಇಂಡಿ ಉಪವಿಭಾಗಾಧಿಕಾರಿ ಅನುರಾಧ ವಸ್ತ್ರದ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನಾಧಿಕಾರಿಗಳು ಸ್ಥಳಕ್ಕಾಗಮಿಸಿ ಶೀಘ್ರದಲ್ಲೇ ಕಾಲುವೆ ರೀಪೆರಿ ಮಾಡಿಕೊಡುತ್ತೇವೆ ಎಂದು ಹೇಳಿದರು. ಆದರೆ ಕೆಲಸ ಮಾತ್ರ ಶೂನ್ಯ. ಆದರೆ ನಿನ್ನೆ ಸುರಿದ ಭಾರಿ ಮಳೆಯಿಂದ ನೀರು ಕಾಲುವೆ ಮೂಲಕ ವೇಗವಾಗಿ ಬಂದು ಕಾಲುವೆ ಒಡೆದು ರೈತರ ಹೊಲಗಳಿಗೆ ನೀರು ನುಗ್ಗಿ ರೈತರ ಬದುಕು ಮೂರಾಬಟ್ಟೆ ಮಾಡಿದೆ. ಕಾಲುವೆ ನೀರು ನುಗ್ಗಿ ರೈತರ ಬೆಳೆಗಳಾದ ನಿಂಬೆ ದಾಳಿಂಬೆ ಕಬ್ಬು ಮೆಕ್ಕೆಜೋಳ ತೊಗರಿ ಹತ್ತಿ ಬೆಳೆಗಳು ನೀರಿನಲ್ಲಿ ನಿಂತಿವೆ.ರೈತರಾದ ಇಸ್ಮಾಯಿಲ್ ಕಲಬುರ್ಗಿ,  ಸೈಫನ್ ಕಲಬುರ್ಗಿ, ಮೈಬೂಬ ಕಲಬುರ್ಗಿ, ರುಕ್ಮುದಿನ್ ಕಲಬುರ್ಗಿ, ಬಂದಗೀಸಾಬ ಕಲಬುರ್ಗಿ, ಸೈಫನಸಾಬ್ ಮಣ್ಣೂರ, ಅಲ್ಲಿಸಾಬ್ ಮಣ್ಣೂರ ಹಾಗೂ ಶಾಂತಪ್ಪ ಖಸ್ಕಿ, ಹಣಮಂತರಾಯ ಮಿರ್ಜಿ, ಪಂಚನಗೌಡ ಪಾಟೀಲ, ದಾನಪ್ಪ ಮದರಿ, ಮಳಸಿದ್ದಪ್ಪ ರಾಂಪೂರ ಸೇರಿದಂತೆ ಅನೇಕ ರೈತರ ಹೊಲಗಳಿಗೆ ನೀರು ನಿಂತಿದ್ದು ಬೆಳೆ ಹಾನಿಗೊಳಗಾಗಿವೆ. ನಮಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ತಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.   

ಒಂದು ತಿಂಗಳ ಹಿಂದೆ ಕಾಲುವೆ ಮೇಲೆ ನೀರು ಹಾಯಿಸಿದಾಗ ನಾವು ಇಂಡಿ ಉಪವಿಭಾಗಾಧಿಕಾರಿಗಳಿಗೆ ಹಾಗೂ ಕೆಬಿಜೆಎನ್‌ಎಲ್ ಅಧಿಕಾರಿಗಳ ಗಮನಕ್ಕೆ ತಂದಿದ್ದೆವು. ಉಪವಿಭಾಗಾಧಿಕಾರಿಗಳು ಹಾಗೂ ಕೆಬಿಜೆಎನ್‌ಎಲ್ ಅಧಿಕಾರಿಗಳ ಬಂದು ಕಾಲುವೆ ರೀಪೆರಿ ಮಾಡುವುದಾಗಿ ಭರವಸೆ ನೀಡಿದರು ಹೊರತು ಕಾಲುವೆ ರೀಪೇರಿ ಮಾಡಲಿಲ್ಲ. ಅವರು ಸಕಾಲದಲ್ಲಿ ಕಾಲುವೆ ರೀಪೇರಿ ಮಾಡಿದ್ದರೆ ಕಾಲುವೆ ಒಡೆಯುತ್ತಿರಲಿಲ್ಲ, ನಮಗೆ ಈ ಗತಿ ಬರುತ್ತಿರಲಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು.  

ಸೈಫನಸಾಬ ಹುಸೇನಸಾಬ ಮಣ್ಣೂರನೊಂದ ರೈತ