ಪ್ರಾಣಿಗಳ ದಾಹ ನೀಗಿಸಲು ಕೃತಕ ನೀರಿನ ತೊಟ್ಟಿಗಳಿಗೆ ನೀರು
Water for artificial water tanks to quench the thirst of animals
ಲೋಕದರ್ಶನ
ಹೂವಿನಹಡಗಲಿ 29: ಬಿಸಿಲಿನ ಕಾವು ದಿನೇ ದಿನೇ ಏರುತ್ತಿದ್ದು, ಅರಣ್ಯದಲ್ಲಿರುವ ಹಳ್ಳ ಕೊಳ್ಳಗಳಲ್ಲಿ ನೀರು ಬತ್ತಿರುವ ಪರಿಣಾಮ ತಾಲ್ಲೂಕಿನ ತುಂಬಿನಕೇರೆ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಪಕ್ಷಿಗಳು, ಕಾಡು ಪ್ರಾಣಿಗಳಿಗೆ ಕುಡಿವ ನೀರಿನ ಕೊರತೆ ಉಂಟಾಗಿದೆ. ಪ್ರಾಣಿಗಳ ದಾಹ ನೀಗಿಸಲು ಅರಣ್ಯ ಇಲಾಖೆ ಕೃತಕ ನೀರಿನ ಸೀಮೆಂಟ ತೊಟ್ಟಿಗಳಿಗೆ ನೀರು ಹರಿಸುತ್ತಿದೆ.ತಾಲ್ಲೂಕಿನ ತುಂಬಿನಕೇರೆ, ಸೋಗಿ ಬೆಟ್ಟದ ಮಲ್ಲಣ್ಣ, ಹ್ಯಾರಡ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿರುವ ನರಿ,ತೋಳ, ಮುಳ್ಳು ಹಂದಿ, ಚಿರತೆ ಮತ್ತ ನವಿಲು ,ಪಕ್ಷಿಗಳ ದಾಹ ನೀಗಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಕೃತಕ ನೀರಿನ ತೊಟ್ಟಿಗಳನ್ನಿಟ್ಟು, ಬೈಕ್ ಮೂಲಕ ನೀರು ತುಂಬಿಸಿ ವನ್ಯ ಜೀವಿಗಳಿಗೆ ನೆರವಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಕಳೆದ ವರ್ಷ ಬಿದ್ದ ಮಳೆಗೆ ಕೆರೆ, ಕುಂಟೆಗಳು ನೀರಿಲ್ಲದೆ ಬರಡಾಗಿವೆ. ಇದರಿಂದಾಗಿ ಕಾಡು ಪ್ರಾಣಿಗಳು ನೀರಿಗಾಗಿ ಅಲೆದಾಡುವ ಸ್ಥಿತಿ ತಲೆದೋರಿದ್ದು, ನೀರಿನ ದಾಹ ನೀಗಿಸಲು ಸಿಮೆಂಟ್ ತೊಟ್ಟಿಗಳಿಗೆ ಬೈಕ್ ಮೂಲಕ ನೀರು ಸಂಗ್ರಹಿಸುತ್ತೇವೆ ಎಂದು ಪ್ರಾದೇಶಿಕ ವಲಯ ಅರಣ್ಯ ಇಲಾಖೆ ಅಧಿಕಾರಿ ಉಮೇಶ್ ನಾಯಕ ಪತ್ರಿಕೆಗೆ ತಿಳಿಸಿದ್ದಾರೆ
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್ 