ಕೆನಾಲ ಕಾಲುವೆ ಒಡೆದು ಜಮೀನುಗಳಿಗೆ ಹರಿದ ನೀರು: ಅಪಾರ ಹಾನಿ
Water flows into the fields after a canal bursts: Extensive damage
ಕೊಲ್ಹಾರ 10: ಕೃಷ್ಣಾ ಮೇಲ್ದಂಡೆ ಯೋಜನೆ ಮುಳುವಾಡ ಏತ ನೀರಾವರಿ ಮೊದಲ ಹಂತದ ಮೆನ್ ಕೆನಾಲ ಕಾಲುವೆ ಒಡೆದು ರೈತರ ಜಮೀನುಗಳಿಗೆ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿ ರೈತರ ಬೆಳೆಗಳು ನೆಲ ಕಚ್ಚಿ ಸಂಪೂರ್ಣ ಹಾನಿಯಾಗಿರುವ ಘಟನೆ ತಾಲೂಕಿನ ಹಳ್ಳದ ಗೆಣ್ಣೂರು ಗ್ರಾಮದ ಸಮೀಪದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ಈ ಭಾಗದ ರೈತರು ಹಳ್ಳದ ಗೆಣ್ಣೂರು ಗ್ರಾಮದ ಸಮೀಪದಲ್ಲಿರುವ ಮುಳವಾಡ ಮೊದಲ ಹಂತದ ಮೆನ್ ಕೆನಾಲ್ ದೊಡ್ಡ ಕಾಲುವೆ ಒಡೆಯುವ ಸ್ಥಿತಿಯಲ್ಲಿದೆ ಎಂದು ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಗಮನಕ್ಕೆ ತಂದರು ನಿರ್ಲಕ್ಷ್ಯ ಮಾಡಿದ್ದಾರೆಂದು ಸ್ಥಳಿಯ ರೈತರು ಆರೋಪಿಸಿದ್ದಾರೆ. ದೊಡ್ಡ ಕಾಲುವೆ ಒಡೆದು ಏಕಾಏಕಿ ರೈತರ ಜಮೀನುಗಳಿಗೆ ನೀರು ನುಗ್ಗಿರುವುದರಿಂದ 60 ಎಕರೆ ಗೂ ಅಧಿಕ ರೈತರ ಜಮೀನಿನಲ್ಲಿದ್ದ ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ಜಮೀನಿನಲ್ಲಿದ್ದ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿದೆ. ರೈತರ ದನಕರುಗಳು ನೀರಿನಲ್ಲಿ ನಿಂತು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ಬೆಳೆಗಳು ಕೈಗೆ ಬಾರದಂತಾಗಿ ರೈತರು ಸಂಕಷ್ಟ ಎದುರಿಸುವಂತಾಗಿದೆ. ಮಂಜುನಾಥಗೌಡ ಪಾಟೀಲ, ನಿಂಗನಗೌಡ ಬಗಲಿ, ಸಂಗನಗೌಡ ಪಾಟೀಲ, ಸಿದ್ದನಗೌಡ ಪಾಟೀಲ ಹಾನಿಗಿಡಾದ ರೈತ ಕುಟುಂಬಗಳು ಕಣ್ಣಿರುಡುವಂತಾಗಿದೆ ಎಂದು ರೈತರು ಸರ್ಕಾರ ಹಾಗೂ ಕೆಬಿಜೆಎನ್‌ಎಲ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮುಳವಾಡ ಏತ ನೀರಾವರಿ ಮೊದಲ ಹಂತದ ಮೆನ್ ಕೆನಾಲ್ ಕಾಲುವೆ ಬಗ್ಗೆ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ತೋರಿದ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಎಇಇ) ಅಧಿಕಾರಿಯನ್ನು ಕೂಡಲೇ ಅಮಾನತು ಮಾಡಬೇಕು ಹಾಗೂ ಬೆಳೆ ಹಾನಿಯಾದ ರೈತರ ಕುಟುಂಬಗಳಿಗೆ 10 ಲಕ್ಷ ಪರಿಹಾರ ಕಲ್ಪಿಸಬೇಕು ತುರ್ತಾಗಿ ಒಡೆದು ಹೋಗಿರುವ ಕೆನಾಲ್ ಕಾಲುವೆ ಕಾಮಗಾರಿಯ ದುರಸ್ಥಿಗೆ ಕ್ರಮ ಕೈಗೊಳ್ಳಬೇಕು. ಇರದೆ ಹೋದರೆ ವಿಜಯಪುರ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ರಸ್ತೆ ತಡೆದು ರೈತರೊಂದಿಗೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಸೋಮು ಬಿರಾದಾರ ಹೇಳಿದ್ದಾರೆ. ಮಂಗಳವಾರ ಮುಳವಾಡ ಮೊದಲ ಹಂತದ ಕಾಲುವೆ ಒಡೆದ ಸ್ಥಳಕ್ಕೆ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಮೇಲ್ವಿಚಾರಣೆ ಅಧಿಕಾರಿ ಗೋವಿಂದ ರಾಠೋಡ ಮತ್ತು ಹಿರಿಯ ಅಧಿಕಾರಿಗಳು ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿ ಬೆಳೆ ಹಾನಿಗಿಡಾದ ರೈತರಿಗೆ ಪರಿಹಾರ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದ ಮುಳವಾಡ ಮೊದಲ ಹಂತದ ದೊಡ್ಡ ಕಾಲುವೆ ಒಡೆದಿದೆ ಕೂಡಲೇ ಅಧಿಕಾರಿಗಳು ತುರ್ತಾಗಿ ಕಾಲುವೆ ದುರಸ್ತಿ ಮಾಡಿ ಇರದೆ ಹೋದರೆ ಈ ಭಾಗದ ಸಾವಿರಾರು ರೈತರು ಕೋಟ್ಯಂತರ ಹಾನಿ ಅನುಭವಿಸಬೇಕಾಗುತ್ತದೆ
- ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ
ರಾತ್ರಿ ಸಂದರ್ಭದಲ್ಲಿ ಏಕಾಏಕಿ ದೊಡ್ಡ ಕೆನಾಲ್ ಕಾಲುವೆ ಒಡೆದು ನೀರಿನ ರಭಸ ಹೆಚ್ಚಾಗಿ ಜೀವ ಭಯದಲ್ಲಿ ಇದ್ದಾಗ ನಮ್ಮ ಕುಟುಂಬವನ್ನು ಕೊಲ್ಹಾರ ಪೋಲಿಸ ಠಾಣೆಯ ಪಿಎಸ್‌ಐ ಅಶೋಕ ನಾಯಕ, ಅವರ ಸಿಬ್ಬಂದಿಗಳು ಊರಿನ ಹಿರಿಯರು ರಾತ್ರಿ ಇಡಿ ಇಲ್ಲಿಯೇ ಇದ್ದು ನಮ್ಮನ್ನು ರಕ್ಷಣೆ ಮಾಡಿದ್ದಾರೆ
-ಮಹೇಶಗೌಡ ಪಾಟೀಲ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 