ನೀರಿನ ಸಂರಕ್ಷಣೆ ಮತ್ತು ಸದ್ಬಳಕೆ ಪ್ರತಿಯೊಬ್ಬರ ಕರ್ತವ್ಯ
Water conservation and proper use is everyone's duty.
ಗದಗ 31: ಭೂ"ುಯ ಮೇಲಿನ ಸಕಲ ಜೀ"ಗಳಿಗೂ ನೀರು ಅತ್ಯಂತ ಅಗತ್ಯವಾಗಿದ್ದು, ನಮ್ಮ ಪ್ರತಿಯೊಂದು ಧಾ"ುರ್ಕ ಮತ್ತು ಲೌಕಿಕ ಕಾರ್ಯಕ್ಕೆ ನೀರು ಮೂಲಾಧಾರವಾಗಿದೆ. ಎಂತಲೇ ನಮ್ಮ ಪೂರ್ವಜರು ನೀರಿನ ಮೂಲಗಳನ್ನು ಅತ್ಯಂತ ಗೌರವದಿಂದ ಸಂರಕ್ಷಿಸಿ ಸದ್ಬಳಕೆ ಮಾಡಿಕೊಂಡು ಮುಂದಿನ ಪೀಳಿಗೆಗೆ ಯಥಾಸ್ಥಿತಿಯಲ್ಲಿ ಉಳಿಸಿಟ್ಟು ಗೌರವಕ್ಕೆ ಪಾತ್ರರಾಗಿದ್ದಾರೆಂದು ಕನ್ನಡ ಪ್ರಾಧ್ಯಾಪಕ ರಮೇಶ ಹುಲಕುಂದ ಹೇಳಿದರು.
ಅವರು ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಘಟಕವು ಹೊಸಹಳ್ಳಿ ಗ್ರಾಮದಲ್ಲಿ ಹ"್ಮುಕೊಂಡಿರುವ 2025-26ನೇ ಸಾಲಿನ ರ್ವಾಕ "ಶೇಷ ಶಿಬಿರದಲ್ಲಿ 'ಜಲ ಸಂರಕ್ಷಣೆಯಲ್ಲಿ ಯುವಕರ ಪಾತ್ರ' ಕುರಿತು ಉಪನ್ಯಾಸ ಮಾಡುತ್ತ, ನಮ್ಮ ಪೂರ್ವಜರು ಸರೋವರ, ನದಿ, ಹಳ್ಳ, ಕೆರೆ, ಬಾ"ಗಳನ್ನು ದೈವತ್ವ ಸ್ಥಾನದಲ್ಲಿ ಆರಾಧಿಸುತ್ತ ಇವುಗಳನ್ನು ಸಂರಕ್ಷಿಸಿಕೊಂಡು ಬಂದಿದ್ದು, ಆ ಸಾರ್ವಕಾಲಿಕ ಮೌಲ್ಯವನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡರೆ ಜಲದ ಸಂರಕ್ಷಣೆ ಮತ್ತು ಸದ್ಬಳಕೆ ಸಾಧ್ಯವಾಗುವುದೆಂದು ಹೇಳಿದರು.
ಮುಖ್ಯ ಅತಿಥಿಗಳಾದ ಮಹಾನಂದಾ "ರೇಮಠ, ಶ್ವೇತಾ ಪಾಲನಕರ, ಮಹಾದೇ" ಪಾಟೀಲ, ಡಾ. ರಜಿಯಾಬೇಗಂ ನದಾಫ್, ಕಲ್ಯಾಣಿ ಕೊಚ್ಚತ್ ಅವರು ಮಳೆನೀರು ಕೊಯ್ಲು, ಅಂತರ್ಜಲ ಮರುಪೂರಣ, ಸೂಕ್ಷ್ಮ ನೀರಾವರಿ, ಬೂದು ನೀರು ಮರುಬಳಕೆ ಮುಂತಾದ ಜಲ ಸಂರಕ್ಷಣೆಯ ಪ್ರಚಲಿತ "ಧಾನಗಳನ್ನು ತಿಳಿಸಿದರು. ಸಹಶಿಬಿರಾಧಿಕಾರಿ "ಜಯಕುಮಾರ ಅವರು ಕೆರೆ, ಬಾ", ಅರವಂಟಿಗೆ, ಕಾಲುವೆ, ಪುಷ್ಕರಣಿ ಮುಂತಾದವುಗಳ ನಿರ್ಮಾಣ ಲೋಕೋಪಕಾರದ ಪುಣ್ಯಕಾರ್ಯಗಳಾಗಿದ್ದು, ಇವುಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸಿಡುವುದೂ ಅಷ್ಟೇ ಪುಣ್ಯಕಾರ್ಯವಾಗಿದೆ. ಯುವಕರು ನೀರಿನ ಸಂರಕ್ಷಣೆ ಮತ್ತು ಸದ್ಬಳಕೆ ಕುರಿತು ಜಾಗೃತರಾಗಿ ಈ ನಿಟ್ಟಿನಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಹೇಳಿದರು.
ಅಧ್ಯಕ್ಷತೆ ವ"ಸಿದ್ದ ಶಿಬಿರಾಧಿಕಾರಿ ಪ್ರೊ. ಅಪ್ಪಣ್ಣ ಹಂಜೆ ಅವರು ಗದಗ ಜಿಲ್ಲೆಯ ಪ್ರಾಚೀನ ಕೆರೆ, ಬಾ", ಹಳ್ಳ ಮುಂತಾದ ನೀರಿನಾಸರೆಗಳ ಕುರಿತು ಮಾತನಾಡುತ್ತ, ಗದುಗಿನ ಭೀಷ್ಮ ಕೆರೆಯನ್ನು ಹೊಯ್ಸಳರ 2ನೆಯ "ರಬಲ್ಲಾಳನ ದಂಡನಾಯಕ ಅಮೃತೇಶ್ವರನು ಕ್ರಿ.ಶ. 1196ರಲ್ಲಿ ಕಟ್ಟಿಸಿದ್ದು, ಈತನು ಮೂಲತಃ ಲಕ್ಕುಂಡಿ ಗ್ರಾಮದವನಾಗಿದ್ದು, ಈತನ ಮತ್ತು ಈತನ ಪರಿವಾರದ ಧಾ"ುರ್ಕ, ಸಾಮಾಜಿಕ, ಲೋಕೋಪಯೋಗಿ ಕಾರ್ಯಗಳನ್ನು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಅಮೃತಾಪುರ ಹಾಗೂ ಧಾರವಾಡ ಜಿಲ್ಲೆಯ ಅಣ್ಣಿಗೇರಿಯ ಶಾಸನಗಳು ಸ"ಸ್ತಾರವಾಗಿ ದಾಖಲಿಸಿವೆ. ಈ ಕೆರೆಯ ಹೆಸರು ಮೂಲತಃ 'ಅಮೃತ ಕೆರೆ' ಅಥವಾ 'ಅಮೃತೇಶ್ವರ ಕೆರೆ' ಎಂದಾಗಿದ್ದು, 'ಕೃತಪುರ ಮಹಾತ್ಮ್ಯ' ಪುರಾಣದ ರಚನೆಯ ಕಾಲದಿಂದೀಚೆಗೆ ಇದು 'ಭೀಷ್ಮ ಕೆರೆ' ಎಂದು ಜನಜನಿತವಾಗಿದೆ.
ಅಮೃತೇಶ್ವರನಂತ ಮಹಾಪುರುಷರ ಆದರ್ಶಗಳನ್ನು ಯುವಕರು ಸದಾಕಾಲ ಸ್ಮರಿಸುತ್ತ ಅವರಂತೆ ತಾವೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದರೆ ಸಮಾಜದ ಗೌರವಕ್ಕೆ ಪಾತ್ರರಾಗಬಹುದೆಂದು ಹೇಳಿದರು. ಸ್ವಯಂ ಸೇವಕರು ಕಾರ್ಯಕ್ರಮ ನಡೆಸಿಕೊಟ್ಟರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 