ಹಿರೇಮಣಕಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ನೀರುಗಾಲುವೆ ಅಭಿವೃದ್ಧಿ ಕಾಮಗಾರಿ
Water canal development work in progress within Hiremanakatti Gram Panchayat limits
ಲೋಕದರ್ಶನ ವರದಿ
ಶಿಗ್ಗಾವಿ 19 ಃ- ದುಡಿಯೋಣ ಭಾ ಅಭಿಯಾನ ಕಾರ್ಯಕ್ರಮದ ಅಂಗವಾಗಿ ನರೇಗಾ ಯೋಜನೆಯಡಿ ಕೂಲಿಕಾರರಿಗೆ ನಿರಂತರ ಕೆಲಸ ನೀಡಲಾಗುತ್ತಿದೆ ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ಸಾಳೂಂಕೆ ಹೇಳಿದರು.
ತಾಲೂಕಿನ ಹಿರೇಮಣಕಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ನೀರುಗಾಲುವೆ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿ ಅವರು ಕೂಲಿಕಾರ್ಮಿಕರೊಂದಿಗೆ ಮಾತನಾಡಿ, ಕೂಲಿ ಕೆಲಸಕ್ಕೆ ಬೇಡಿಕೆಯನ್ನು ಪಡೆಯಲಾಗುತ್ತಿದೆ. ಬೇಸಿಗೆ ಅವಧಿಯ ಮೂರು ತಿಂಗಳ ನಿರಂತರ ಕೆಲಸಕ್ಕೆ ದುಡಿಯೋಣ ಬಾ ಅಭಿಯಾನ ಆರಂಭಿಸಲಾಗಿದೆ. ಎಲ್ಲಾ ಅಕುಶಲ ಕಾರ್ಮಿಕರು ಕೆಲಸಗಾರರು ಯೋಜನೆಯ ಸದೂಪಯೋಗ ಪಡೆಯಬೇಕು.
ಸಹಾಯಕ ನಿರ್ದೇಶಕ ನೃಪತಿ ಭೂಸರೆಡ್ಡಿ ಮಾತನಾಡಿ, ಕೂಲಿ ಕಾರ್ಮಿಕರಿಗೆ ನೂರು ದಿನಗಳ ಖಾತ್ರಿ ಕೆಲಸ ಮಾಡಿಕ ವಲಸೆ ತಡೆಗಟ್ಟಲು ಕ್ರಮವಹಿಸಲಾಗುತ್ತಿದೆ. ಮಹಿಳೆ ಮತ್ತು ಪುರುಷರಿಗೆ ಸಮಾನ ವೇತನ ನೀಡಲಾಗುತ್ತಿದ್ದು, ನರೇಗಾ ಕೆಲಸಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ಪುರುಷರ ಪಾಲ್ಗೊಳ್ಳಬೇಕು. ಈಗ ಎನ್.ಎಂ.ಎನ್.ಎಂ.ಎಸ್ ಹಾಜರಾತಿ ಕಡ್ಡಾಯವಾಗಿದ್ದು. ಪ್ರತಿದಿನ ಎರಡು ಹಾಜರಾತಿ ಉಪಸ್ಥಿತಿ ಇದ್ದು ಸಹಕರಿಸಬೇಕು. ಪ್ರತಿಯೊಬ್ಬ ಕೂಲಿಕಾರರು ಇ-ಕೆವಾಯ್.ಸಿ ಕಡ್ಡಾಯ ಮಾಡಿಸಿಕೊಳ್ಳಬೇಕು. ಎಂದರು.
ತಾಲುಕು ಐಇಸಿ ಸಂಯೋಜಕರಾದ ರಾಜೇಶ್ವರಿ. ಎಂಐಎಸ್.ಸಂಯೋಜಕರಾದ ಮಹಾದೇವ ಹೂಗಾರ. ತಾಂತ್ರಿಕ ಸಹಾಯಕ ಶಿವಪ್ರಸಾದ. ಗ್ರಾಮ ಅಭಿವೃದ್ಧಿ ಅಧಿಕಾರಿ ಮಂಜುಳಾ ಪಂಚಾಯತಿ ಶಿಬ್ಬಂಧಿಗಳಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 