ವಿವಿಧ ಬಡಾವಣೆಗಳಿಂದ ತ್ಯಾಜ್ಯ ನೀರು ನೇರವಾಗಿ ಕಾಳಿನದಿಗೆ: ಯುಜಿಡಿ ವ್ಯವಸ್ಥೆ ವೈಫಲ್ಯ
Wastewater from various localities flows directly into the Kali River: UGD system failure
ಲೋಕದರ್ಶನ ವರದಿ
ದಾಂಡೇಲಿ 03: ದಾಂಡೇಲಿಯಿಂದ ಹಳೆ ದಾಂಡೇಲಿಗೆ ಸಂಪರ್ಕಿಸುವ ರಸ್ತೆಯುದ್ದಕ್ಕೂ ವಿವಿಧ ಬಡಾವಣೆಗಳಿಂದ ಹರಿದು ಬರುತ್ತಿರುವ ಶೌಚಾಲಯಗಳಿಂದ ಹೊಲಸು ತ್ಯಾಜ್ಯ ನೀರು ರಸ್ತೆ ಗಟಾರು ಹಾಗೂ ಮಳೆ ನೀರಿನ ನಾಲೆಗಳ ಮೂಲಕ ನೇರವಾಗಿ ಕಾಳಿನದಿಯನ್ನು ಸೇರುತ್ತಿರುವ ದ್ರಶ್ಯಗಳು ಆತಂಕ ಹುಟ್ಟಿಸಿವೆ.
ಯುಜಿಡಿ ವ್ಯವಸ್ಥೆಯ ತಾಂತ್ರಿಕ ದೋಷವೋ, ಕಾಮಗಾರಿಯ ಗುಣಮಟ್ಟದ ಕೊರತೆಯೋ ಅಥವಾ ನಿರ್ವಹಣೆಯ ವೈಫಲ್ಯವೋ ಎಂಬ ಪ್ರಶ್ನೆ ಉದ್ಬವಿಸಿದ್ದು, ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ.
ಕೋಟ್ಯಾಂತರ ರೂಪಾಯಿ ವೆಚ್ಚದ ಕಾಮಗಾರಿಗಳ ನಡುವೆಯು ರಸ್ತೆಗಳ ಮೇಲೆ ಹೊಲಸು ನೀರು ಹರಿಯುತ್ತಿರವದು ನಗರಾಡಳಿತದ ಕಾರ್ಯ ಕ್ಷಮತೆಯನ್ನೇ ಪ್ರಶ್ನಿಸುವಂತಾಗಿದೆ.
ದುರ್ವಾಸನೆ ಅಸ್ವಚ್ಛತೆ ಸೊಳ್ಳೆಗಳ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದ್ದು, ಡೆಂಗ್ಯೂ ಮಲೇರಿಯಾ ಸೇರಿದಂತೆ ನೀರು ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಸಾಂಕ್ರಾಮಿಕ ರೋಗಗಳು ಹಬ್ಬುವ ಸಾದ್ಯತೆಯಿದೆ ಎಂದು ಸಾರ್ವಜನಿಕರು ಆತಂಕವ್ಯಕ್ತ ಪಡಿಸುತ್ತಿದ್ದಾರೆ.
ಈ ಆರೋಪ ಸತ್ಯವಾಗಿದ್ದಲ್ಲಿ ಅದು ಪರಿಸರದ ದೃಷ್ಟಿಯಿಂದ ನದಿಯ ಕೆಳ ಹರಿವಿನ ಜನರ ಆರೋಗ್ಯಕ್ಕೂ ಹಾನಿ ಉಂಟು ಮಾಡಲಿದ್ದು, ನಗರಾಡಳಿತ ಎಚ್ಚೆತ್ತುಕೊಂಡು ಕ್ರಮ ಜರುಗಿಸಬೇಕಾಗಿದೆ.
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ 