ಮಕ್ಕಳ ರಕ್ಷಣೆ ಕುರಿತು ಶಿಕ್ಷಕರಿಗೆ ಎಚ್ಚರಿಕೆ

ಮಕ್ಕಳ ರಕ್ಷಣೆ ಕುರಿತು ಶಿಕ್ಷಕರಿಗೆ ಎಚ್ಚರಿಕೆ Warning to teachers on child protection

ಲೋಕದರ್ಶನ ವರದಿ 

ಹಾವೇರಿ   13: ಬಾಲ ಕಾರ್ಮಿಕ ಪದ್ಧತಿ ದೇಶದ ಅಭಿವೃದ್ಧಿಗೆ ಕಳಂಕವಾಗಿದ್ದು, ಮಕ್ಕಳ ಭವಿಷ್ಯಕ್ಕೆ ಮಾರಕವಾಗಿದೆ ಎಂದು ಕೆ.ಪಿ.ಎಸ್‌. ಶಾಲೆಯ ನಾಮನಿರ್ದೇಶಿತ ಸದಸ್ಯ ಶ್ರೀ ಶಿದ್ಧನಗೌಡ ಕುಲಕರ್ಣಿ ಹೇಳಿದರು.  

ಹಾವೇರಿ ತಾಲೂಕಿನ ಕರ್ಜಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿಶ್ವ ಬಾಲಕಾರ್ಮಿಕರ ಪದ್ಧತಿ ವಿರೋಧಿ ದಿನದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅವರು ವಹಿಸಿ ಮಾತನಾಡಿದರು.  

ದೇವಗಿರಿ ಕ್ಲಸ್ಟರ್ನ ಶಿಕ್ಷಣಾಧಿಕಾರಿ ಶ್ರೀ ಮಾಲತೇಶ್ ದೊಡ್ಮಣಿ ಅವರು ಮಾತನಾಡಿ, ಬಾಲಕಾರ್ಮಿಕ ಪದ್ಧತಿಗೆ ಬಲಿಯಾಗುವ ಮಕ್ಕಳು ಅನೇಕ ಅಪಾಯಕಾರಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಅವರ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಹಾನಿಯಾಗುತ್ತದೆ. ಈ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.  

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಸವರಾಜ ಸಣ್ಣಂಗಿ, ಶಂಭುಲಿಂಗಪ್ಪ ಬಿದರಗಡ್ಡಿ, ಜಕಣಾಚಾರಿ ಬಡಿಗೇರ, ಸವಿತಾ ಮಂಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.  ಸ್ವಾಗತವನ್ನು ಪ್ರಾಥಮಿಕ ಶಿಕ್ಷಕಿ ಜಯಶ್ರೀ ಕೊರಗೇರ ನೆರವೇರಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ಶಿಕ್ಷಕಿ ಸರೋಜಾ ಅಂಗಡಿ ನಡೆಸಿದರು.