ಶಿಕ್ಷಕಿ ಸುವರ್ಣ ಬಿರಾದಾರ್ಗೆ ಆತ್ಮೀಯ ಬೀಳ್ಕೊಡುಗೆ
Warm farewell to teacher Suvarna Biradar
ಮುಂಡಗೋಡ 5: ತಾಲೂಕಿನ ಸನವಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 10 ವರ್ಷಗಳ ಕಾಲ ಸೇವೆ ಸಲ್ಲಿಸಿ ವರ್ಗಾವಣೆಯಾದ ಶಿಕ್ಷಕಿ ಸುವರ್ಣ ಬಿರಾದಾರ್ ಅವರಿಗೆ ಶನಿವಾರ ಶಾಲೆಯಲ್ಲಿ ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು. ಎಸ್ಡಿಎಂಸಿ ಅಧ್ಯಕ್ಷ ರಾಜು ಗುಬ್ಬಕ್ಕನವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಮಧು ಕೇರಿಹೊಲದವರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಕೆ.ಕೆ. ಕರುವಿನಕೊಪ್ಪ, ಸಿಆರ್ಿ ಪ್ರಕಾಶ ಬಾಳಮ್ಮನವರ, ಎಸ್ಡಿಎಂಸಿ ಸದಸ್ಯರಾದ ದಿನೇಶ್ ಕೇರಿಹೊಳದವರ, ಪ್ರಕಾಶ ಕ್ಯಾಮಣಕೇರಿ, ಪರಶುರಾಮ ಶೇರವಾಡ, ಗೌರೀಶ ಪೂಜಾರ, ಕವಿತಾ ಬಾಳಮ್ಮನವರ, ಪ್ರಭಾರ ಮುಖ್ಯ ಶಿಕ್ಷಕ ದೇವೇಂದ್ರ್ಪ ದೊಡ್ಡಗೌಡ್ರ, ಸಹ ಶಿಕ್ಷಕಿಯರಾದ ನೇತ್ರಾವತಿ ಗೌಡ ಹಾಗೂ ಶಕುಂತಲಾ ಬಿಸಗಣ್ಣವರ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಿಕ್ಷಕಿ ಸುವರ್ಣ ಬಿರಾದಾರ್ ಅವರನ್ನು ಸನ್ಮಾನಿಸಿ, ಮುಂದಿನ ಸೇವಾ ಜೀವನಕ್ಕೆ ಶುಭ ಹಾರೈಸಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 