ಬಿಟ್ಟು ಬಿಡದ ಜಡಿ ಮಳೆಗೆ ಗೋಡೆ ಕುಸಿತ, ಬಾಲಕ ಸಾವು
Wall collapses due to incessant rain, boy dies
ಮಹಾಲಿಂಗಪುರ: ಶುಕ್ರವಾರದ ಮುಂಜಾನೆಯಿಂದಲೆ ಸುರಿಯುತ್ತಿರುವ ಜಡಿ ಮಳೆಯಿಂದ ಪಟ್ಟಣದ ಅಂಬೇಡ್ಕರ್ ವೃತ್ತ ಹತ್ತಿರವಿರುವ ಲಾತೂರ ಪರಿವಾರದ ಪತ್ರಾಸ್ ಶೆಡ್ಡಿನ ಹಳೆ ಗೋಡೆ ನೆನೆದು ಬೆಳಗಿನ ಜಾವ ಗಾಢ ನಿದ್ರೆಯಲ್ಲಿದ್ದ ದರ್ಶನ್ ನಾಗಪ್ಪ ಲಾತೂರ (11) ಇತನ ಮೇಲೆ ಗೋಡೆ ಬಿದ್ದಿರುವ ಕಾರಣ ಸ್ಥಳದಲ್ಲೆ ಬಾಲಕ ಸಾವನ್ನಪ್ಪಿದ ಘಟನೆ ನಡೆದಿದೆ.
ಈ ಘಟನೆಯಲ್ಲಿ ಬಾಲಕನ ತಾಯಿ ರೂಪಾ, ಸಹೋದರಿ ಪ್ರೀತಿ ಅದೃಷ್ಟವಶಾತ್ ಪಾರಾಗಿದ್ದು, ಈ ಸಮಯದಲ್ಲಿ ಬಾಲಕನ ತಂದೆ ನಾಗಪ್ಪ ಮನೆಯಲ್ಲಿರಲಿಲ್ಲ ಎಂದು ಪೋಲೀಸ್ ಮಾಹಿತಿಯಿಂದ ತಿಳಿದು ಬಂದಿದೆ. ಬಾಲಕನ ಸಹೋದರ ಶ್ರೀಶೈಲ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಸಮಾಧಾನ ವ್ಯಕ್ತಪಡಿಸಿದ ಶಾಸಕ :
ತೇರದಾಳ ಶಾಸಕ ಸಿದ್ದು ಸವದಿ ಶನಿವಾರ ಮುಂಜಾನೆ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಒಬೇರಾಯ ಕಾಲದ ಶಿಥಿಲಾವಸ್ಥೆಯಲ್ಲಿರುವ ಮನೆ ಕಂಡು, ಸೂರಿಲ್ಲದವರಿಗೆ ಮತ್ತು ಶಿಥಿಲಗೊಂಡ ಮನೆಗಳ ದುರುಸ್ಥಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಉಚಿತ ಮನೆ ಕಟ್ಟಿಸುವ ಯೋಜನೆಗಳನ್ನು ನೀಡಿವೆ. ಇವುಗಳನ್ನು ನಾವು ಸದುಪಯೋಗ ಪಡಿಸಿಕೊಳ್ಳಬೇಕು.ಎಷ್ಟೋ ಪರಿವಾರಗಳಿಗೆ ಮಾಹಿತಿ ಕೊರತೆಯೂ ಎದ್ದು ಕಾಣುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಒಂದು ವೇಳೆ ಯೋಜನೆಯ ಲಾಭ ಪಡೆದು ಮನೆ ದುರುಸ್ಥಿ ಮಾಡಿಕ್ಕೊಂಡಿದ್ದರೆ ಈ ಅಮಾಯಕ ಬಾಲಕನ ಅಮೂಲ್ಯ ಜೀವ ಉಳಿಸಬಹುದಾಗಿತ್ತು ಎಂದು ಮಮ್ಮಲ ಮರುಗಿದರು. ನಂತರ ಶಾಸಕರು, ಮುಖಂಡರು ಸೇರಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿರುವ ಮೃತನ ಗಾಯಗೊಂಡ ಸಹೋದರ ಶ್ರೀಶೈಲ ಆರೋಗ್ಯ ವಿಚಾರಿಸಿದರು.
ಶಾಸಕರಿಂದ ಭರವಸೆ : ನೈಸರ್ಗಿಕ ವಿಕೋಪಕ್ಕೆ ಮೃತಪಟ್ಟ ಕುಟುಂಬಕ್ಕೆ 5 ಲಕ್ಷ ರೂ, ಮತ್ತು ಮನೆ ವಿಕೋಪ ನಿಧಿಯಿಂದ 1 ಲಕ್ಷ 20 ಸಾವೀರ ರೂಗಳನ್ನು ಸರ್ಕಾರದಿಂದ ಮಂಜೂರಿ ಮಾಡಿಸಿ ಸೋಮವಾರ ಅಥವಾ ಮಂಗಳವಾರ ಚಕ್ ನೀಡಲಾಗುವುದು ಎಂದು ಭರವಸೆ ನೀಡಿದರು. ಆಶ್ರಯ ಯೋಜನೆಯಿಂದ ಮನೆ, ಮತ್ತು ಸರ್ಕಾರದಿಂದ ಸಿಗಬೇಕಾದ ಇತರೆ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಮೃತ ಬಾಲಕನ ಕುಟುಂಬಕ್ಕೆ ಭರವಸೆ ನೀಡಿದರು.
ಆಕ್ರಂದನ : ನಮ್ಮ ಬಡತನಕ್ಕ ಆಸರೆಯಾಗುವಂತ ಶಾನ್ಯಾ ಮಗಾ ಇದ್ರ್ಯೋ ಹ್ವಾದೋ ಎಂದು ತಾಯಿ ಮತ್ತು ಆತನ ತಂದೆ, ಸಹೋದರಿ ಕಣ್ಣೀರು ಹಾಕುತ್ತಿದ್ದರೆ, ಮೃತ ದರ್ಶನ ತಾ ಕಲಿಯುತ್ತಿದ್ದ ವಿವೇಕಾನಂದ ಶಾಲೆಯ ಶಿಕ್ಷಕಿಯರು ಸಹ ಘಟನಾ ಸ್ಥಳಕ್ಕೆ ಆಗಮಿಸಿ ದರ್ಶನ್ ಹೀನಾಯವಾಗಿ ಮೃತನಾಗಿರುವುದಕ್ಕೆ ನಮ್ಮ ಶಾಲೆಯ ಒಳ್ಳೆಯ ಪ್ರತಿಭಾವಂತ ವಿದ್ಯಾರ್ಥಿಯನ್ನು ಕಳೆದುಕೊಂಡಿದ್ದೇವೆ ಎಂದು ಗೋಳೋ ಎಂದು ಅತ್ತರು.
ಪುರಸಭೆ ಸದಸ್ಯ ಶೇಖರ ಅಂಗಡಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಶಂಕರಗೌಡ ಪಾಟೀಲ, ಮಹಾಲಿಂಗಪ್ಪ ಲಾತೂರ, ಶಿವಾನಂದ ಅಂಗಡಿ, ನ್ಯಾಯವಾದಿ ವಿಷ್ಣು ಲಾತೂರ, ಮಹೇಶ್ ಜಿಡ್ಡಿಮನಿ, ಮುತ್ತಪ್ಪ ಲಾತೂರ, ನಂದು ಲಾತೂರ, ಶಂಕರ ಮುಗಳಖೋಡ, ಬಸವರಾಜ ಮಡಿವಾಳರ ಮುಂತಾದವರಿದ್ದು,
ರಬಕವಿ ಬನಹಟ್ಟಿ ತಾಲೂಕ ದಂಡಾಧಿಕಾರಿ ಗೀರೀಶ ಸ್ವಾದಿ, ಮುಖ್ಯಾಧಿಕಾರಿ ನಾಮದೇವ ಲಮಾಣಿ,ತಲಾಠಿ ಸೌರಭ ಮೇತ್ರಿ, ಹಿ.ಆ.ನೀರೀಕ್ಷಕರು ಎಂ. ಎಸ್. ಮುಗಳಖೋಡ ಸೇರಿದಂತೆ ಪಿಎಸ್‌ಐ ಕಿರಣ ಸತ್ತಿಗೇರಿ ಮತ್ತು ಸಿಬ್ಬಂದಿಗಳು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 