10ನೇ ರಾಷ್ಟೀಯ ಆಯುರ್ವೇದ ದಿನಾಚರಣೆ ಪ್ರಯುಕ್ತ ವಾಕ್‌ಥಾನ್
Walkathon on the occasion of 10th National Ayurveda Day
ಚಿಕ್ಕೋಡಿ 23: ಆಯುರ್ವೇದವು ಆರೋಗ್ಯ ಕಾಪಾಡುವ ಹಾಗೂ ರೋಗ ನಿವಾರಣೆಗೆ ಮಾರ್ಗದರ್ಶಿಯಾದ ಪ್ರಾಚೀನ ವೈದ್ಯಕೀಯ ಪದ್ಧತಿ, ಸಮಾಜದಲ್ಲಿ ನೈಸರ್ಗಿಕ ಚಿಕಿತ್ಸೆ ವಿಧಾನಗಳನ್ನು ಅನುಸರಿಸುವುದು ಅತ್ಯಂತ ಅಗತ್ಯ” ಎಂದು ಕೆ ಎಲ್ ಇ ಯ ಆಯುರ್ವೇದ ಕಾಲೇಜಿನ ಪ್ರಾಚಾರ್ಯರಾದ ಡಾ. ಕಿರಣ ಮುತ್ನಾಳಿ ಹೇಳಿದರು.
ಚಿಕ್ಕೋಡಿಯ ಕೆ ಎಲ್ ಇ ಆಯುರ್ವೇದ ವೈದ್ಯಕೀಯ ಕಾಲೇಜು ಆವರಣದಲ್ಲಿ 10ನೇ ರಾಷ್ಟ್ರೀಯ ಆಯುರ್ವೇದ ದಿನದ ನಿಮಿತ್ತ ಏರಿ್ಡಸಿದ ವಾಕ್‌ಥಾನ್‌ಗೆ ಚಾಲನೆ ನೀಡಿ ಮಾತನಾಡುತ್ತಾ ಈ ವರ್ಷದ ಆಯುರ್ವೇದ ದಿನದ ಧೇಯ್ಯ ವಾಕ್ಯವು “ಆಯುರ್ವೇದವು ಜನರಿಗೆ ಮತ್ತು ಭೂಮಿಯ ಕಲ್ಯಾಣಕ್ಕಾಗಿ” ವಾಗಿದೆ. ಆಯುರ್ವೇದದ ಮಹತ್ವವನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶ ಹೊಂದಿದೆ. ಈ ವರ್ಷ ಇದನ್ನು ಸೆಪ್ಟೆಂಬರ್ 23 ರಂದು ಆಯುಷ ಸಚಿವಾಲಯದ ಮಾರ್ಗದರ್ಶನದಲ್ಲ್ಲಿ ಆಚರಿಸಲಾಯಿತ್ತು. ಆಯುರ್ವೇದವು ಕೇವಲ ಚಿಕಿತ್ಸೆಗಾಗಿ ಮಾತ್ರವಲ್ಲದೆ, ಆರೋಗ್ಯಕರ ಜೀವನ ಶೈಲಿ ಹಾಗೂ ದೀರ್ಘಾಯುಷ್ಯಕ್ಕಾಗಿ ಸಹ ಅನಿವಾರ್ಯವಾದ ಪಾಠಗಳನ್ನು ನೀಡುತ್ತದೆ. ಸ್ವಸ್ಥಸ್ಯ ಸ್ವಾಸ್ಥ್ಯ ರಕ್ಷಣಂ, ಆತುರಸ್ಯ ವಿಕಾರ ಪ್ರಶಮನಂ ಎಂಬುದು ಆಯುರ್ವೇದದ ಮೂಲ ತತ್ವವಾಗಿದ್ದು, ಪ್ರತಿಯೊಬ್ಬರೂ ದಿನನಿತ್ಯದ ಜೀವನದಲ್ಲಿ ಆಯುರ್ವೇದೀಯ ಕ್ರಮಗಳನ್ನು ಅಳವಡಿಸಿಕೊಂಡರೆ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ” ಎಂದರು.
ವಾಕ್‌ಥಾನ್: ವಿದ್ಯಾರ್ಥಿಗಳು ಆಯುರ್ವೇದ ಕುರಿತು ಘೋಷಣೆಗಳನ್ನು ಕೂಗುತ್ತಾ ಆಸ್ಪತ್ರೆಯಿಂದ ಪ್ರಾರಂಭಿಸಿ ಚಿಕ್ಕೋಡಿ ಬಸ ನಿಲ್ದಾಣದ ಮತ್ತು ಪ್ರಮುಖ ಬೀದಿಗಳಲ್ಲಿ ಜನಜಾಗೃತಿ ರಾ್ಯಲಿಯನ್ನು ಕಾಲೇಜಿನಲ್ಲಿ ಮುಕ್ತಾಯಗೊಳಿಸಲಾಯಿತು.
ಅದೇ ರೀತಿ 22 ರಂದು ರಾಷ್ಟ್ರೀಯ ಆಯುರ್ವೇದ ದಿನದ ನಿಮಿತ್ತ ಆರೋಗ್ಯ ಮೇಳ, ಓಷಧಿಸಸ್ಯಗಳ ಪ್ರದರ್ಶನ, ಆಯುರ್ವೇದ ಓಷಧಿಗಳ ಮಳಿಗೆ ಹಾಗೂ ಯೋಗಾಸನ ಇವುಗಳ ಪ್ರದರ್ಶನ ಏರಿ್ಡಸಲಾಗಿತ್ತು ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿಗಳಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದ್ದು, ಅನೇಕ ರೋಗಿಗಳಿಗೆ ಓಷಧಿ ವಿತರಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಡಾ. ಪಿ ವಿ ಜವಳಿ ಮಾತನಾಡಿದರು ಕಾರ್ಯಕ್ರಮವನ್ನು ಡಾ. ಹೊನವಾಡ ನಿರುಪಿಸಿದದು ಹಾಗೂ ವಂದರ್ನಾಪನೆಯನ್ನು ಡಾ. ಸಂತೋಷ ನೆರವೆರಿಸಿದರು. ಇದೇ ಸಮಯದಲ್ಲಿ ಕೆ ಎಲ್ ಇ ಆಯುರ್ವೇದ ಕಾಲೇಜಿನ ಉಪನ್ಯಾಸಕರು, ವೈದ್ಯರು, ಹಾಗೂ 250 ವಿದ್ಯಾರ್ಥಿಗಳು ಇತರೆ ಸಿಬ್ಬಂದಿ ವರ್ಗದವರು ವಾಕ್‌ಥಾನಲ್ಲಿ ಪಾಲ್ಗೊಂಡಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 