ಯುವಕರು ಮತದಾನ ಮಾಡುವುದು ಬಹುಮುಖ್ಯ: ಲಿಂಗರಾಜ

ಲೋಕದರ್ಶನವರದಿ

ರಾಣೇಬೆನ್ನೂರು-ಜ9: ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ನಾಗರೀಕರು ಮತ್ತು ಯುವಕರು ಮತದಾನ ಮಾಡುವುದು ಬಹುಮುಖ್ಯ ಅದಕ್ಕಾಗಿ ನಿರ್ಲಕ್ಷ್ಯ ಭಾವನೆಯನ್ನು ತಾಳದೇ ಯುವಕ-ಯುವತಿಯರು ಮತದಾರರ ಪಟ್ಟಿಯಲ್ಲಿ ನೊಂದಾಯಿಸಿಕೊಳ್ಳಲು ಮುಂದಾಗಬೇಕು ಎಂದು ಅಕ್ಷರ ದಾಸೋಹ ಸಹಾಯಕ ನಿದರ್ೇಶಕ ಲಿಂಗರಾಜ ಹೇಳಿದರು. ಅವರು ನಗರ ಹೊರವಲಯದ ಸಕರ್ಾರಿ ಪ್ರಥಮ ದಜರ್ೆ ಕಾಲೇಜು ಭವನದಲ್ಲಿ ತಾಲೂಕಾಢಳಿತ ರಾಷ್ಟ್ರೀಯ ಸೇವಾ ಯೋಜನೆ ಐಕ್ಯೂಎಸಿ ಮತದಾರರ ಸಾಕ್ಷರತಾ ಕ್ಲಬ್ ಸಂಯುಕ್ತವಾಗಿ ಆಯೋಜಿಸಿದ್ದ, ಮತದಾನ ಜಾಗೃತಿ ಮತ್ತು ಮಿಂಚಿನ ನೊಂದಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿಸಿದರು.

ಯುವಕ-ಯುವತಿಯರು ಈದೇಶದ ಮುಂದಿನ ನಾಗರೀಕರು. ಪ್ರಜಾಪ್ರಭುತ್ವ ವ್ಯವಸ್ಥೆಯ ಪರಿಪೂರ್ಣತೆಗೆ ಮತದಾನ ಪ್ರಮುಖ ಕಾರಣವಾಗಿದೆ.  ಕಡ್ಡಾಯವಾಗಿ ನೊಂದಣಿ ಮಾಡಿಸಿಕೊಂಡು ಇತರರಿಗೂ ಈ ಕುರಿತು ಸರಿಯಾದ ರೀತಿಯಲ್ಲಿ ಮಾಹಿತಿ ನೀಡುವುದರ ಮೂಲಕ ಸೇವಾಮುಖಿ ಕಾರ್ಯ ನಿರ್ವಹಿಸಲು ಮುಂದಾದಾಗ ಮಾತ್ರ ಈ ಯೋಜನೆ ಪರಿಪೂರ್ಣವಾಗಿ ಸಫಲವಾಗಲು ಸಾಧ್ಯವಾಗುವುದು ಎಂದರು.

ಡಾ.|| ಎಸ್.ಕೆ.ಪಾಟೀಲ, ಮತದಾರರ ಸಾಕ್ಷರತಾ ಕ್ಲಬ್ನ ಸಂಚಾಲಕಿ ಮಮತಾ ಸಾವಕಾರ ತಹಶೀಲ್ದಾರ ಕಚೇರಿಯ ವಿಕ್ರಮ ಸರ್ವದೆ, ಎನ್ಎಸ್ಎಸ್ ಅಧಿಕಾರಿ ಡಾ.ಸಿದ್ದಲಿಂಗಮ್ಮ ಬಿ.ಜಿ., ಸಂಗೀತಾ, ಮಮತಾ, ಎಸ್.ಬಿ.ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.