ಮನೆ ಮತದಾನ: ಅಣಕು ಪ್ರದರ್ಶನ
Voting: A mock demonstration
(ಗ್ರಾಮದ ವಿದ್ಯಾರ್ಥಿಗಳು ಹಳ್ಳಿಗೆ ಬಸ್ ಬರುತ್ತಿಲ್ಲ ಎಂದು ಆರೋಪಿಸಿ ಮತದಾನ ಬಹಿಷ್ಕರಿಸಿದ್ದು, ಮನವೊಲಿಸುವ ಮೂಲಕ ಮತದಾನ.)
ಧಾರವಾಡ 11: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದು ಮತವೂ ಎಷ್ಟೊಂದು ಅಮೂಲ್ಯ ಎಂಬುದನ್ನು ಶಾಲಾ ಚುನಾವಣಾ ಆಯೋಗವು ಪ್ರತಿಯೊಬ್ಬರ ಒಳಗೊಳ್ಳುವಿಕೆ ಮತ್ತು ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸುವುದಕ್ಕೆ ಬದ್ಧವಾಗಿದೆ ಎಂದು ಅಣಕು “ಮನೆ ಮತದಾನ”ದ ಮೂಲಕ ತೊರಿಸಿಕೊಟ್ಟಿದೆ. ಮತದಾನ ಕೇಂದ್ರಗಳಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅಡೆತಡೆಗಳನ್ನು ಎದುರಿಸುವ ಮತದಾರರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿರುವ ಪ್ರಗತಿಪರ ಕ್ರಮವಾಗಿದೆ.
ಹೌದು, ಕಲಕೇರಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಜುಲೈ 09 ರಂದು ಶಾಲಾ ಸಂಸತ್ತಿಗೆ ಇಂದು ನಡೆದಿರುವ ಮತದಾನದಲ್ಲಿ ಸೃಷ್ಟಿ ತುಳಜಮ್ಮನವರ 9 ನೇ ತರಗತಿ ಅಣಕು “ಮನೆ ಮತದಾನ” ಮಾಡುವ ಮೂಲಕ ಪ್ರಜಾಪ್ರಭುತ್ವ ಸಬಲಿಕರಣಕ್ಕೆ ಸಾಕ್ಷಿಯಾದರು. ವಿಶೇಷ ಚೇತನರ (ಪಿಡಬ್ಲ್ಯುಡಿ) ಮತ್ತು 85 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೆ ಮತದಾನ ಮಾಡುವುದಕ್ಕೆ ಅವಕಾಶ ನೀಡಿರುತ್ತದೆ.ಈ ಅವಕಾಶವನ್ನು ಬಳಸಿಕೊಂಡು 91 ವರ್ಷ ವಯೋವೃದ್ಧೆ ವೇಶಭೂಷಣ ಧರಿಸಿಕೊಂಡ “ಸೃಷ್ಟಿ ತುಳಜಮ್ಮನವರ” ಮತವನ್ನು ಚಲಾಯಿಸಿದರು. ಮತದಾನ ಮಾಡುವ ಮೂಲಕ ಉತ್ತಮ ವ್ಯವಸ್ಥೆ ಗಮನಿಸಿ ಸಾಹೆಬ್ರಿಗೆ (ಪ್ರಶಾಂತ ಝಳಕಿ ಪ್ರಭಾರಿ ಮುಖ್ಯಶಿಕ್ಷಕರು ಶಾಲಾ ಚುನಾವಣೆ ಎ.ಆರ್.ಓ ಮತ್ತು ತಂಡದವರಿಗೆ) ಅಭಿನಂದನೆಗಳನ್ನು ತಿಳಿಸಿದರು. ನನಗೆ ವಯಸ್ಸಾಗಿದೆ ಮತಗಟ್ಟೆಗೆ ತೆರಳಿ ಮತದಾನ ಮಾಡಲು ಸಾಧ್ಯವಾಗುವುದಿಲ್ಲ ಮನೆಗೆ ಬಂದು ಮತಗಟ್ಟೆಮಾಡಿ ಮತಹಾಕಲು ಸಹಾಯ ಮಾಡಿದ ತಮಗೆ ಹಾಗೂ ಆಯೋಗಕ್ಕೆ(ಮುಖ್ಯಾಧ್ಯಾಪಕರಿಗೆ) ಕೃತಜ್ಞತೆ ಸಲ್ಲಿಸಿದಳು.
ಮತದಾನ ಬಹಿಷ್ಕಾರ ಮನವೊಲಿಕೆ; ಹುಣಸಿಕುಮರಿ ಗ್ರಾಮದ ವಿದ್ಯಾರ್ಥಿಗಳು ಹಳ್ಳಿಗೆ ಬಸ್ ವ್ಯವಸ್ಥೆ ಸರಿಯಾದ ವೇಳೆಗೆ ಬರುತ್ತಿಲ್ಲ ಎಂದು ಆರೋಪಿಸಿ ಮತದಾನ ಬಹಿಷ್ಕರಿಸಿದ್ದು, ಮನವೊಲಿಸುವ ಕೆಲಸವನ್ನು ಅಧಿಕಾರಿಗಳು ನಡೆಸಿದರು, ನಂತರದಲ್ಲಿ ಮತದಾನ ಮಾಡುವ ಮೂಲಕ ಮತೋತ್ಸವಕ್ಕೆ ಜೈ ಎನ್ನಲಾಯಿತು.
ಮತಗಟ್ಟೆಯಲ್ಲಿ 99 ರಷ್ಟು ಮತದಾನ: ಕಲಕೇರಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ತಿಗೆ ಇಂದು ನಡೆದಿರುವ ಮತದಾನ ಬಹುತೇಕ ಶಾಂತಿಯುತವಾಗಿದ್ದು, ಮತದಾರರು ಉತ್ಸಾಹದಿಂದ ಮತಚಲಾಯಿಸಿದರು. ಮತಯಂತ್ರ ದೋಷ, ಮತದಾನ ಬಹಿಷ್ಕಾರ, ಕೆಲವು ಸಣ್ಣಪುಟ್ಟ ಘಟನೆಗಳು ಹೊರತುಪಡಿಸಿ. ಮತದಾನ ಸುಗಮವಾಗಿ, ಶಾಂತಿಯುತವಾಗಿ ಸಾಗಿದೆ. ಎಲ್ಲೂ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ.ಶಾಲೆಯ ಎಲ್ಲ 8 ರಿಂದ 10ನೇ ತರಗತಿ ಕ್ಷೇತ್ರಗಳಿಗೆ ಇಂದು ಬೆಳಿಗ್ಗೆ 11-30ಕ್ಕೆ ಮತದಾನ ಆರಂಭವಾಗಿ, ಮತದಾರರು ಭಾರಿ ಉತ್ಸಾಹದಿಂದ ಮತ ಚಲಾಯಿಸಿದರು. ಬೆಳಿಗ್ಗೆಯೇ ಮತಗಟ್ಟೆಗೆ ದೊಡ್ಡ ಸಂಖ್ಯೆಯಲ್ಲಿ ಮತದಾರರು ಆಗಮಿಸಿ ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಶಾಲೆಯ ಎಲ್ಲ ಮತಗಟ್ಟೆಗಳಲ್ಲೂ ಬೆಳಿಗ್ಗೆಯೇ ಬಿರುಸಿನ ಮತದಾನ ನಡೆದಿದ್ದು, ಮಧ್ಯಾಹ್ನ 12 ಗಂಟೆ ವೇಳೆಗೆ ಶೇ. 99 ರಷ್ಟು ಮತದಾನ ಆಗಿದೆ. ಮತದಾರರನ್ನು ಮತಗಟ್ಟೆಗೆ ಸೆಳೆಯುವ ಚುನಾವಣಾ ಆಯೋಗದ ಪ್ರಯತ್ನಗಳು ಯಶಸ್ವಿಯಾಗಿದ್ದು, ಶಾಲೆಯ ಎಲ್ಲ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಬೆಳ್ಳಂಬೆಳಿಗ್ಗೆಯೇ ಮತದಾರರು ದೊಡ್ಡ ಸಂಖ್ಯೆಯಲ್ಲಿ ಮತಗಟ್ಟೆಗೆ ಆಗಮಿಸಿ, ಮತ ಹಾಕಿ ಪ್ರಜಾತಂತ್ರದ ಹಬ್ಬಕ್ಕೆ ಜೈ ಎಂದಿದ್ದಾರೆ.ಎಲ್ಲೆಡೆ ಮತದಾನ ಬಿರುಸಿನಿಂದ, ಶಾಂತಿಯುತವಾಗಿ ನಡೆಯಿತು.
ಬಿಗಿಬಂದೋಬಸ್ತ್ ಅಹಿತಕರ ಘಟನೆ ಇಲ್ಲ; ಮುಕ್ತ ಹಾಗೂ ಶಾಂತಿಯುತ ಮತದಾನಕ್ಕೆ ಶಾಲಾ ಚುನಾವಣಾ ಆಯೋಗ ಎಲ್ಲ ವ್ಯವಸ್ಥೆ ಮಾಡಿದ್ದು, ಮತದಾನ ಸಂದರ್ಭದಲ್ಲಿ ಮಧ್ಯಾಹ್ನದವರೆಗೂ ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ. ಎಲ್ಲ ಮತಗಟ್ಟೆಗಳಲ್ಲೂ ಶಾಲಾ ವಿದ್ಯಾರ್ಥಿಗಳೇ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಬಿಗಿ ಭದ್ರತೆಯಲ್ಲಿ ಮತದಾನ ನಡೆದಿದೆ.
ಇವಿಎಂ ತಾಂತ್ರಿಕ ತೊಂದರೆ; ತರಗತಿಯಲ್ಲಿ ಮತಗಟ್ಟೆಯಲ್ಲಿ ವಿದ್ಯುನ್ಮಾನ ಮತಯಂತ್ರದಲ್ಲಿ ತೊಂದರೆ ಕಾಣಿಸಿಕೊಂಡಿದ್ದು, ಮತಯಂತ್ರ ಸರಿಪಡಿಸಿದ ನಂತರ ಮತದಾನ ವಿಳಂಬವಾಗಿ ಆರಂಭವಾಗಿದೆ.
ಚುನಾವಣೆಯಲ್ಲಿ ಯೋಗ್ಯ ಅಭ್ಯರ್ಥಿಗಳನ್ನು ಆರಿಸುವ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಅಡಿಪಾಯವಾಗಲಿದೆ ಎಂದು ಕೇತ್ರ ಸಮನ್ವಯಾಧಿಕಾರಿ ಕುಮಾರ ಕೆ ಎಫ್ ಕರೆನೀಡಿದರು
ಕಲಕೇರಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ “ಮನೆ ಮತದಾನ” ಎಂಬ ವಿಶೇಷ ಕಾರ್ಯಕ್ರಮದ ಮೂಲಕ ಶಾಲಾ ಸಂಸತ್ ಚುನಾವಣೆಯನ್ನು ಹಮ್ಮಿಕೊಳ್ಳಲಾಯಿತು. ಅವರು ಉಪನ್ಯಾಸ ನೀಡುತ್ತಾ ಮಾತನಾಡಿ ಮತದಾರ ಪ್ರಭುಗಳು ತಮ್ಮ ಕಡ್ಡಾಯ ಮತದಾನದಿಂದ ಸರಿಯಾದ ಕ್ರಮದಲ್ಲಿ ರಾಷ್ಟ್ರದ ಅಭಿವೃದ್ಧಿ ಕೈಗೊಳ್ಳದಿದ್ದರೆ,ಹಾಗೂ ಆಯ್ಕೆಯಾದ ಜನಪ್ರತಿನಿದಿಗಳು ಸರಿಯಾದ ಸೇವೆ ನೀಡದಿದ್ದರೆ ಜನರೆ ಅಧಿಕಾರದಿಂದ ದೂರಮಾಡುತ್ತಾರೆ ಎಂಬುವುದಕ್ಕೆ ನಮ್ಮ ನೆರೆಹೊರೆ ರಾಷ್ಟ್ರಗಳೇ ಉದಾರಣೆಯಾಗಿವೆ. ಹಾಗಾಗಿ ನಾವು ನೀಡುವ ಮತವು ಅಭಿವೃದ್ಧಿ ಪಥದತ್ತ ಸಾಗುವ ವ್ಯಕ್ತಿಗಳಿಗೆ ದೊರೆಯಬೇಕೆಂದು ಕರೆ ನೀಡಿದರು.ಮನೆ ಮತದಾನ ಮಾಡುವುದರಿಂದ ದುರ್ಬಲರಿಗೆ ಮತದಾನ ಮಾಡಲು ಅವಕಾಶ ಮಾಡಿ ಅವರು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸುವಂತಾಗಿದೆ ಎಂದರು.
ಪ್ರಭಾರಿ ಮುಖ್ಯ ಶಿಕ್ಷಕರಾದ ಪ್ರಶಾಂತ ಝಳಕಿ ಮಾತನಾಡಿ “ಇಂದಿನ ಮಕ್ಕಳೇ - ನಾಳೆಯ ನಾಡಿನ ಪ್ರಜೆ (ಭು)ಗಳು” ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ, ಪ್ರಜೆಗಳಿಂದ, ಪ್ರಜೆಗಳಿಗಾಗಿ ಆರಿಸಲ್ಪಟ್ಟ ಪ್ರಜಾಪ್ರತಿನಿಧಿಗಳೇ ನಡೆಸುವ ಸರ್ಕಾರ. ಈ ಪ್ರಜಾಪ್ರಭುತ್ವದ ಯಶಸ್ಸು ಪ್ರಜ್ಞಾವಂತ, ವಿದ್ಯಾವಂತ ಮತದಾರರನ್ನು ಅವಲಂಬಿಸಿದೆ. ಇಲ್ಲಿ ‘ಚುನಾವಣೆ’ಗಳು ಮಹತ್ತರ ಪಾತ್ರವಹಿಸುತ್ತವೆ. ಪ್ರಜೆಗಳು ನೀಡುವ ಮತವು ಮುಂದೊಂದು ದಿನ ಅಭಿವೃದ್ಧಿ ಪಥದತ್ತಸಾಗಿ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಗೆ ಸೇರಲಿದೆ ಎಂದರು.
ಹೌದು 2025-26 ನೇ ಸಾಲಿನ ಶೇ. 99ರಷ್ಟು ಮತದಾನವಾಗಿ, ಚುನಾವಣಾ ಆಯೋಗ ಬಳಸುವ ವಿದ್ಯುನ್ಮಾನ ಮತ ಯಂತ್ರದಂತೆಯೇ ಇರುವ ಮೋಬೈಲ್ ಮತಪೆಟ್ಟಿಗೆಯಲ್ಲಿ ಶಾಲಾ ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದ್ದು. ಫಲಿತಾಂಶಕ್ಕಾಗಿ ಶಾಲಾ ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 