ವೋಟ್ ಚೋರಿ ಗದ್ದಿ ಚೋಡ್, ಕಂಪ್ಲಿಯಲ್ಲಿ ಬ್ಲಾಕ್ ಕಾಂಗ್ರೇಸ್ ಸಮಿತಿಯಿಂದ ಮತಗಳ್ಳತನದ ವಿರುದ್ಧ ಸಹಿ ಸಂಗ್ರಹ ಅಭಿಯಾನ

ವೋಟ್ ಚೋರಿ ಗದ್ದಿ ಚೋಡ್, ಕಂಪ್ಲಿಯಲ್ಲಿ ಬ್ಲಾಕ್ ಕಾಂಗ್ರೇಸ್ ಸಮಿತಿಯಿಂದ ಮತಗಳ್ಳತನದ ವಿರುದ್ಧ ಸಹಿ ಸಂಗ್ರಹ ಅಭಿಯಾನ Vote Chori Gaddi Chod, Block Congress Committee in Kampli holds signature collection campaign agains


ಕಂಪ್ಲಿ 03:  ಪಟ್ಟಣದಲ್ಲಿ ಬ್ಲಾಕ್ ಕಾಂಗ್ರೇಸ್ ಸಮಿತಿ ವತಿಯಿಂದ ಶಾಸಕ ಜೆ.ಎನ್‌.ಗಣೇಶ್ ನೇತೃತ್ವದಲ್ಲಿ ‘ವೋಟ್ ಚೋರಿ ಗದ್ದಿ ಚೋಡ್, ಮತಗಳ್ಳತನದ ವಿರುದ್ಧ ಡಾ.ಬಿ.ಆರ್‌.ಅಂಬೇಡ್ಕರ್ ವೃತ್ತದಲ್ಲಿ ಸಹಿ ಸಂಗ್ರಹ ಅಭಿಯಾನ ಜರುಗಿತು. ಪಟ್ಟಣದ ಪುರಸಭೆ ಮುಂಭಾಗದಿಂದ ನಡೆದ ಮತಗಳ್ಳತನ ವಿರುದ್ಧ ಪ್ರತಿಭಟನಾ ಮೆರವಣಿಗೆ ಡಾ.ಬಿ.ಆರ್‌.ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡಿತು. ಶಾಸಕ ಜೆ.ಎನ್‌.ಗಣೇಶ್ ಮಾತನಾಡಿ, ಕಳೆದ 12 ವರ್ಷಗಳಿಂದಲೂ ಸಹಿತ ಕೇಂದ್ರದಲ್ಲಿರುವ ಭಾಜಪ ಸರ್ಕಾರದ ಪ್ರಧಾನ ಮಂತ್ರಿಯೂ ಸೇರಿದಂತೆ ಆ ಪಕ್ಷದ ನಾಯಕರು ಚುನಾವಣಾ ಆಯೋಗದ ಮೂಗಿನ ಕೆಳಗೆ ಮತಗಳ್ಳತನ ಮಾಡುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದೆ.ಕಾಂಗ್ರೇಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ರಾಹುಲ್ ಗಾಂಧಿಯವರು ಈಬಗ್ಗೆ ಹತ್ತು ಹಲವು ಭಾರಿ ಚುನಾವಣಾ ಆಯೋಗದ ಗಮನ ಸೆಳೆದರೂ, ಅಧಿವೇಶನದಲ್ಲಿ ಚರ್ಚಿಸಿದರೂ ಸಹಿತ ಇದುವರೆಗೂ ಸಹಿತ ಯಾವುದೇ ಕ್ರಮಗಳನ್ನು ಕೇಂದ್ರ ಸರ್ಕಾರವಾಗಲಿ, ಚುನಾವಣಾ ಆಯೋಗವಾಗಲಿ ಕ್ರಮಗಳನ್ನು ಕೈಗೊಳ್ಳದಿರುವುದನ್ನುನೋಡಿದರೆ ನಾವು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇದ್ದೇವೆಯೋ ಅಥವಾ ಸರ್ವಾಧಿಕಾರಿ ರಾಷ್ಟ್ರದಲ್ಲಿ ಇದ್ದೇವೆಯೋ ಎನ್ನುವ ಅನುಮಾನ ಕಾಡುತ್ತಿದೆ.ಇದು ಇದೇ ರೀತಿ ಮುಂದುವರಿದರೆ ಮುಂದೊಂದು ದಿನ ಯಾವುದೇ ಚುನಾವಣೆಗಳೆಯೇ ಇಲ್ಲದೆ ತಮಗಿಷ್ಟ ಬಂದವರು ದೇಶ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುವಂತಾಗುತ್ತದೆ. ಭಾಜಪ ಸರ್ಕಾರವು ಕಳೆದ 12 ವರ್ಷಗಳಲ್ಲಿ ತಾವು ಮಾಡಿದ ಅಭಿವೃದ್ಧಿ ಕೆಲಸಗಳನ್ನು ಜನತೆಯ ಮುಂದೆ ಇಟ್ಟು ಮತಗಳನ್ನು ಪಡೆಯಲಿ ಆದರೆ ತಾವು ಯಾವುದೇ ಕೆಲಸಗಳನ್ನು ಮಾಡದೇ ಕೇವಲ ಮತದಾರರ ಕಣ್ಣೊರೆಸುವ ತಂತ್ರಗಳನ್ನು ಹೇಳುವ ಮೂಲಕ ಕಳ್ಳತನಗಳ ಮೂಲಕ ಮತಗಳನ್ನು ಪಡೆದು ಅಧಿಕಾರ ಹಿಡಿಯುತ್ತಿರುವುದು ಅತ್ಯಂತ ನಾಚಿಕೆಗೇಡಿನ ಕಾರ್ಯವಾಗಿದೆ. ಬೇರೆ ರಾಜ್ಯಗಳಲ್ಲಿ ಅಷ್ಟೇ ಅಲ್ಲದೇ ನಮ್ಮದೇ ರಾಜ್ಯದ ಮಹದೇವಪುರ ರಾಜಾಜಿ ನಗರ,ಆಳಂದದಲ್ಲಿ ಮತಗಳ್ಳನ ನಡೆದಿರುವ ಬಗ್ಗೆ ಈಗಾಗಲೇ ಸಾಕ್ಷಿಗಳು ಸಿಕ್ಕಿದ್ದು, ಚುನಾವಣಾ ಆಯೋಗ ಇದನ್ನು ಅತ್ಯಂತ ಗಂಬೀರವಾಗಿ ಪರಿಗಣಿಸಿ ಮತಗಳ್ಳತನ ನಡೆಸಿರುವವರ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ಮುಖಂಡರಾದ ಸಿ.ಆರ್‌.ಹನುಮಂತ, ಎಂ.ಸುಧಿರ್, ಜಾಫರ್ ಸಾಧಿಕ್, ಚನ್ನಬಸವನಗೌಡ, ಹೊಸಕೋಟೆ ಜಗದೀಶ್, ಶಶೀಕುಮಾರ್, ಅಬ್ದುಲ್ ಮುನಾಫ್, ಎಂ.ಗೋಪಾಲ್, ಡಿಎಸ್‌.ಪ್ರಸಾದ್, ಮಸ್ತಾನ್,ವೀರಾಂಜಿನೇಯಲು, ರೇಣುಕಗೌಡ, ಪ್ರಹ್ಲಾದ್, ರಘುನಾಯಕ್, ಶರಣಗೌಡ, ಕೋರಿ ಚನ್ನಬಸವ, ಎಸ್‌.ಸುರೇಶ್,ಚನ್ನಬಸವ, ಪಾಂಡುರಂಗ, ಡೆಕೋರೇಟರ್ ನಾಗರಾಜ, ಸುರೇಶಗೌಡ ಸೇರಿದಂತೆ ವಿವಿಧ ಗ್ರಾಮಗಳ ಪಕ್ಷದ ಮುಖಂಡರು ಭಾಗವಹಿಸಿದ್ದರು.