ಸ್ವಾವಲಂಬಿ ಬದುಕಿಗೆ ವೃತ್ತಿ ಶಿಕ್ಷಣ ಅಗತ್ಯ:ಸಂಜೀವ ಹುಲ್ಲೋಳ್ಳಿ
Vocational education is essential for a self-reliant life: Sanjeeva Hullolli
ಚಿಕ್ಕೋಡಿ 13: ಜಿಟಿಟಿಸಿ ಕಾಲೇಜಿನಲ್ಲಿ 24 ಮಳಿಗೆಗಳ ಮೂಲಕ ವೃತ್ತಿ ಮಾರ್ಗದರ್ಶನ ಯಶಸ್ವಿಯಾಗುವುದು. ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ವೃತ್ತಿ ಶಿಕ್ಷಣ ಅತ್ಯಂತ ಅಗತ್ಯವಾಗಿದ್ದು, ಇಂತಹ ವೃತ್ತಿ ಮೇಳಗಳು ಸರಿಯಾದ ದಾರಿದೀಪವಾಗುತ್ತವೆ ಎಂದು ಚಿಕ್ಕೋಡಿ ಡಯಟ್ ಪ್ರಾಚಾರ್ಯ ಸಂಜೀವ ಹುಲ್ಲೋಳ್ಳಿ ಹೇಳಿದರು.
ಇಲ್ಲಿನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಚಿಕ್ಕೋಡಿ ವತಿಯಿಂದ ಜಿಟಿಟಿಸಿ ಚಿಕ್ಕೋಡಿಯಲ್ಲಿ ಹಮ್ಮಿಕೊಂಡ ವೃತ್ತಿ ಶಿಕ್ಷಣ ಪ್ರದರ್ಶನ ಹಾಗೂ ವೃತ್ತಿ ಮೇಳದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಣಾಧಿಕಾರಿ ಎ.ಎಚ್. ಬಿರಾದಾರ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಕ್ಕಳಲ್ಲಿ ಬಾಲ್ಯದಿಂದಲೇ ವೃತ್ತಿ ಕೌಶಲ್ಯಗಳನ್ನು ರೂಢಿಸಿಕೊಳ್ಳುವುದರಿಂದ ಅವರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವೆಂದು ಹೇಳಿದರು.
ಡಿವೈಪಿಸಿ ರೇವತಿ ಮಠದ ಮುಖ್ಯ ಅತಿಥಿಗಳಾಗಿ ಆಗಮಿಸಿ ಸ್ವಾವಲಂಬಿ ಬದುಕಿಗೆ ವಿವಿಧ ವೃತ್ತಿಗಳ ಆಯ್ಕೆ ಮಾಡುವಲ್ಲಿ ಇಂತಹ ಕಾರ್ಯಕ್ರಮಗಳು ಅತ್ಯಂತ ಉಪಯುಕ್ತವಾಗಿವೆ ಎಂದು ತಿಳಿಸಿದರು. ಬಿ.ಜೆ. ಪಾಟೀಲ ಅವರು ಗ್ರಾಮೀಣ ವಿದ್ಯಾರ್ಥಿಗಳು ವೃತ್ತಿಪರ ಪಠ್ಯಕ್ರಮಗಳನ್ನು ಆಯ್ಕೆ ಮಾಡುವಾಗ ಎದುರಿಸುವ ಗೊಂದಲಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸದಲಗದ ಪ್ರಾಂಶುಪಾಲರಾದ ಸಂತೋಷ ಪೀರಪ್ಪಗೋಳ ವಿವಿಧ ವೃತ್ತಿ ಪಠ್ಯಕ್ರಮಗಳ ಕುರಿತು ಮಾಹಿತಿ ಹಂಚಿಕೊಂಡರು. ನೋಡಲ್ ಅಧಿಕಾರಿ ಬ್ರಹ್ಮಾನಂದ ಕೊಕಟನೂರ ಪ್ರಾಸ್ತಾವಿಕ ನುಡಿಯನ್ನು ನುಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಬಿ. ಪಾಟೀಲ, ಪಿ.ಬಿ. ಹಿರೇಮಠ, ಜಿ.ಬಿ. ಬಳಿಗಾರ, ಜಿಟಿಟಿಸಿ ಪ್ರಾಂಶುಪಾಲರಾದ ಶೀತಲಕುಮಾರ ದೇವಲಾಪೂರ, ಅರುಣ ಕೋಳಿ, ಜೆ.ಪಿ. ತಂಗಡಿ, ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಬಿ.ಎ. ಕುಂಬಾರ, ಎಸ್.ಎನ್. ಬೆಳಗಾವಿ, ಎನ್.ಜಿ. ಪಾಟೀಲ, ರಾಜೇಂದ್ರ ದೇವರುಷಿ ಸೇರಿದಂತೆ ಡಯಟ್ ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.ಉಪನ್ಯಾಸಕರಾದ ಮಲ್ಲಿಕಾರ್ಜುನ ಯರಗುದ್ರಿ ಸ್ವಾಗತಿಸಿದರು. ಕೆಂಪಣ್ಣ ತಳವಾರ ನಿರೂಪಣೆ ಮಾಡಿದರು. ಕೆ.ಟಿ. ಕಾಂಬಳೆ ವಂದಿಸಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 