ಲೋಕದರ್ಶನ ವರದಿ
ಬೆಳಗಾವಿ 05: ಪ್ರತಿಯೊಬ್ಬರೂ ಉತ್ಸಾಹದಿಂದ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಕ್ರೀಡೆಗಳು ಮನುಷ್ಯನ ದೈಹಿಕ ಆರೋಗ್ಯ ಉತ್ತಮಗೊಳಿಸುವುದಲ್ಲದೆ, ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತವೆ. ಸ್ಪಧರ್ಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಭವಿಷ್ಯವು ಉಜ್ವಲವಾಗುತ್ತದೆ ಎಂದು ಖ್ಯಾತ ಖುರಾಷ ಕ್ರೀಡಾಪಟು ಹಾಗೂ 2018 ರ ಏಷಿಯನ್ ಗೇಮ್ಸನ ಕಂಚಿನ ಪದಕ ವಿಜೇತೆ ಮಲಪ್ರಭಾ ಜಾಧವ ಹೇಳಿದರು. ನಗರದ ಅಂಗಡಿ ಇಂಟರನ್ಯಾಷನಲ್ ಸ್ಕೂಲಿನಲ್ಲಿ ಸೋಮವಾರದಂದು ನಡೆದ ವಾಷರ್ಿಕ ಕ್ರೀಡಾಕೂಟ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಇನ್ನೊರ್ವ ಅತಿಥಿ ಏಕಲವ್ಯ ಪುರಸ್ಕೃತೆ ಹಾಗೂ ಖುರಾಷ ತರಬೇತುದಾರ ತ್ರಿವೇಣಿ ಜಿತೇಂದ್ರ ಸಿಂಗ್ ಮಾತನಾಡಿ, ವಿದ್ಯಾಥರ್ಿಗಳಿಗೆ ಕ್ರೀಡೆಯ ಹಾಗೂ ದೈಹಿಕ ಶಿಕ್ಷಣದ ಮಹತ್ವವನ್ನು ತಿಳಿಸಿದರು. ಈ ಸಂದರ್ಭದಲ್ಲಿ ಕ್ರೀಡೆಗಳಲ್ಲಿ ವಿಜಯ ಸಾಧಿಸಿದ ವಿದ್ಯಾಥರ್ಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಸಂಸ್ಥೆಯ ಉಪಾಧ್ಯಕ್ಷೆ ಮಂಗಲ ಅಂಗಡಿ ಎಲ್ಲ ವಿದ್ಯಾಥರ್ಿಗಳಿಗೆ ಶುಭ ಕೋರಿದರು.
ಸ್ಕೂಲಿನ ಮುಖ್ಯಾಧ್ಯಾಪಕಿ ಆಶಾ ರಜಪೂತ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಕ್ರೀಡಾಸ್ಪಧರ್ೆಗಳಲ್ಲಿ ವಿದ್ಯಾಥರ್ಿಗಳು ಭಾಗವಹಿಸಿ ತಮ್ಮ ಕ್ರೀಡಾ ಮನೋಬಾವವನ್ನು ಪ್ರದಶರ್ಿಸಿ ಶಾಲೆಗೆ ಕೀತರ್ಿ ತರಬೇಕೆಂದು ಹೇಳಿದರು.
ವಿದ್ಯಾಥರ್ಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪಥಸಂಚಲನ ಹಾಗೂ ವಿವಿಧ ರೀತಿಯ ಕ್ರೀಡೆಗಳನ್ನು ಪ್ರದಶರ್ಿಸಿದರು. ಸ್ಕೂಲಿನ ಮುಖ್ಯಾಧ್ಯಾಪಕಿ ಆಶಾ ರಜಪೂತ ಶಾಲಾ ವಾಷರ್ಿಕ ಕ್ರೀಡಾ ವರದಿ ಓದಿದರು.
ಜ್ಯೋತಿ ಪಾಟೀಲ, ಸಂಧ್ಯಾ ಶಾನಬಾಗ, ಗಿರೀಶ ಕುಲಕಣರ್ಿ, ವಿನಾಯಕ ಜ್ಯೋತಿ, ದೈಹಿಕ ಶಿಕ್ಷಕ ಮಹಾದೇವ ಶಿರಗಾಂವಕರ, ದೈಹಿಕ ನಿದರ್ೇಶಕ ವಿಶಾಂತ ದಮೋಣೆ ಸೇರಿದಂತೆ ಸ್ಕೂಲಿನ ಶಿಕ್ಷಕ-ಶಿಕ್ಷೇತರ ವೃಂಧ, ವಿದ್ಯಾಥರ್ಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು. ರಮಾ ದೇಶಪಾಂಡೆ ಸ್ವಾಗತಿಸಿದರು. ಮೋನಿಕಾ ವಿಲ್ಸನ್ ಹಾಗೂ ರೇಖಾ ರಾಜಗೋಳಕರ ನಿರೂಪಿಸಿದರು. ಮಂಗಳಾ ಕಾಳೆ ವಂದಿಸಿದರು.