ಶ್ರಾವಣ ಮಾಸದಲ್ಲಿ ವಿವಿಧ ದೇವಸ್ಥಾನಗಳಿಗೆ ಭೇಟಿ: ಮುತ್ತು ರಾಠೋಡ್

ಶ್ರಾವಣ ಮಾಸದಲ್ಲಿ ವಿವಿಧ ದೇವಸ್ಥಾನಗಳಿಗೆ ಭೇಟಿ: ಮುತ್ತು ರಾಠೋಡ್  Visits to various temples during the month of Shravana: Muthu Rathod


ಲಕ್ಷ್ಮೇಶ್ವರ, ಆ.25: ಶ್ರಾವಣ ಮಾಸವು ಹಿಂದೂಗಳ ಪಾಲಿಗೆ ಅತ್ಯಂತ ಪವಿತ್ರವಾದ ಮಾಸವಾಗಿದ್ದು, ಈ ಸಂದರ್ಭದಲ್ಲಿ ಸಂಕಲ್ಪಿಸಿಕೊಂಡ ಕಾರ್ಯಗಳನ್ನು ಈಡೇರಿಸಿಕೊಳ್ಳಲು ವಿವಿಧ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆಯುವುದು ಮಹತ್ವದ್ದಾಗಿದೆ ಎಂದು ಜವಳಿ ನಿಗಮದ ಮಾಜಿ ನಿರ್ದೇಶಕರು ಹಾಗೂ ಶಿರಹಟ್ಟಿ ಮೀಸಲು ವಿಧಾನಸಭಾ ಕ್ಷೇತ್ರದ ಸೇವಾ ಆಕಾಂಕ್ಷಿ ಮುತ್ತು ರಾಠೋಡ್ ಹೇಳಿದರು.  

ಅವರು ತಮ್ಮ ಅಪಾರ ಅಭಿಮಾನಿಗಳೊಂದಿಗೆ ಪಟ್ಟಣದ ಶಿಗ್ಲಿ ನಾಕಾ ಸರ್ಕಲ್ನಲ್ಲಿರುವ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಅವರ ಮೂರ್ತಿಗೆ ಮಾಲಾರೆ​‍್ಣ ಮಾಡಿ, ಬಳಿಕ ಲಕ್ಷ್ಮೇಶ್ವರ ಪಟ್ಟಣದ ಐತಿಹಾಸಿಕ ಸೋಮನಾಥ ದೇವಸ್ಥಾನಕ್ಕೆ ತೆರಳಿ ಸೋಮನಾಥನ ದರ್ಶನ ಪಡೆದರು.  ನಂತರ ಕನಕಪುರ ದ್ಯಾಮವ್ವ ದೇವಿ ದೇವಸ್ಥಾನ, ಗಣಪತಿ ದೇವಸ್ಥಾನ, ಸಾಯಿಬಾಬಾ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.  

ಈ ಸಂದರ್ಭದಲ್ಲಿ ಮುಖಂಡರಾದ ಅಶೋಕ ಪಲ್ಯದ, ನಾಗಣ್ಣ ಚಿಂಚಲಿ, ನವೀನ ಬೆಳಟ್ಟಿ, ಗುರುಪ್ಪ ವಡ್ಡರ, ಬಸವರಾಜ ಜಾಲಗಾರ, ಶಿವಾನಂದ ಯರಗಟ್ಟಿ, ಮಂಜು ಗಜಕೋಶ, ಜಗದೀಶ ಹಡಪದ, ಗಂಗಣ್ಣ ಶಿರಹಟ್ಟಿ, ಅನಿಲ ಕಂಬ್ಳೆ, ಸಂತೋಷ ಗಜಕೋಶ, ಮೋಹನ ಕಬೂರ, ಗಂಗಾಧರ ಕರಾಟೆ, ವಾಸು ಸಾತಪೂತೆ, ಸಂಜು ಗಜಕೋಶ ಸೇರಿದಂತೆ ಹಲವು ಮುಖಂಡರು, ಅಭಿಮಾನಿಗಳು ಉಪಸ್ಥಿತರಿದ್ದರು.