ಮುನಿಶ್ರೀ 108 ವಿದಿತಸಾಗರ ಮಹಾರಾಜರಿಂದ ಧರ್ಮದರ್ಶನ
Visitation by Munishree 108 Viditasagar Maharaja
ಲೋಕದರ್ಶನ ವರದಿ
ಹಾವೇರಿ 09: ನಗರದ ಜಿನ ಮಂದಿರದಲ್ಲಿ ಬಹಳ ವರ್ಷಗಳ ನಂತರ ಚರ್ಯಾಶಿರೋಮಣಿ ಮುನಿಶ್ರೀ 108 ವಿದಿತಸಾಗರ ಮಹಾರಾಜರ ಸಾನಿಧ್ಯದಲ್ಲಿ ಚಾತುರ್ಮಾಸ ಜರುಗಿತು. ಅವರು ನಗರಕ್ಕೆ ಆಗಮಿಸಿದ ದಿನದಿಂದ ಈವರೆಗೆ ವಿಶೇಷ ಪೂಜಾ ವಿಧಾನಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಿರಂತವಾಗಿ ನಡೆಯುತ್ತಿದ್ದು, ಮುನಿಗಳು ಹಾವೇರಿ ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ವಿಹಾರ ಮಾಡುವ ಮೂಲಕ ಜೈನ್ ಧರ್ಮದವರಿಗೆ ಧರ್ಮದರ್ಶನ ಮಾಡಿಸುತ್ತಿದ್ದಾರೆ.
ಗುರುಪಾಸ್ತಿ, ಸ್ವಾಧ್ಯಾಯ, ಸಂಯಮ, ತಪ ಮತ್ತು ದಾನ ಇವುಗಳು ಗೃಹಸ್ಥರ ಷಟ್ ಕ್ರಿಯೆಗಳಾಗಿವೆ. ಈ ಷಟ್ ಕ್ರಿಯೆಗಳಲ್ಲಿ ದೇವಪೂಜೆ ಮೊದಲನೆಯದು, ವೀತರಾಗ ಭಗವಂತರ ಪೂಜೆಯನ್ನು ಶ್ರಾವಕರು ಸ್ವತಃ ಪ್ರತಿದಿನ ಮಾಡಬೇಕು. ಈ ಎಲ್ಲ ವಿಷಯಗಳ ಬಗ್ಗೆ ಮುನಿಗಳು ಅತ್ಯಂತ ಮನಮುಟ್ಟುವಂತೆ ತಿಳಿಸುತ್ತಿದ್ದಾರೆ. ಪ್ರತಿಯೊಬ್ಬರೂ ಪ್ರತಿದಿನ ಜಿನಮಂದಿರಕ್ಕೆ ಆಗಮಿಸಬೇಕು ಹಾಗೂ ಶ್ರಾವಕರು ಭಗವಂತರ ಅಭಿಷೇಕ ಮಾಡಬೇಕು ಎಂದು ತಿಳುವಳಿಕೆ ನೀಡುತ್ತಿದ್ದಾರೆ.
ಪೂಜಾಕ್ರಮ, ಪೂಜೆಗೆ ಯಾವ ವಸ್ತ್ರ ಹಾಗೂ ಮುನಿಗಳಿಗೆ ಆಹಾರ ಕೊಡುವಾಗ ಯಾವ ವಸ್ತ್ರ ಧರಿಸಬೇಕು ಎಂದು ತಿಳುವಳಿಕೆ ನೀಡುತ್ತಿದ್ದಾರೆ. ಒಟ್ಟಾರೆ ಮುನಿಗಳು ಮಕ್ಕಳಿಂದಹಿಡಿದು ವಯೋವೃದ್ಧರವರೆಗೆ ಎಲ್ಲರಿಗೂ ಧರ್ಮದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಮುನಿಗಳು ಸಮಯಕ್ಕೆ ಬಹಳ ಒತ್ತು ನೀಡುತ್ತಾರೆ, ಪೂಜೆಗಳನ್ನು ನಿಗದಿತ ಸಮಯಕ್ಕೆ ಆರಂಭಿಸುತ್ತಾರೆ ಹಾಗೂ ಪ್ರವಚನದ ಸಮಯಕ್ಕೆ ಸರಿಯಾಗಿ ಪ್ರವಚನ ಆರಂಭಿಸುತ್ತಾರೆ.
ಮುನಿಶ್ರೀ 108 ವಿದಿತಸಾಗರ ಮಹಾರಾಜರ ಪ್ರೇರಣೆಯಿಂದ ಇದೇ ಡಿಸೆಂಬರ್ 11 ರಿಂದ 21ರವರೆಗೆ ಹಾವೇರಿ ನಗರದಲ್ಲಿ ಮೊದಲಬಾರಿಗೆ ಬೃಹತ್ ಶ್ರೀ ಸಿದ್ಧಚಕ್ರ ಮಹಾಮಂಡಲ ವಿಧಾನ ಮಹೋತ್ಸವ ಸಮಿತಿ ಹಾಗೂ ಹಾವೇರಿಯ ಭಗವಾನ ಶ್ರೀ 1008 ನೇಮಿನಾಥ ದಿಗಬಂದ ಜೈನ ಮಂದಿರ ಕಮೀಟಿ ಸಹಯೋಗದಲ್ಲಿ “ ಬೃಹತ್ ಸಿದ್ಧಚಕ್ರ ಆರಾಧನ ಮಹಾಮಂಡಲ ವಿಧಾನ ಮಹೋತ್ಸವ” ಜರುಗಲಿದೆ.
ಭಗವಂತರಿಗೆ ಅಭಿಷೇಕ: ಚಾತುರ್ಮಾಸ ಸಮಯದಲ್ಲಿ ಚರ್ಯಾಶಿರೋಮಣಿ ಮುನಿಶ್ರೀ 108 ವಿದಿತಸಾಗರ ಮಹಾರಾಜರ ಸಾನಿಧ್ಯದಲ್ಲಿ ಪ್ರತಿ ದಿನ ಬೆಳಿಗ್ಗೆ 6 ಗಂಟೆಗೆ ಜಿನಭಗವಂತರಿಗೆ ಅಭಿಷೇಕ, ಶಾಂತಿಧಾರೆ ಸೇರಿದಂತೆ ವಿವಿಧ ಪೂಜಾ ವಿಧಾನಗಳು ಜರುಗಿದವು. ದಶಲಕ್ಷಣ ಪರ್ವವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಧಾರ್ಮಿಕ ಸಂಸ್ಕಾರ ಶಿಬಿರ: ಮುನಿಶ್ರೀ 108 ವಿದಿತಸಾಗರ ಮಹಾರಾಜರ ಪ್ರೇರಣೆ ಮತ್ತು ಪರಮ ಪಾವನ ಸಾನಿಧ್ಯದಲ್ಲಿ ಬೃಹತ್ ಧಾರ್ಮಿಕ ಸಂಸ್ಕಾರ ಶಿಬಿರ ಜರುಗಿತು. ಪ್ರತಿಮಾಧಾರಿಗಳಾದ ಸಿದ್ಧಗೌಡ ಪಾಟೀಲ, ಹಾರೋಗೇರಿ, ಬ್ರ.ಸಾಧನ ದೀದಿ, ಪರಿಮಳ ಮೋಹನ, ಬೆಳ್ಳೂರು, ಜಯಕುಮಾರ ಬಯ್ಯಾಜಿ, ಮಹಾವೀರ ಬಯ್ಯಾಜಿ ಅವರ ನೇತೃತ್ವದಲ್ಲಿ ಜೈನ ಧರ್ಮದ ತತ್ವಗಳನ್ನು ಶ್ರಾವಕರ ಆಚಾರ, ವಿಚಾರಗಳ ಸಂಸ್ಕಾರ, ಜ್ಞಾನ, ಪೂಜೆ ಕ್ರಮಗಳನ್ನು ಮಕ್ಕಳದಿಂದ ಹಿಡಿದು ಎಲ್ಲ ವಯೋಮಾನದವರಿಗೆ ನೀಡಲಾಯಿತು.
ಮುನಿಗಳ ಚಾತುರ್ಮಾಸ : ಮುನಿಶ್ರೀ 108 ವಿಧಿತಸಾಗರ ಮಹಾರಾಜರ ಸಾನಿಧ್ಯದಲ್ಲಿ 2019ರಲ್ಲಿ ಮಧ್ಯ ಪ್ರದೇಶದ ಭೂಪಾಲ್, 2020ರಲ್ಲಿ ಉತ್ತರ ಪ್ರದೇಶದ ಲಲಿತಪುರ, 2021ರಲ್ಲಿ ಮಹಾರಾಷ್ಟ್ರದ ಚಂದೂರ ರೈಲ್ವೆ, 2022ರಲ್ಲಿ ಕರ್ನಾಟಕ ರಾಜ್ಯದ ಬೋರಗಾಂವ, 2023ರಲ್ಲಿ ಹಳಸಸಿ, 2024ರಲ್ಲಿ ಹಾರಿಕೆಯಲ್ಲಿ ಹಾಗೂ 2025 ರಲ್ಲಿ ಹಾವೇರಿ ನಗರದಲ್ಲಿ 7ನೇ ಚಾತುರ್ಮಾಸ ಜರುಗಿತು. ಕನ್ನಡ ಭಾಷೆಯಷ್ಟೇ ಹಿಂದಿ ಭಾಷೆಯನ್ನು ಅತ್ಯಂತ ನಿರರ್ಗಳವಾಗಿ ಮಾತನಾಡುತ್ತಾರೆ. ಅವರ ಪ್ರವಚನ ಕೇಳುವುದೇ ಒಂದು ಸೌಭಾಗ್ಯ.
ಚರ್ಯಾಶಿರೋಮಣಿ ಮುನಿಶ್ರೀ 108 ವಿದಿತಸಾಗರ ಮಹಾರಾಜರು ಜ್ಞಾನದ ಭಂಡಾರವಾಗಿದ್ದಾರೆ. ಮಕ್ಕಳಿಗೆ ಬಾಲ್ಯದಲ್ಲೇ ಧರ್ಮ ಮತ್ತು ಸಂಸ್ಕಾರಗಳನ್ನು ನೀಡಬೇಕು ಎಂದು ಉಪದೇಶ ನೀಡುತ್ತಿದ್ದಾರೆ. ಧರ್ಮದ ಉಳಿವಿಗೆ ಎಲ್ಲರೂ ಒಟ್ಟಾಗಿ ಧರ್ಮದ ಆಚರಣೆಗಳಲ್ಲಿ ತೊಡಗಿಕೊಳ್ಳಬೇಕು ಎಂದು ಶ್ರಾವಕ ಮತ್ತು ಶ್ರಾವಕಿಯರಿಗೆ ತಿಳುವಳಿಕೆ ನೀಡುತ್ತಿದ್ದಾರೆ. ಇಂತಹ ಮಹಾರಾಜರ ಪಾವನ ಸಾನಿಧ್ಯ ಹಾವೇರಿ ಜೈನ ಧರ್ಮದವರಿಗೆ ದೊರತಿರುವುದು ಪರಮ ಸೌಭಾಗ್ಯವಾಗಿದೆ. ಸಮಸ್ತ ಶ್ರಾವಕ ಮತ್ತು ಶ್ರಾವಕಿಯರು ಚರ್ಯಾಶಿರೋಮಣಿ ಮುನಿಶ್ರೀ 108 ವಿದಿತಸಾಗಾರರ ದರ್ಶನ ಮಾಡುವ ಮೂಲಕ ಪುಣ್ಯದ ಲಾಭ ಪಡೆದುಕೊಳ್ಳಬೇಕು.
- ದೇವಕಿ ಎಸ್.ಉಂದ್ರಿ, ಹಾವೇರಿ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 