ಧಾರವಾಡ.10: ಕರ್ನಾಟಕ ಸರಕಾರ ಪ್ರಸಕ್ತ ಸಾಲಿನಿಂದ ಆರಂಭಿಸಿರುವ ಸರಕಾರಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಪ್ರವೇಶ ಪ್ರಾರಂಭವಾಗಿದ್ದು, ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಭೇಟಿ ನೀಡಿ, ಪರಿಶೀಲಿಸಿದರು.
ಆಲೂರು ವೆಂಕಟರಾವ್ ವೃತ್ತದ ಮಹಿಳಾ ಶಿಕ್ಷಕಿಯರ ತರಬೇತಿ ಶಾಲೆ ಆವರಣದಲ್ಲಿರುವ ಸರಕಾರಿ ಉದರ್ು ಪ್ರಾಥಮಿಕ ಶಾಲೆಯಲ್ಲಿ ಆರಂಬಿಸಲಾಗಿರುವ ಆಂಗ್ಲ ಮಾದ್ಯಮ ಶಾಲೆಗೆ ಭೇಟಿ ನೀಡಿ, ಒಂದನೇ ವರ್ಗಕ್ಕೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರ ಪಾಠ, ಪಠ್ಯ ಹಾಗೂ ದಿನಚರಿ ಕುರಿತು ಮಾತನಾಡಿಸಿದರು. ಈ ಸಂದರ್ಭದಲ್ಲಿ ಶಾಲಾ ಪ್ರಧಾನ ಗುರುಮಾತೆ ಎಸ್.ಎಂ.ಖಾನ ಹಾಗೂ ಸಹ ಶಿಕ್ಷಕಿಯರಾದ ಬಿ.ಎಸ್.ಯರಗಟ್ಟಿ ಮತ್ತು ಕ್ಯೂ.ಎ.ತರಗಾರ ಮಾಹಿತಿ ನೀಡಿದರು.
ನಂತರ ಕಮಾಲಪೂರದ ಸರಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆ ನಂ-04ರಲ್ಲಿ ಆರಂಭವಾಗಿರುವ ಆಂಗ್ಲ ಮಾಧ್ಯಮ ಶಾಲೆಗೆ ಭೇಟಿ ನೀಡಿ, ವಿದ್ಯಾಥರ್ಿಗಳಿಂದ, ಶಿಕ್ಷಕರಿಂದ ಮತ್ತು ಪಾಲಕರಿಂದ ಆಂಗ್ಲ ಮಾಧ್ಯಮ ಶಾಲೆಯ ಕುರಿತು ಮಾಹಿತಿ ಪಡೆದರು. ಪ್ರಧಾನ ಗುರುಮಾತೆ ಎಸ್.ಡಿ.ಇಳಕಲ್ಲ ಹಾಗೂ ಸಹ ಶಿಕ್ಷಕಿ ಆರ್.ಎಸ್.ಸಕ್ಕರನಾಯ್ಕರ ವಿದ್ಯಾಥರ್ಿಗಳ ಪ್ರವೇಶ, ದಾಖಲಾತಿ ಕುರಿತು ವಿವರ ನೀಡಿದರು.
ಪರಿಶೀಲನೆ ನಂತರ, ಜಿಲ್ಲಾಧಿಕಾರಿಗಳು ಆಂಗ್ಲ ಮಾಧ್ಯಮಕ್ಕೆ ಒಂದನೆ ವರ್ಗಕ್ಕೆ ಪ್ರವೇಶ ಪಡೆದ ಮಕ್ಕಳಿಗೆ ಪಠ್ಯ ಪುಸ್ತಕ ಬರುವವರೆಗೆ ಬೇರೆ ಪುಸ್ತಕಗಳನ್ನು ಬಳಸಿ ಸಾಮಾನ್ಯ ಮಾಹಿತಿ ನೀಡಿ ಮತ್ತು ಆಂಗ್ಲ ಮಾಧ್ಯಮಕ್ಕೆ ಪ್ರವೇಶ ಪಡೆಯುವ ಮಕ್ಕಳ ಪಠ್ಯ ಪುಸ್ತಕವು ಕನ್ನಡ ಮತ್ತು ಆಂಗ್ಲ ಭಾಷೆ ಸೇರಿ ದ್ವಿಭಾಷೆಯಲ್ಲಿ ಇರುತ್ತದೆ. ಇದು ಪಾಲಕರು ಸಹ ಮಕ್ಕಳಿಗೆ ಓದಲು, ಬರೆಯಲು ನೆರವಾಗುತ್ತದೆ. ಈ ಕುರಿತು ಪಾಲಕರಿಗೆ ತಿಳುವಳಿಕೆ ನೀಡಬೇಕು ಎಂದು ಶಿಕ್ಷಣ ಇಲಾಖೆ ಉಪನಿದರ್ೇಶಕರಿಗೆ ಸೂಚಿಸಿದರು.
ನಂತರ ಎಸ್.ಡಿ.ಎಂ.ಸಿ. ಸದಸ್ಯರನ್ನು ಹಾಗೂ ಪಾಲಕರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಜಿಲ್ಲೆಯಲ್ಲಿ ಒಟ್ಟು 28 ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಲಾಗಿದೆ.
ಪ್ರತಿ ವಿಧಾನಸಭೆಗೆ ನಾಲ್ಕು ಶಾಲೆಗಳಿಗೆ ಮಂಜೂರಾತಿ ನೀಡಲಾಗಿದೆ. ಶಾಲಾ ಮೂಲಸೌಕರ್ಯ ಪರಿಗಣಿಸಿ 1ನೇ ವರ್ಗಕ್ಕೆ ಕನಿಷ್ಠ 15 ರಿಂದ ಗರಿಷ್ಠ 52 ವಿದ್ಯಾಥರ್ಿಗಳ ಪ್ರವೇಶಕ್ಕೆ ಅನುಮತಿ ಇದೆ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾಥರ್ಿಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಆಗುತ್ತಿವೆ. ಒಟ್ಟು 840 ವಿದ್ಯಾಥರ್ಿಗಳಿಗೆ ಮಾತ್ರ ಪ್ರವೇಶ ಪಡೆಯಲು ಪ್ರಸಕ್ತ ಸಾಲಿಗೆ ಅವಕಾಶವಿದೆ. ಒಟ್ಟು 48 ಜನ ಇಂಗ್ಲಿಷ್ ಸಹಶಿಕ್ಷಕ, ಶಿಕ್ಷಕಿಯರನ್ನು ಡೈಯಟ್ದಲ್ಲಿ ತರಬೇತಿ ಕೊಡುವ ಮೂಲಕ ಇಂಗ್ಲಿಷ್ ಮಾದ್ಯಮ ಶಾಲೆಗಳಿಗೆ ಶಿಕ್ಷಕರನ್ನು ಸಿದ್ಧಗೊಳಿಸಲಾಗಿದೆ ಎಂದು ಅವರು ಹೇಳಿದರು.
1ನೇ ವರ್ಗಕ್ಕೆ ವಿದ್ಯಾಥರ್ಿಗಳ ಕಲಿಕೆಗಾಗಿ ಸರಳ ವಿಷಯವಿರುವ ಕನ್ನಡ ಅಥವಾ ಉದರ್ು(ಉದರ್ು ಶಾಲೆಗಳಲ್ಲಿ ಆರಂಭವಾಗಿರುವ ಇಂಗ್ಲಿಷ ಮಾದ್ಯಮ ವಿದ್ಯಾಥರ್ಿಗಳಿಗಾಗಿ), ಪರಿಸರ ಅಧ್ಯಯನ, ಸರಳ ಗಣಿತ ಮತ್ತು ಇಂಗ್ಲಿಷ ಪಠ್ಯಪುಸ್ತಕಗಳನ್ನು ನೀಡಲಾಗುತ್ತಿದೆ. ಒಟ್ಟು 4 ಪಠ್ಯಗಳಿದ್ದು, ಭೋದಿಸಲು ಸಮರ್ಥ ಶಿಕ್ಷಕರನ್ನು ನೇಮಿಸಲಾಗಿದೆ.
ನೂತನ ಆಂಗ್ಲ ಮಾಧ್ಯಮ ಶಾಲೆಗಳನ್ನು ಈಗಿರುವ ಪ್ರಾಥಮಿಕ ಶಾಲೆಗಳಲ್ಲಿಯೇ ಆರಂಭಿಸಲಾಗಿದೆ. ಯಾವುದೇ ಶಾಲೆಗಳನ್ನು ಮುಚ್ಚುವುದಿಲ್ಲ. ಆಂಗ್ಲ ಭಾಷೆಯನ್ನು ಕಲಿಯಲು ಆಸಕ್ತಿಯಿರುವ ವಿದ್ಯಾಥರ್ಿಗಳ ಅನುಕೂಲಕ್ಕಾಗಿ ಸರಕಾರ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಿದೆ. ಎಲ್ಲ ವಿದ್ಯಾಥರ್ಿಗಳಿಗೆ ಯಾವುದೇ ಶುಲ್ಕವಿಲ್ಲ. ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಬೂಟು, ಸಾಕ್ಸ್ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಗಜಾನನ ಮನ್ನಿಕೆರಿ ಮಾತನಾಡಿ, ಸರಕಾರಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಸಿಗುತ್ತಿದ್ದು, ಪಾಲಕರು ಖಾಸಗಿ ಶಾಲೆಗಳಿಂದ ಸರಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸುತ್ತಿದ್ದಾರೆ ಎಂದು ಹೇಳಿದರು.
ಮತ್ತು ಧಾರವಾಡ ಜಿಲ್ಲೆಯಲ್ಲಿ 8 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಸಹ ಆರಂಭಿಸಲಾಗಿದೆ. ಕನರ್ಾಟಕ ಪಬ್ಲಿಕ ಶಾಲೆಗಳಲ್ಲಿ ಎಲ್.ಕೆ.ಜಿ ಯಿಂದ ಪಿಯುಸಿ ವರೆಗೆ ಒಂದೆ ಆವರಣದಲ್ಲಿ ತರಗತಿಗಳು ನಡೆಯುತ್ತವೆ. ಇಲ್ಲಿನ ಎಲ್ಲ ವಿದ್ಯಾರ್ಥಿಗಳಿಗೆ , ಶಿಕ್ಷಕರಿಗೆ ಸಾಮಾನ್ಯ ವೆಳಾಪಟ್ಟಿ ಮಾಡಲಾಗಿದೆ. ಎಲ್ಲ ಹಂತದ ಶಿಕ್ಷಕರ ಅನುಭವ, ಜ್ಞಾನವು ಎಲ್ಲ ವರ್ಗದ ಮಕ್ಕಳಿಗೂ ದೊರಕಬೇಕೆಂದು ಇದರ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ.ಖಾಜಿ, ಉಪನಿದೇರ್ಶಕ ಕಚೇರಿ ಅಧಿಕಾರಿ ಶಿವಲಿಲಾ ಕಳಸನ್ನವರ ಉಪಸ್ಥಿತರಿದ್ದರು.