ರೇಡಿಯೋ ಗ್ರಾಮೀಣ ಜನರ ಜೀವನಾಡಿ: ಆರ್‌.ಜೆ.ಚೇತನ

Visit of B.Ed trainees to Banuli Centre

ಬಾನುಲಿ ಕೇಂದ್ರಕ್ಕೆ ಬಿ.ಎಡ್ ಪ್ರಶಿಕ್ಷಣಾರ್ಥಿಗಳ ಭೇಟಿ 

ಹುಕ್ಕೇರಿ 10: ರೇಡಿಯೋ ಪತ್ರಿಕೆಯ ನಂತರದ ಮಾಧ್ಯಮವಾಗಿ ಬೆಳೆದು ಬಂದು, ತನ್ನದೇ ಆದ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಒಂದು ಸಮಯದಲ್ಲಿ ಮನೆಯಲ್ಲಿ ಯಾರೂ ಸಮಯವನ್ನು  ಗಡಿಯಾರದಲ್ಲಿ ನೋಡುತ್ತಿರಲಿಲ್ಲ ಯಾಕೆಂದರೆ ರೇಡಿಯೋ ಕಾರ್ಯಕ್ರಮದ ಪ್ರಸ್ತುತಿ ಮೂಲಕ ಸಮಯದ ಅರಿವು ಜನರಿಗೆ ಆಗುತ್ತಿತ್ತು. ಅಷ್ಟರ ಮಟ್ಟಿಗೆ ರೇಡಿಯೋ ನಮ್ಮೆಲ್ಲರ ಜೀವನದ ಭಾಗವಾಗಿತ್ತು. ಆದರೆ ಮುಂದೆ ವಿವಿಧ ಮಾಧ್ಯಮಗಳ ಸ್ಪರ್ಧೆಯಲ್ಲಿ ರೇಡಿಯೋ ಹಿಂದುಳಿದಂತೆ ಕಂಡರೂ ಅದು  ಇನ್ನೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದೆ.  ಇವತ್ತಿಗೂ ಬಾನುಲಿ ಕೇಂದ್ರಗಳು ಗ್ರಾಮೀಣ ಭಾಗದ ಜೀವನಾಡಿಯಾಗಿವೆ ಎಂದು ಆರ್‌.ಜಿ. ಚೇತನ್ ಆಭಿಪ್ರಾಯಪಟ್ಟರು.  

ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಮ್ ನ ಮಹಿಳಾ ಕಲ್ಯಾಣ ಸಂಸ್ಥೆಯ “ಸ್ವಧಾರ” ವಸತಿ ಗೃಹದಲ್ಲಿ ಚಂದ್ರಗಿರಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯ ಬೆಳಗಾವಿಯ ಪ್ರಶಿಕ್ಷಣಾರ್ಥಿಗಳಿಗೆ ಮೂರು ದಿನಗಳ ಪೌರತ್ವ ತರಬೇತಿ ಶಿಬಿರದ ಅಂಗವಾಗಿ ಬಿ.ಎಡ್ ಪ್ರಶಿಕ್ಷಣಾರ್ಥಿಗಳು ನಮ್ಮೂರ ಬಾನುಲಿ ಸುಮದಾಯ ರೇಡಿಯೋ ಹಾಗೂ ಅದರ ಉಪಯೋಗ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.  ಮುಂದುವರೆದು ಮಾತನಾಡಿ  ಅಧುನಿಕವಾಗಿ ಬೆಳೆದ ಹಾಗೆ ರೇಡಿಯೋ ಸಹ ತನ್ನ ರೂಪವನ್ನು ಬದಲಿಸಿಕೊಳ್ಳುತ್ತ ಬರುತ್ತಿದೆ. ಮೊದಲು  ಕೇವಲ ಪ್ರಿಕ್ವೆನ್ಸಿ ಸೆಟ್ ಮಾಡಿ ಕೇಳುವಂತಹ ರೇಡಿಯೋಗಳನ್ನು ನೋಡಬಹುದಿತ್ತು. ಕಾಲಾನಂತರ ಇಂಬಿಲ್ಟ್‌ ಫೋನನಲ್ಲಿ  ರೇಡಿಯೋಗಳು  ಬರುವುದಕ್ಕೆ ಪ್ರಾರಂಭಿಸಿದವು.  ಈಗ ಅಪ್ಲಿಕೇಷನ್ಗಳ ಮೂಲಕ ಇಂಟರನೆಟ್  ರೇಡಿಯೋಗಳನ್ನು ಸಹ ನೋಡಬಹುದಾಗಿದೆ. ಹೀಗಾಗಿ ರೇಡಿಯೋದ ರೂಪ ಬದಲಾದರೂ ಅದು ತನ್ನ  ಅಸ್ತಿತ್ವವನ್ನು ಹಾಗೆ ಉಳಿಸಿಕೊಂಡು ಬಂದಿದೆ ಎಂದರು. 

ಪ್ರಶಿಕ್ಷಣಾರ್ಥಿಗಳು ವಿವಿಧ ಜನಪದ ಹಾಗೂ ಭಾವ ಗೀತೆಗಳ ಕಾರ್ಯಕ್ರಮವನ್ನು ನೀಡಿದರು.  ಈ ಸಂದರ್ಭದಲ್ಲಿ ಚಂದ್ರಗಿರಿ ಮಹಿಳಾ ಶಿಕ್ಷಣ  ಮಹಾ ವಿದ್ಯಾಲಯದ ಸಹಾಯಕ ಪ್ರಾಧ್ಯಪಕರಾದ ಜಯಶ್ರೀ ಕೆಂಗೇರಿ, ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರದ ಆರ್‌.ಜೆ. ಚೇತನ, ನಮ್ಮೂರ ಬಾನುಲಿಯ ತಂತ್ರಜ್ಞರಾದ ಸಿದ್ಧಗೌಡ ಹಾಗೂ ಚಂದ್ರಗಿರಿ ಮಹಿಳಾ ಸಿಕ್ಷಣ  ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.