ತಡವಲಗಾ ಹಿರೇರೂಗಿ ಗ್ರಾ ಪಂ ಮಾಹದೇವಪ್ಪ ಏವೂರ ಬೇಟಿ

ತಡವಲಗಾ ಹಿರೇರೂಗಿ ಗ್ರಾ ಪಂ ಮಾಹದೇವಪ್ಪ ಏವೂರ ಬೇಟಿ Visit by Mahadevappa Evur to the Tadalaga-Hirerugi Gram Panchayat

ಲೋಕದರ್ಶನ ವರದಿ 

ಇಂಡಿ 30 : ತಾಲ್ಲೂಕಿನ ತಡವಲಗಾ ಹಿರೇರೂಗಿ ಗ್ರಾಮ ಪಂಚಾಯಿತಿಗಳಿಗೆ ಇಂದು ಇಂಡಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾದೇವಪ್ಪ ಏವೂರ ಹಾಗೂ ಸಾಹಯಕ ನಿರ್ದೇಶಕರಾದ ಸಂಜಯ ಖಡೆಗೆಕರ    ತಾಲೂಕಿನ ತಡವಲಗಾ ಹಾಗೂ ಹಿರೇರೂಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿಬಿ ಜಿ ರಾಮ ಜೀ  ಯೋಜನೆ ಅಡಿಯಲ್ಲಿ ನಡೆಯುತ್ತಿರುವ ಬಸಪ್ಪಾ ಗದ್ಯಾಳ  ರವರ ಹೊಲದ ಹತ್ತಿರ ಬಾಂದರ ಹೂಳು ತೆಗೆಯುವ ಕಾಮಗಾರಿ  ಸ್ಥಳಕ್ಕೆ ಭೇಟಿ ನೀಡಿದರು.ಈ ಸಮಯದಲ್ಲಿ ಕೂಲಿಕಾರರೊಂದಿಗೆ ಸಂವಾದ ನಡೆಸಿ ಮಾತನಾಡಿ ವಿಬಿ ಜೀ ರಾಮ ಜೀ ಯೋಜನೆಯ ಕುರಿತು ಕೂಲಿಕಾರರಿಗೆ  ಸ್ವ ವಿವರ ಮಾಹಿತಿಯನ್ನು ತಿಳಿಸಿದರು,

ಆರ್ಥಿಕ ವರ್ಷದಲ್ಲಿ ಪ್ರತಿ ಕುಟುಂಬಕ್ಕೆ 125 ದಿನ ಕೆಲಸ ದೊರೆಯುತ್ತದೆ, ಕೂಲಿ ಮೊತ್ತ 382 ರೂ ದೊರೆಯುತ್ತದೆ ಹಾಗೂ ಒಂದು ಆರ್ಥಿಕ ವರ್ಷದಲ್ಲಿ ಒಟ್ಟು 47,750/-  ದೊರೆಯುತ್ತದೆ ಎಂದು ತಿಳಿಸಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸಕ್ಕೆ ಕರೆದುಕೊಂಡು ಬರುವಂತೆ ತಿಳಿಸಿದರು.ಸಂಜಯ ಖಡೆಗೆಕರ್ ಸಹಾಯಕ ನಿರ್ದೇಶಕರು   ಅವರು ಮಾತನಾಡಿ ಪ್ರತಿದಿನ ಕಡ್ಡಾಯವಾಗಿ 2 ಬಾರಿ ಎನ್ ಎಮ್ ಎಮ್ ಎಸ್ ಯ್ಯಾಫ್  ಮೂಲಕ ಹಾಜರಾತಿ ಹಾಕಬೇಕು. ಕೂಲಿಕಾರರು ಕಡ್ಡಾಯವಾಗಿ ಅಳತೆಗೆ ತಕ್ಕಂತೆ ಕೆಲಸ ಮಾಡಬೇಕು. ಗ್ರಾಮ ಕಾಯಕ ಮಿತ್ರರು ಪ್ರತಿದಿನವೂ ತಮ್ಮ ಕೂಲಿಕಾರರಿಗೆ ಕೆಲಸದ ಅಳತೆಯ ನೀಡಬೇಕು.

ಕಡ್ಡಾಯವಾಗಿ  ಎನ್ ಎಮ್ ಆರ್ ತೆಗೆದುಕೊಂಡ ಕೂಲಿಕಾರರು ಕೆಲಸಕ್ಕೆ ಹಾಜರಾಗಿ ಕೆಲಸ ನಿರ್ವಹಿಸಲು ತಿಳಿಸಲಾಯಿತು. ಕಾಮಗಾರಿ ಸ್ಥಳದಲ್ಲಿ ಶುದ್ಧ ಕುಡಿಯುವ ನೀರು ಮತ್ತು ಪ್ರಥಮ ಚಿಕಿತ್ಸೆ ಪೆಟ್ಟಿಗೆ ಒದಗಿಸಿರುವ ಕುರಿತು ಪರೀಶೀಲನೆ ನಡೆಸಿದರು. 09 ಜನ ಮಹಿಳೆಯರು 14 ಜನ ಪುರುಷರು ಸೇರಿ ಒಟ್ಟು 23  ಜನ ಕೂಲಿ ಕಾರರು ಕೆಲಸ ನಿರ್ವಹಿಸುತ್ತಿದ್ದಾರೆ.  ತದನಂತರ ಪಂಚಾಯತ ವ್ಯಾಪ್ತಿಯ  ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಬೇಟಿ ನೀಡಿ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಹಿರೇರೂಗಿ ಗ್ರಾಮ ಪಂಚಾಯಿತಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜ ಬಬಲಾದ, ಹಾಗೂ ತಡವಲಗಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಡೊಳ್ಳಿ ಹಾಗೂ ಐ ಇ ಸಿ ಸಂಯೋಜಕರು ರಾಮಗೌಡ ಸರಬಡಗಿ, ತಾಂತ್ರಿಕ ಸಹಾಯಕರು  ಈರಣ್ಣ ಇಂಡಿ, ಗ್ರಾಮ ಕಾಯಕ ಮಿತ್ರ   ಸಂಗೀತಾ ಮಠಪತಿ, ಮಿಣಾಕ್ಷೀ ಕಟ್ಟಿ ಬೇರ್ ಪೂಟ್ ಟೆಕ್ನಿಷನ್ ಮಲ್ಲಿಕಾರ್ಜುನ ನಾವಿ, ಗ್ರಾಮ ಪಂಚಾಯಿತಿ  ಸಿಬ್ಬಂದಿಗಳು,ಕಾಯಕ ಬಂದುಗಳು ಹಾಗೂ ಕೂಲಿ ಕಾರ್ಮಿಕರು ಹಾಜರಿದ್ದರು.